22ರಂದು ಕ್ಯಾನ್ಸ್ರ ರೋಗ ಪತ್ತೆ ಮತ್ತು ಉಚಿತ ಆರೋಗ್ಯ ತಪಾಸಣೆ

ಲೋಕದರ್ಶನ ವರದಿ

ಬೆಳಗಾವಿ : ಇಲ್ಲಗೆ ಸಮೀಪದ ಅಲಾರವಾಡ ಗ್ರಾಮದಲ್ಲಿ ಜೈನ ಇಂಟರ್ನ್ಯಾಷನಲ್ ಟ್ರೆಡ್ ಆರ್ಗನೈಝೇಷನ ಜಿತೋ ಬೆಳಗಾವಿ ವಿಭಾಗದ ವತಿಯಿಂದ ರವಿವಾರ ಜುಲೈ 22ರಂದು ಕ್ಯಾನ್ಸ್ರ ರೋಗ ಪತ್ತೆ ಮತ್ತು ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿತೋ ಬೆಳಗಾವಿ ವಿಭಾಗದ ಅಧ್ಯಕ್ಷ ಸತೀಶ ಮೆಹತಾ ಅವರು ಇಂದಿಲ್ಲಿ ಹೇಳಿದರು.

ನಗರದಲ್ಲಿ ಶುಕ್ರವಾರ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಜಿತೋ ಸಂಸ್ಥೆ ಒಂದು ಸಾಮಾಜಿಕ ಸೇವಾ ಭಾವಿ ಸಂಸ್ಥೆಯಾಗಿದ್ದು, ಸಮಾಜದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡು ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಬಡ ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಶೈಕ್ಷಣಿಕ ನೆರವು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಸಂಸ್ಥೆ ನಡೆಸುತ್ತದೆ ಎಂದು ಅವರು ತಿಳಿಸಿದರು.

ಗ್ರಾಮೀಣ ಭಾಗದ ಜನರಲ್ಲಿ ಆರೋಗ್ಯ ದೃಷ್ಟಿಯಿಂದ ತಿಳುವಳಿಕೆ ಮೂಡಿಸುವುದು ಮತ್ತು ಗ್ರಾಮೀಣ ಜನರಿಗೆ ಅನಕೂಲವಾಗಲೆಂದು ಅಲಾರವಾಡ ಗ್ರಾಮದಲ್ಲಿ ಕ್ಯಾನರ್ ರೋಗ ಪತ್ತೆ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ವ್ಯಕ್ತಿಗಳ ಉಚಿತ ತಪಾಸಣೆ ನೀಡುವ ಮೂಲಕ ಅವರಿಗೆ ಸೂಕ್ತವಾದ ಚಿಕಿತ್ಸೆಯನ್ನು ಪಡೆಯುವಂತೆ ಸಲಹೆ ನೀಡಲಾಗುವುದು. ಕ್ಯಾನ್ಸರ್ ರೋಗ ಪತ್ತೆಗಾಗಿ ಒಂದು ವಿಶೇಷ ವಾಹನವನ್ನು ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದರು. 

ಅದಲ್ಲದೇ ಈ ಶಿಬಿರದಲಿ ಸ್ತ್ರೀರೋಗ, ಮಕ್ಕಳ ಆರೋಗ್ಯ, ಬೆನ್ನು ನೋವು, ಕುತ್ತಿಗೆ ನೋವು, ಮೊಣಕಾಲು, ಸಂಧಿವಾತ, ಮೂಳೆ ಸಾಂದ್ರತೆ, ಎಲುಬು ಕೀಲುಗಳ ತೊಂದರೆ, ಬಿ.ಪಿ.ಡಯಾಬೆಟಿಸ್ (ಮಧುಮೇಹ) ಸೇರಿದಂತೆ ಇನ್ನಿತರ ಕಾಯಿಲೆಗಳ ಬಗ್ಗೆ ಉಚಿತ ತಪಾಸಣೆ ನಡೆಸಲಾಗುವುದು. ಅದಲ್ಲದೇ ವಿವಾ ಫಮರ್ಾ ವತಿಯಿಂದ ಮೂರು ದಿನಗಳ ಔಷಧಿಯನ್ನು ಸಹ ಉಚಿತವಾಗಿ ನೀಡಲಾಗುವುದು ಎಂದು ಅವರು ತಿಳಿಸಿದರು. 

ಈ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಖ್ಯಾತ ವೈದ್ಯರಾದ, ಡಾ, ಗೋಮಟೇಶ ಕುಸನಾಳೆ, ಡಾ. ರಮೇಶ ದೊಡ್ಡಣ್ಣವರ, ಡಾ. ಶೈಲೇಶ ಉದಪುಡಿ, ಡಾ. ರೂಪಾ ಮಹಾಜನ, ಡಾ. ರಮೇಶ ತೇಜನ್ನವರ, ಡಾ. ಚೈತನ್ಯ ಖೆಮಲಾಪೂರೆ, ಡಾ. ಪ್ರೀಯಾ ಕುಲಕಣರ್ಿ, ಡಾ. ಜಯಪ್ರಕಾಶ, ಡಾ. ಕಿರಣ ಖೋತ ಮೊದಲಾದವು ಭಾಗವಹಿಸಿ ಜನರ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಈ ಶಿಬಿರ ಅಲಾರವಾಡ ಗ್ರಾಮದಲ್ಲಿ ನಡೆಯುತ್ತಿದ್ದು, ಕೇವಲ ಒಂದೇ ಗ್ರಾಮಕ್ಕೆ ಸೀಮಿತವಾಗಿಲ್ಲ. ಅಲಾರವಾಡ ಗ್ರಾಮದ ಅಕ್ಕ ಪಕ್ಕದ ಗ್ರಾಮದವರೂ ಸಹ ಈ ಶಿಬಿರದ ಲಾಭ ಪಡೆದುಕೊಳ್ಳಬಹುದು ಎಂದು ಅವರು ವಿವರಿಸಿದರು. 

ಪತ್ರಿಕಾಗೋಷ್ಟಿಯಲ್ಲಿ ಜಿತೋ ಉಪಾಧ್ಯಕ್ಷರಾದ ಮನೋಜ ಸಂಚೇತಿ, ರಾಹುಲ ಹಜಾರೆ, ಕಾರ್ಯದಶರ್ಿ ವಿಕ್ರಮ ಜೈನ, ಶಿಬಿರದ ಉಸ್ತುವಾರಿ ಪ್ರವೀಣ ಜೈನ, ನಿದರ್ೇಶಕರಾದ ಪುಷ್ಪಕ ಹನಮಣ್ಣವರ, ಕುಂತಿನಾಥ ಕಲಮನಿ ಸದಸ್ಯರಾದ ಹರ್ಷವಧನ ಇಂಚಲ, ಡಾ, ಕಿರಣ ಖೋತ, ಮೊದಲಾದವರು ಉಪಸ್ಥಿತರಿದ್ದರು.