ಬೆಂಗಳೂರು,
ಡಿ.28 ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ
ಕಾಯ್ದೆಯು ಕೋಮುವಾದದಿಂದ ಕೂಡಿದ್ದು ಇದರ ವಿರುದ್ಧ
ನಾಗರಿಕ ಅಸಹಕಾರ ಚಳುವಳಿಯೊಂದಿಗೆ ಇಂದಿನಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಕ್ಯಾಂಪಸ್ ಫ್ರಂಟ್
ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ವದಕತ್ ಶಾ ತಿಳಿಸಿದ್ದಾರೆ.ಇಂದು ಸುದ್ದಿಗೋಷ್ಠಿಯಲ್ಲಿ
ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆಯು ಭಾರತೀಯ ನಾಗರಿಕರ ಮೇಲೆ ದುಷ್ಪರಿಣಾಮ ಬೀರಲಿದೆ.
ದೇಶದಲ್ಲಿ ಮುಸ್ಲಿಮರನ್ನುಹತ್ತಿಕ್ಕುವ ಷಡ್ಯಂತ್ರ ಇದಾಗಿದ್ದು, ನಮ್ಮನ್ನು ದೇಶದಿಂದ ಹೊರದಬ್ಬುವ
ಕುತಂತ್ರವಾಗಿದೆ ಎಂದು ದೂರಿದರು.ದೇಶಾದ್ಯಂತ ಈ ಕಾಯ್ದೆಯ ವಿರುದ್ಧ ನಡೆಯುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು,
ಪ್ರತಿಭಟನೆಗಿಳಿದವರ ವಿರುದ್ಧ ಪೊಲೀಸರು ಕ್ರೂರರೀತಿಯ ದೌರ್ಜನ್ಯವೆಸಗುತ್ತಿದ್ದು, ಅವರ ಮೇಲೆ ಸುಳ್ಳು
ಪ್ರಕರಣಗಳನ್ನು ಹೇರಿ, ಗೋಲಿಬಾರ್ ಮಾಡುವ ಮೂಲಕ ಪ್ರತಿಭಟನಕಾರರನ್ನು ಹತ್ತಿಕ್ಕುತ್ತಿದ್ದಾರೆ ಎಂದುಆರೋಪಿಸಿದರು.ರಾಜ್ಯದಲ್ಲಿ
ಸಿಎಎ ವಿರುದ್ಧ ಹೋರಾಟ ಹೆಚ್ವಾಗುತ್ತಿರುವಾಗಲೇ ಗೃಹ ಸಚಿವರು ರಾಜ್ಯದಲ್ಲಿ ಜನವರಿ1 ರಿಂದ ಎನ್ ಆರ್
ಸಿ ಜಾರಿಗೆ ತರುವುದಾಗಿ ಹೇಳಿಕೆ ನೀಡಿದ್ದು,ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಿ ಎನ್ ಆರ್ ಸಿ
ಜಾರಿಗೆ ತರುವುದನ್ನು ಕೈ ಬಿಡಬೇಕೆಂದು ಒತ್ತಾಯಿಸಲಾಗುವುದು ಎಂದು ಹೇಳಿದರು.