ನವದೆಹಲಿ, ಅ 10: ಹೂಸ್ಟನ್ನಲ್ಲಿ ನಡೆದ ಬೃಹತ್ 'ಹೌಡಿ ಮೋದಿ' ಕಾರ್ಯಕ್ರಮವನ್ನು 'ಗಿಮಿಕ್' ಎಂದು ಬಿಂಬಿಸಲು ಪ್ರಯತ್ನಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ವಿರೋಧಿಗಳಿಗೆ ಬಿಜೆಪಿ ಸವಾಲು ಹಾಕಿದೆ "ಇದು ಗಿಮಿಕ್ ಆಗಿದ್ದರೆ ಮತ್ತು ತುಂಬಾ ಸರಳವಾದ ವಿಷಯವಾಗಿದ್ದರೆ, ಭಾರತದ ಇತರ ನಾಯಕರು ಮತ್ತು ಇತರ ದೇಶಗಳ ನಾಯಕರು ಹೂಸ್ಟನ್ನ ಕ್ರೀಡಾಂಗಣಕ್ಕೆ ಹೋಗಿ ಈ ರೀತಿಯ ಕಾರ್ಯಕ್ರಮವನ್ನು ನಡೆಸಲಿ" ಎಂದು ಬಿಜೆಪಿ ವಿದೇಶಾಂಗ ವ್ಯವಹಾರಗಳ ಉಸ್ತುವಾರಿ ವಿಜಯ್ ಚೌಥೈವಾಲೆ ಹೇಳಿದ್ದಾರೆ. "ಇದು ನಾಟಕ ಅಥವಾ ಅಂತಹದ್ದೇನಾದರೂ ಎಂದು ಹೇಳುವುದು ಸುಲಭ. ಅಲ್ಲಿಗೆ ಹೋಗಿ ಕೆಲಸ ಮಾಡಿ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಲ್ಲದೆ 50,000 ಜನರ ಕೂಟವನ್ನು ಖಚಿತಪಡಿಸಿಕೊಳ್ಳಿ" ಎಂದು ಸವಾಲೆಸೆದಿದ್ದಾರೆ. 2014 ರಲ್ಲಿ ಮ್ಯಾಡಿಸನ್ ಸ್ಕ್ವೇರ್ನಿಂದ ಪ್ರಾರಂಭವಾಗುವ ಪಿಎಂ ಮೋದಿಯವರ ಇಂತಹ ಮೆಗಾ ಪ್ರದರ್ಶನಗಳನ್ನು ವಿದೇಶದಲ್ಲಿ ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಚೌಥೈವಾಲೆ, ಚೀನಾ ಮತ್ತು ಮಲೇಷ್ಯಾದಂತಹ ದೇಶಗಳಲ್ಲಿ ಇಂತಹ ಯರ್ಾಲಿಗಳನ್ನು ಆಯೋಜಿಸಲು ಪ್ರಧಾನ ಮಂತ್ರಿಗೆ ತುಂಬಾ ಕಷ್ಟವಾಗಬಹುದು ಎಂದು ಯೋಚಿಸುವುದೂ ತಪ್ಪಾಗುತ್ತದೆ ಎಂದ ಅವರು, ನಾವು ಈಗಾಗಲೇ ಶಾಂಘೈನಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಕಂಡಿದ್ದೇವೆ. ಪ್ರಧಾನಿ ಮೋದಿಯವರ ಕಳೆದ ಅಧಿಕಾರಾವಧಿಯಲಿ ಮಲೇಷ್ಯಾದ ಕೌಲಾಲಂಪುರದಲ್ಲಿ 10ಸಾವಿರ ಜನರು ಭಾಗವಹಿಸಿದರು ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಉಪಾಧ್ಯಕ್ಷ ಮತ್ತು ಸಂಸದ ವಿನಯ್ ಸಹಸ್ರಬುದ್ದೆ, "ಸಾಮಾನ್ಯವಾಗಿ ಅಧಿಕಾರದಲ್ಲಿರುವ ಪಕ್ಷಗಳು ವಿದೇಶಿ ನೀತಿ ಒಂದೇ ಆಗಿರುತ್ತದೆ ಎಂದು ಹೇಳುವುದು ಒಂದು ಫ್ಯಾಷನ್. ಬಹುಶಃ ಇದು ಆ ಸರ್ಕಾರವನ್ನು ಮುನ್ನಡೆಸುತ್ತಿರುವ ವ್ಯಕ್ತಿಯೊಂದಿಗೆ ಬದಲಾಗುತ್ತದೆ ಎಂದು ಅಭಿಪ್ರಾಯಪಟ್ಟರು.