ಕೆನರಾ ಬ್ಯಾಂಕ ಸಂಸ್ಥೆ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ
Canara Bank celebrates International Yoga Day
ಬೆಳಗಾವಿ 23: ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಬೆಳಗಾವಿ ಮತ್ತು ಇಶಾ ಫೌಂಡೇಶನ ಬೆಳಗಾವಿ ಇವರ ಸಹಯೋಗದಲ್ಲಿ 21/06/2025 ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಇಶಾ ಫೌಂಡೇಶನ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಾಧುರಿ ಗಾಯಕವಾಡ ಅವರು ಆಗಮಿಸಿದ್ದು, ಅವರೊಂದಿಗೆ, ಇಶಾ ಫೌಂಡೇಶನ ಸ್ವಯಂ ಸೇವಕರಾದ ಡಾ. ದಯಾನಂದ ಪಾಟೀಲ ಇವರು ಸಹ ಉಪಸ್ಥಿತರಿದ್ದರು.
ಇಶಾ ಫೌಂಡೇಶನ ಸಂಪನ್ಮೂಲ ವ್ಯಕ್ತಿಯಾಗಿ ಮಾಧುರಿ ಗಾಯಕವಾಡ ಇವರು ಇಶಾ ಫೌಂಡೇಶನ ಹಿನ್ನಲೆ ಮತ್ತು ಇತಿಹಾಸವನ್ನು ವಿವರಿಸುತ್ತಾ , ಶ್ರೀ ಸದ್ಗುರು ಗುರುಜಿಯವರು 1992 ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿ, ಈಗ ಅದರ ಮೂಲಕ ಜನರಿಗೆ ಜೀವನದ ಸಾರ, ಮತ್ತು ಜೀವನ ಮರಣದ ನಡುವೆ ಮನುಷ್ಯನ ಸಂಘರ್ಷಕ್ಕೆ ಕಾರಣ ಏನು ಎಂಬುದರ ಬಗ್ಗೆ ಮಾಹಿತಿ ಇರುವ ವಿಡಿಯೋವನ್ನು ತೋರಿಸಿದರು. ಮನುಷ್ಯ ತನ್ನ ಒತ್ತಡದ ಜೀವನದಲ್ಲಿ ಖುಷಿಯಾಗಿರಲು ಆತನಿಗೆ ಶಾಂತಿ ಮತ್ತು ಸಹನೆ ಬೇಕು. ಆದ ಕಾರಣ ಯೋಗ ಮತ್ತು ಧ್ಯಾನದ ಮಹಾ ಮಂತ್ರದ ಮೂಲಕ ಮಾತ್ರ ಇದು ಸಾಧ್ಯ ಎಂದು ತಿಳಿಸಿದರು. ಆದ ಕಾರಣ ಯೋಗವು ಜೀವನಕ್ಕೆ ತುಂಬಾ ಮೂಖ್ಯ ಎಂಬುದನ್ನು ತಿಳಿಸಿ. ಯೋಗದ ಹಲವಾರು ಬಂಗಿಗಳನ್ನು ಮಾಡಿಸಿ ಅದರೊಂದಿಗೆ ಧ್ಯಾನವನ್ನು ಸಹ ಮಾಡಿಸಿದರು. ದಿನನಿತ್ಯದ ಚಟುವಟಿಕೆಯಲ್ಲಿ ಯೋಗ ಮತ್ತು ಧ್ಯಾನವನ್ನು ರೂಡಿಸಿಕೊಂಡವರು ತಮ್ಮ ಜೀವನದಲ್ಲಿ ಯಶಸ್ಸನ್ನು ಮತ್ತು ಉತ್ತಮ ಆರೋಗ್ಯಕರ ಜೀವನ ಶೈಲಿ ರೂಡಿಸಿಕೊಳ್ಳುವುದರೊಂದಿಗೆ ತಾವು ಇಟ್ಟ ಗುರಿಯನ್ನು ತಲುಪುವರು ಎಂದು ತಿಳಿಸಿದರು.
ಆರ್‌ಸೆಟಿಯ ಸಂಸ್ಥೆಯ ನಿರ್ದೇಶಕರಾದ ಪ್ರವೀಣ ಕೆ. ಎಸ್. ಹಾಗೂ ಸಂಸ್ಥೆಯ ಉಪನ್ಯಾಸಕರಾದ ರಾಜೇಶ್ವರಿ ದೇವಲಾಪೂರ ಮತ್ತು ಸಂಸ್ಥೆಯ ಸಿಬ್ಬಂದಿಯವರಾದ ಬಸವರಾಜ ಮತ್ತು ಸತಿಶ್ ಇವರ ಉಪಸ್ಥಿತಿಯಲ್ಲಿ ಯೋಗ ಕಾರ್ಯಕ್ರಮವು ಜರುಗಿತು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 