ಬೆಳಗಾವಿ 15: ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಸವರ್ೊಚ್ಚ ನ್ಯಾಯಾಲಯ ಅಭಿಪ್ರಾಯ ವ್ಯಕ್ತ ಪಡಿಸಿದ್ದು, ಇದನ್ನು ಮರು ಪರಶೀಲನೆ ಮಾಡುವಂತೆ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗದ ಕೇಂದ್ರ ಸಕರ್ಾರದ ನೀತಿಯನ್ನು ಖಂಡಿಸಿ ಜಿಲ್ಲಾ ಗ್ರಾಮೀಣ, ಮತ್ತು ನಗರ ಜಿಲ್ಲಾ ಘಟಕದ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಯಲ್ಲಿ ಪ್ರತಿಭಟನಾ ಸಭೆ ನಡೆಸಿ ಕೇಂದ್ರ ಸಕರ್ಾರದ ಧೋರಣೆಯನ್ನು ಖಂಡಿಸಿದರು.
ಶನಿವಾರ ದಿನದಂದು ಕಾಂಗ್ರೆಸ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಗ್ರಾಮೀಣ ಜಿಲ್ಲಾ ಘಟಕದ ಅದ್ಯಕ್ಷ ವಿನಯ ನಾವಲಗಟ್ಟಿ ಮತ್ತು ನಗರ ಜಿಲ್ಲಾ ಘಟಕದ ಅದ್ಯಕ್ಷ ರಾಜು ಸೇಠ ನೇತ್ರತ್ವದಲ್ಲಿ ಕಾಂಗ್ರೆಸ್ ಪದಾಧಿಕಾರಿಗಳು ಭಾಗವಹಿಸಿದ್ದರು. ಇದೇ ವೇಳೆಯಲ್ಲಿ ಮಾತನಾಡಿದ ವಿನಯ ನಾವಲಗಟ್ಟಿ, ಕೇಂದ್ರ ಸಕರ್ಾರ ಎಸ್ಸಿ, ಎಸ್ಟಿ ಮೀಸಲಾತಿಯನ್ನು ರದ್ದು ಪಡಿಸುವ ಹುನ್ನಾರ ನಡೆಸಿದೆ. ಸವರ್ೊಚ್ಚ ನ್ಯಾಯಾಲಯವು ಮೀಸಲಾತಿ ಮೂಲಭೂತ ಹಕ್ಕಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು ಕಳವಳಕಾರಿ ಸಂಗತಿಯಾಗಿದೆ. ಇದನ್ನು ಮರುಪರಶೀಲನೆ ಮಾಡುವಂತೆ ಕೇಂದ್ರ ಸವರ್ೊಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳಬೇಕಾಗಿತ್ತು. ಆದರೆ ಕೇಂದ್ರ ಸಕರ್ಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದೇ ಮೀಸಲಾತಿಯನ್ನು ರದ್ದು ಮಾಡುವ ಹುನ್ನಾರ ನಡೆಸಿದೆ ಎಂದು ನಾವಲಗಟ್ಟಿ ಆರೋಪಿಸಿದರು.
ರಾಜು ಸೇಠ ಅವರು ಮಾತನಾಡಿ, ಕೇಂದ್ರ ಸಕರ್ಾರದ ಹಠಮಾರಿ ನಿಧರ್ಾರಗಳು ಭಾರತದ ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ತರುವ ಆತಂಕ ಎದುರಾಗಿದೆ. ಕೇಂದ್ರ ಸಕರ್ಾರ ಎಸ್ಸಿ, ಎಸ್ಟಿ ಸಮುದಾಯದ ಮೀಸಲಾತಿಯ ಹಕ್ಕನ್ನು ಕಿತ್ತುಕೊಳ್ಳುವ ಕುತಂತ್ರಕ್ಕೆ ಕೈ ಹಾಕಿದೆ ದೇಶದ ಜನ ಜಾಗೃತರಾಗಿದ್ದು, ಕೇಂದ್ರದ ಕುತಂತ್ರಕ್ಕೆ ಬಲಿಯಾಗುವದಿಲ್ಲ ಶೋಷಿತ ಸಮುದಾಯಗಳ ಹಿತಾಸಕ್ತಿಗೆ ಧಕ್ಕೆಯಾದರೆ ಕಾಂಗ್ರೆಸ್ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಇಂದಿನ ಈ ಸಭೆಯಲ್ಲಿ ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ, ಪರಶುರಾಮ ವಗ್ಗಣ್ಣವರ, ಜಯಶ್ರೀ ಮಾಳಗಿ, ಮಲ್ಲೇಶ ಚೌಗಲೆ, ಲತಾ ಮಾನೆ, ಬಸವರಾಜ ಶೇಗಾವಿ, ಸದಾ ಕೋಲಕಾರ್, ರಸೂಲ ಮುಲ್ಲಾ, ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು .