ಮೇಣಬತ್ತಿ ರ್ಯಾಲಿ

ಗದಗ 20: ಗದಗ ಜಿಲ್ಲೆಯಲ್ಲಿ ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಆಶಾ ಅಂಗನವಾಡಿ ಕಾರ್ಯಕರ್ತರು ಹಾಗೂ ಅಂಗನವಾಡಿ ಸಹಾಯಕಿಯರು, ಸ್ವಸಹಾಯ ಸಂಘದ ಕಾರ್ಯಕತರ್ಿಯರು, ಮೇಣದ ಭತ್ತಿ ರ್ಯಾಲಿಯ ಪ್ರಭಾತಪೇರಿ ಕಾರ್ಯಕ್ರಮ ಏರ್ಪಡಿಸಲಾಯಿತು. ಸದರಿ ಕಾರ್ಯಕ್ರಮಕ್ಕೆ ಗದಗ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳಾದ ಮಂಜುನಾಥ ಚವ್ಹಾಣ ಮೇಣದ ಭತ್ತಿ ಬೆಳಗುವ ಮೂಲಕ ಚಾಲನೆ ನೀಡಿದರು. ಹಾಗೂ ಸ್ವಚ್ಚತೆಯ ಕುರಿತು ಪ್ರತಿಜ್ಞಾ ವಿಧಿಯನ್ನು ಭೋದಿಸಿದರು. ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಪಂಚಾಯತ ಉಪಕಾರ್ಯದಶರ್ಿಗಳಾದ ಎಸ್. ಸಿ. ಮಹೇಶ ಸಹಾಯಕ ಕಾರ್ಯದಶರ್ಿಗಳಾದ. ಸಿ. ಆರ್. ಮುಂಡರಗಿ ಹಾಗೂ ಗದಗ ತಾಲೂಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಅಂಗನವಾಡಿ ಮೇಲ್ವಿಚಾರಕಿಯರು ಹಾಗೂ ಸ್ವಚ್ಚ ಭಾರತ ಮಿಷನ್ ಜಿಲ್ಲಾ ಸಮಾಲೋಚಕರಾದ ಕೃಷ್ಣಾ. ಎಲ್. ದೊಡ್ಡಮನಿ, ಹೆಚ್. ಎಫ್. ಕುಸಣ್ಣವರ ಹಾಗೂ ಸುರೇಶ ಕಪ್ಪತ್ತನವರ ಹಾಜರಿದ್ದರು.  ಪ್ರಭಾತಪೇರಿಯು ಜಿಲ್ಲಾ ಮುನ್ಸಿಪಲ್ ಸ್ಕೂಲ್ ಆವರಣದಿಂದ ಪ್ರಾರಂಭವಾಗಿ ಗಾಂಧಿ ಸರ್ಕಲ್, ಹಾಗೂ ಟಾಂಗಾಕೂಟ್ ವರೆಗೆ ಮೇಣದ ಭತ್ತಿ ರ್ಯಾಲಿಯನ್ನು ಏರ್ಪಡಿಸಿ ಕಾರ್ಯಕ್ರಮ ಮುಕ್ತಾಯ ಗೊಳಿಸಲಾಯಿತು.