ವಿಜಯಪುರ 10: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಎಸ್.ಎಂ ಓಷಧ ವಿಜ್ಞಾನ ಮಹಾವಿದ್ಯಾಲಯ ಮತ್ತು ಸಂಶೋಧನೆ ಕೇಂದ್ರದಲ್ಲಿ ಆಪ್ಟಮ್ ಕಂಪನಿ ಬುಧವಾರ ಕ್ಯಾಂಪಸ್ ಪ್ಲೇಸಮೆಂಟ್ ಡ್ರೈವ್ ನಡೆಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಆಪ್ಟಮನ್ ಕಂಪನಿಯ ಅಧಿಕಾರಿ ಕ್ಲೆಮೆಂಟ್ ಮಾತನಾಡಿ, ತಮ್ಮ ಕಂಪನಿ ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ಈ ಕಾರ್ಯಕ್ರಮ ನಡೆಸುತ್ತಿದೆ. ಈ ಮೂಲಕ ಪ್ರತಿಭಾವಂತರಿಗೆ ಓಷಧ ವಿಜ್ಞಾನ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಒದಗಿಸುತ್ತಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಶೆಟ್ಟಿ ಮಾತನಾಡಿ, ಕಾಜೇಲು ಫಾರ್ಮಸಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕೊಡುವ ಜೊತೆಗೆ ಅವರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿಯೂ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಹೇಳಿದರು.
ಈ ಕ್ಯಾಂಪಸ್ ಪ್ಲೇಸಮೆಂಟ್ ಡ್ರೈವ್ ನಲ್ಲಿ ಸುಮಾರ 50ಕ್ಕೂ ಹೆಚ್ಚು ಫಾರ್ಮಸಿ ವಿದ್ಯಾರ್ಥಿಗಳು ಪಾಲ್ಗೋಂಡರು.
ಈ ಸಂದರ್ಭದಲ್ಲಿ ಪ್ಲೇಸಮೆಂಟ್ ಸಂಯೋಜಕ ನಂಜಯಪ್ಪಯ್ಯ, ಕಂಪನಿಯ ಅಧಿಕಾರಿಗಳಾದ ವಿಗ್ನೇಶ, ವಾರೆನ್ ಡಿಸೋಜಾ, ಡಾ. ಕೃಷ್ಣ ದೇಶಪಾಂಡೆ, ಕವಿತಾ ನೆಸೂರ, ಧರೆಪ್ಪ ತೇಲಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.