ಗದಗ 29: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಮುಂಡರಗಿ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಗದಗ ಇವರ ಸಂಯುಕ್ತಾಶ್ರಯದಲ್ಲಿ ದಿ. 28ರಂದು ಬೆ.10.00 ಗಂಟೆಗೆ ಸರ್ಕಾರಿ ಐಟಿಐ ಮುಂಡರಗಿಯಲ್ಲಿ ಕ್ಯಾಂಪಸ್ ಸಂದರ್ಶನ ಹಮ್ಮಿಕೊಳ್ಳಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ಸುಮಾರು 250 ಕ್ಕಿಂತ ಹೆಚ್ಚು ಯುವ ಉದ್ಯೋಗ ಆಕಾಂಕ್ಷಿಗಳು ಭಾಗವಹಿಸಿದ್ದರು. ಎಲ್.ಎಮ್ ವಿಂಡ ಪಾವರ್ ಇಂಡಿಯಾ ಪ್ರೈಲಿ ತುಮಕೂರು ಹಾಗೂ ಹಿಮತ್ಸಿಂಗ ಹಾಸನ ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳು ಭಾಗಿಯಾಗಿ ಸುಮಾರು 91 ಅರ್ಹ ಯುವಕ ಯುವತಿಯರನ್ನು ಆಯ್ಕೆ ಮಾಡಿಕೊಂಡು ಸ್ಥಳದಲ್ಲಿಯೇ ಉದ್ಯೋಗಕ್ಕೆ ಹಾಜರಾಗಲು ಕಂಪನಿಯ ನೇಮಕಾತಿ ಆದೇಶ ನೀಡಿದಲ್ಲದೇ 45 ಅಭ್ಯಥರ್ಿಗಳನ್ನು ಮುಂದಿನ ಹಂತಕ್ಕೆ ಕಾಯ್ದಿರಿಸಲಾಗಿದೆ.
ಕ್ಯಾಂಪಸ್ ಸಂದರ್ಶನ ಸಮಾರಂಭವನ್ನು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಬಸವರಾಜ ಮಲ್ಲೂರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ತರಬೇತಿ ಅಧಿಕಾರಿ ಈರಪ್ಪ ವಟ್ನಾಳ ವಹಿಸಿದ್ದರು. ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ತನುಜಾ ರಾಮಪುರೆ, ನಾರಾಯಣಪ್ಪ ಇಲ್ಲೂರು, ಮಲ್ಲಿಕಾರ್ಜುನ, ಮಹಮ್ಮದಲಿ, ತಿಪ್ಪೇಸ್ವಾಮಿ ಇದ್ದರು. ಸುರೇಶ ದಾವಣಗೇರಿ ಸ್ವಾಗತಿಸಿದರು. ಸಾತಪುತೆ ವಂದಿಸಿದರು. ನಾಗರಾಜ ನಿರೂಪಿಸಿದರು.