ಲೋಕದರ್ಶನವರದಿ
ಮುಧೋಳ೦೫:ಸರ್ಕಾರಿ ಕಾಲೇಜಿನಲ್ಲಿ ಓದುತ್ತಿರುವ ಪ್ರಥಮ ವರ್ಷ ಪದವಿ ಪಡೆಯುತ್ತಿರುವ ವಿದ್ಯಾರ್ಥಿ ಗಳಿಗೆ ಕಲಿಕಾ ಸಾಮಾಗ್ರಿಯಾಗಿ ಉಚಿತ ಲ್ಯಾಪ್ಟಾಪ್ನ್ನು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವಿತರಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ನಲ್ಲಿ ಉಚಿತ ಲ್ಯಾಪ್ಟಾಪ್ ವಿತರಿಸಿ ಮಾತನಾಡಿ,ರಾಜ್ಯದ ಸುಮಾರು 1.10ಲಕ್ಷ ವಿದ್ಯಾಥಿಗಳಿಗೆ ಅಂದಾಜು 300 ಕೋಟಿ ರೂ. ವೆಚ್ಚದಲ್ಲಿ ಲ್ಯಾಪ್ಟಾಪ್ ವಿತರಿಸುವ ಮೂಲಕ ವಿದ್ಯಾಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕೆನ್ನುವ ಉದ್ದೆಶದಿಂದ ಬಿ.ಜೆ.ಪಿ ಸಕರ್ಾರ ಈ ನಿರ್ಣಯ ತೆಗೆದುಕೊಂಡಿದೆ ಎಂದು ಕಾರಜೋಳ ವಿವರಿಸಿದರು. ಸುಮಾರು 30,000 ಬೆಲೆ ಬಾಳುವ ಈ ಉತ್ತಮ ದರ್ಜೆಯ ಲ್ಯಾಪ್ಟಾಪ್ನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು.
ಈ ಹಿಂದಿನ ಸಮ್ಮಿಶ್ರ ಸರ್ಕಾರ ಕೇವಲ ಘೋಷಣೆ ಮಾತ್ರ ಮಾಡಿತ್ತು.
ಆದರೆ ಬಿ.ಜೆ.ಪಿ ಸರ್ಕಾರ ಅನುಷ್ಠಾನಗೋಳಿಸಿದೆ ಎಂದು ಅಭಿಮಾನದಿಂದ ಹೇಳಿದರು. ಪ್ರಾಚಾರ್ಯ ಎನ್. ಎಲ್. ತೆರದಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆ ಮೇಲೆ ಜಿಲ್ಲಾ ಬಿ.ಜೆ.ಪಿ ಉಪಾಧ್ಯಕ್ಷ ಬಿ.ಎಚ್. ಪಂಚಗಾಂವಿ, ನಗರ ಅಧ್ಯಕ್ಷ ಗುರುರಾಜ ಕಟ್ಟಿ, ಗ್ರಾಮಿಣ ಅಧ್ಯಕ್ಷ ಕೆ.ಆರ್.ಮಾಚಪ್ಪನವರ, ರನ್ ಶುಗಸರ್್ ಅಧ್ಯಕ್ಷ ಆರ್.ಎಸ್. ತಳೇವಾಡ, ಜಿ.ಪಂ.ಸದಸ್ಯ ಬಿ.ಜಿ. ಪಾಟೀಲ, ಶಿವನಗೌಡ ನಾಡಗೌಡ, ಕಲ್ಲಪ್ಪ ಸಬರದ, ಎ.ಬಿ.ಘೊರ್ಪಡೆ, ತಹಶೀಲ್ದಾರ ಎಸ್.ಬಿ. ಬಾಡಗಿ, ಪಿ.ಎಸ್.ಆಯ್ ಮಲ್ಲಿಕಾರ್ಜುನ ಬಿರಾದಾರ, ಉಪಸ್ಥಿತರಿದ್ದರು. ಪ್ರೋ.ರೇಖಾಮಣಿ ಸ್ವಾಗತಿಸಿದರು, ಪ್ರೋ.ಸಂತೋಷ ಕರಿಜಾಡರ ನಿರೂಪಿಸಿದರು ಮತ್ತು ಗ್ರಂಥಪಾಲಕ ಸಂಜಯ ಕುಂಬಾರ ವಂದಿಸಿದರು.