ಕಬ್ಬು ನುರಿಸುವ ಹಂಗಾಮಿನ ಕೇನ್ ಕ್ಯಾರಿಯರ್ ಪೂಜೆ
Cane Carrier Puja during the sugarcane harvesting season
ಮಹಾಲಿಂಗಪುರ 13 : ಸಮೀಪದ ಸಮೀರವಾಡಿಯ ಸೋಮಯ್ಯ ಗೋದಾವರಿ ಫ್ಯಾಕ್ಟರಿ ಶುಗರ್ ಮಿಲ್ ಲಿಮಿಟೆಡ್‌ನ ಘಟಕದಲ್ಲಿ 2025- 26ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನ ಕೇನ್ ಕ್ಯಾರಿಯರ್ ಪೂಜೆ ಯಶಸ್ವಿಯಾಗಿ ನಡೆಯಿತು. ಮುಖ್ಯ ಕಾರ್ಯನಿರ್ವಾಹಕ ಬಿಆರ್ ಭಕ್ಷಿ ಮಾತನಾಡಿ, ಕಬ್ಬು ನುರಿಸುವ ಹಂಗಾಮು ಆರಂಭವಾಗಿದ್ದು, ನಮ್ಮ ಕಾರ್ಖಾನೆ ರೈತರಿಗೆ ಉತ್ತಮ ದರ ನೀಡುವುದಾಗಿ ಭರವಸೆ ನೀಡಿದೆ. ಕಬ್ಬಿನ ಬಿಲ್ ಪಾವತಿ,ಕಾರ್ಮಿಕರ ಸಂಬಳ, ಕಟಾವುದಾರರ ಬಿಲ್‌ಗೆ ಯಾವುದೇ ತೊಂದರೆ ಇರುವುದಿಲ್ಲ. ಎಲ್ಲರ ಸಹಕಾರದಿಂದ ಕಾರ್ಖಾನೆ ಅಭಿವೃದ್ಧಿ ಸಾಧಿಸಲಿದೆ. ಷೇರುದಾರರು,ರೈತರು, ಕಾರ್ಮಿಕರು ಮತ್ತು ಕಬ್ಬು ಕಟಾವುದಾರರ ಹಿತ ಗಮನಿಸಿ ಕಾರ್ಖಾನೆ ಮುನ್ನಡೆಸಲಾಗುವುದು ಕಬ್ಬು ಬೆಳೆಗಾರರು ಯಾವುದೇ ಗೊಂದಲಕ್ಕೆ ಒಳಗಾಗದೇ ಸಹಕಾರ ನೀಡಿ ಕಾರ್ಖಾನೆ ಬೆಳೆಸಬೇಕು ಎಂದರು.
ವಿಶೇಷ ಹೋಮ, ಯಜ್ಞಗಳಿಂದ ಪೂರ್ಣಾಹುತಿ ಪೂಜೆ ನಡೆಯಿತು. ನಿವೃತ್ತಿ ಪಡೆದ ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು. ಎತ್ತಿನ ಬಂಡಿ ಮೂಲಕ ಬಂದ ಕಬ್ಬಿಗೆ ಸ್ವಾಗತ ಕೋರಿ ಕಬ್ಬಿನ ಹಂಗಾಮು ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ, ಕಾರ್ಯದರ್ಶಿ ರಂಗನಗೌಡ ಪಾಟೀಲ, ಬಿ ಜಿ ಹೊಸೂರ, ಮಹಾಲಿಂಗಪ್ಪ ಸನದಿ, ಚಿನ್ನಪ್ಪ ಬಾಯಪ್ಪಗೊಳ, ಸುರೇಶ ಹಾದಿಮನಿ,ವಿಠ್ಠಲ ಹೊಸಮನಿ,ಲಕ್ಷ್ಮಣ ಕೂಡಲಗಿ, ಕೆಂಪಣ್ಣ ಕುರನಿಂಗ, ಆರ್ ಟಿ ಬುದ್ನಿ,ಪಾಂಡಪ್ಪ ಅಡವಿ,ಈರಣ್ಣ ಕಂಕನವಾಡಿ, ಗೀರೀಶ್ ಸಾರವಾಡ,ಲಕ್ಷ್ಮಣ ಹುಚರಡ್ಡಿ,ಕೆ ಸಿ ಕಂಕನವಾಡಿ, ಮಹಾದೇವ ನಾಡಗೌಡ, ಮಲ್ಲಪ್ಪ ಹುಲ್ಯಾಳ, ಭೀಮಸಿ ಮಗದುಮ, ಲಕ್ಷ್ಮಣ ಕಟ್ಟಿ, ಮಹಾದೇವ ನಾಯಕ, ಮಹಾಲಿಂಗ ಅಂಗಡಿ, ಕಾರ್ಖಾನೆ ಅಧಿಕಾರಿಗಳಾದ ದಿನೇಶ್ ಶರ್ಮಾ, ವಿ ಎಸ್ ಕಣಬೂರ, ಡಾ.ನಂದಕುಮಾರ,ವಿ ಕೆ ಕಿಲಾರೆ, ಡಾ.ವಿ ಪಿ ಕಣವಿ, ಎಂ ಕೆ ಚೌಸ್, ಡಿ ಎನ್ ಪಾಟೀಲ, ರಾಮಚಂದ್ರ ಸೋನವಾಲ್ಕರ,ಕೃಷ್ಣಾ ಗೌಡರ, ರವಿ ಭಾಗೋಜಿ, ಪಿ ಸಿ ಬಾಗೇವಾಡಿ,ಅರ್ಜುನ ಕೋಡಗ, ಅಮಿತ್ ತಿರಪಾಟಿ,ಸೋಮಶೇಖರ ಪೆಟಿಮನಿ ಸೇರಿದಂತೆ ರೈತರು ಮತ್ತು ಕಾರ್ಮಿಕರು ಭಾಗವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 