ಕೆನರಾ ಬ್ಯಾಂಕನಿಂದ ಕೆಎಲ್‌ಇ ವೈದ್ಯಕೀಯ ಸಂಶೋಧನಾ ಕೇಂದ್ರಕ್ಕೆ ನೂತನ ಆ್ಯಂಬುಲೆನ್ಸ್ ಕೊಡುಗೆ
ಬೆಳಗಾವಿ 26: ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರಕ್ಕೆ ಕೆನರಾ ಬ್ಯಾಂಕ ನೀಡಿದ ನೂತನ ಅಂಬ್ಯುಲನ್ಸ ಅನ್ನು ಸಂಸ್ಥೆಯ ಕಾರಾ್ಯಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರಿಂದಿಲ್ಲಿ ಜನಸೇವೆಗೆ ಅರ್ಿಸಿದರು.
ನಂತರ ಮಾತನಾಡಿದ ಅವರು, ತುರ್ತು ವೈದ್ಯಕೀಯ ಸೇವೆಗಳನ್ನು ಸುಧಾರಿಸಲು ಕೆನರಾ ಬ್ಯಾಂಕವು ಕೆಎಲ್‌ಇ ಸಂಸ್ಥೆಯ ಆಸ್ಪತ್ರೆಗಳಿಗೆ ಸಹಕಾರ ನೀಡುತ್ತಿವೆ. ಈ ಅತ್ಯಾಧುನಿಕ ಆಂಬ್ಯುಲೆನ್ಸ್ ರೋಗಿಗಳನ್ನು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಆಸ್ಪತ್ರೆಗೆ ಸಾಗಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ, ಸುವರ್ಣ ಘಳಿಗೆಯಲ್ಲಿ ರೋಗಿಯನ್ನು ಆಸ್ಪತ್ರೆಗೆ ಸೇರಿಸಿ ಜೀವ ಉಳಿಸುವ ಕಾರ‌್ಯದಲ್ಲಿ ತೊಡಗಿಕೊಂಡಿದ್ದು, ಕೆಲವು ತುರ್ತು ಸಂದರ್ಭಗಳಲ್ಲಿ ಅಂಬ್ಯುಲನ್ಸ ಆಸ್ಪತ್ರೆಯ ಕಾರ‌್ಯವನ್ನು ಮಾಡುತ್ತದೆ. ಆರೋಗ್ಯ ಸೇವೆಯನ್ನು ಎಲ್ಲರಿಗೂ ತಲುಪಿಸಲು ಸಾಕಷ್ಟು ಯೋಜನೆ ರೂಪಿಸಲಾಗಿದೆ. ಆದ್ದರಿಂದ ತುರ್ತು ಸಂದರ್ಭಗಳಲ್ಲಿ ಅನುಕೂಲವಾಗುವಂತೆ ಸಂಘಸಂಸ್ಥೆಗಳು ಕೈಜೋಡಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾಹೆರ ಉಪಕುಲಪತಿ ಡಾ. ನಿತಿನ ಗಂಗಾನೆ, ಕುಲಸಚಿವರಾದ ಡಾ. ಎಂ ಎಸ್ ಗಣಾಚಾರಿ, ಡಾ. ವಿ ಡಿ ಪಾಟೀಲ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ‌್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ, ಉಪಪ್ರಾಚಾರ‌್ಯರಾದ ಡಾ. ರಾಜೇಶ ಪವಾರ, ಡಾ. ವಿ ಎಂ ಪಟ್ಟಣಶೆಟ್ಟಿ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಎಂ ದಯಾನಂದ , ಡಾ. ಎಂ ವಿ ಜಾಲಿ, ಕೆಎಲ್‌ಇ ಸಂಸ್ಥೆಯ ಬ್ಯಾಂಕಿಂಗ ವ್ಯವಹಾರಗಳ ನಿರ್ದೇಶಕರಾದ ಬಸವರಾಜ ಜೇವರಗಿಕರ, ವರ್ಷಾ ಚಿಲ್ಲಾಳ, ಬ್ಯಾಂಕನ ಹುಬ್ಬಳ್ಳಿ ವೃತ್ತದ ಡಿಜಿಎಂ ಎಲ್ ಆರ್ ವಿಜಯಶ್ರೀ, ಎಜಿಎಂ ಸಂದೀಪಕುಮಾರ ಅಗರವಾಲ, ಬೆಳಗಾವಿ ಪ್ರಾದೇಶಿಕ ವಿಭಾಗದ ಎಜಿಎಂ ಎಂ ಶ್ರೀವಿದ್ಯಾ, ಚಿಕ್ಕೋಡಿ ಪ್ರದೇಶಿಕ ವಿಭಾಗದ ಎಜಿಎಂ ಎಂ ಪನಿಶಯನ, ಹುಬ್ಬಳ್ಳಿ ಎಂಸಿಬಿಯ ಡಿಎಂ ಚೇತನ ಪೇತುನವರ, ಸಿನಿಯರ ಮ್ಯಾನೇಜರಗಳಾದ ಪ್ರತೀಕ ಅಸ್ಕಿ, ದೀಪಕ ಮಗದುಮ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ 