ಯುವ ಮತ್ತು ಭಾವಿ ಮತದಾರರ ನೊಂದಣಿ ಕುರಿತು ಅಭಿಯಾನ ಕಾರ್ಯಕ್ರಮ

ಬೆಳಗಾವಿ, 15: ಬೆಳಗಾವಿ ಕೆ.ಎಲ್.ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ನವೆಂಬರ್ 14 ರಂದು ನಡೆದ 2019ನೇ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಕುರಿತು "ಯುವ ಮತ್ತು ಭಾವಿ ಮತದಾರರ ನೊಂದಣಿ ಕುರಿತು ಅಭಿಯಾನ ಕಾರ್ಯಕ್ರಮ" ನಡೆಸಲಾಯಿತು. ಹಾಗೂ ಹರಿಜನ ಕಾಲೋನಿಗೆ ಭೇಟಿ ನೀಡಿ ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡಗಳ ಮನೆ ಮನೆಗೆ ಹೋಗಿ ಯುವ ಮತ್ತು ಭಾವಿ ಮತದಾರರ ನೊಂದಣಿ ಕುರಿತು ಅಭಿಯಾನ ಕಾರ್ಯಕ್ರಮದ ಬಗ್ಗೆ ಜನರಿಗೆ ಜಾಗೃತಿ ನೀಡಲಾಯಿತು ಈ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯ ಮಹಾನಗರ ಪಾಲಿಕೆ ಆಯುಕ್ತರಾದ ಶಶಿಧರ. ಕುರೆರ, ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳಾದ ರಾಮಚಂದ್ರನ್ ಆರ್., ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿಗಳಾದ ಶಂಕರಾನಂದ. ಬನಶಂಕರಿಯವರು, ಬೆಳಗಾವಿ ಕೆ.ಎಲ್.ಇ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರು ಹಾಗೂ ಕಾಲೇಜಿನ ಎಲ್ಲ ವಿದ್ಯಾಥರ್ಿಗಳು ಭಾಗವಹಿಸಿದ್ದರು.  

ರಾಮಚಂದ್ರನ್ ಆರ್. ಇವರು ವಿದ್ಯರ್ಾಥಿಗಳನ್ನು ಉದ್ದೇಶಿಸಿ ಮಾತನಾಡಿ, ಮತದಾನ ಪಟ್ಟಿ ಪರಿಷ್ಕರಣೆಗೆ 20-11-2018ರ ರಂದು ಕೊನೆಯ ದಿನಾಂಕವಿದ್ದು, ದಿನಾಂಕ:01-01-2001ರ ಹಿಂದೆ  ಜನಸಿದ ಪ್ರತಿಯೊಬ್ಬರು, ನಮೂನೆ 6ನ್ನು ಭತರ್ಿ ಮಾಡಿ ಮತದಾರರ ನೊಂದಣಿ ಅಧಿಕಾರಿಗಳಿಗೆ ನೀಡಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡಿಕೊಂಡು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಕ್ರೀಯೆಯಲ್ಲಿ ಭಾಗವಹಿಸಿ ದೇಶವನ್ನು ಕಟ್ಟುವ ಕೆಲಸದಲ್ಲಿ ನಿರತರಾಗಲು ಕರೆ ನೀಡಿದರು. ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದವರು ತಮ್ಮ ಮತಗಟ್ಟೆ ವಿವರ ತಿಳಿಯಲು ಮೊಬೈಲ್ ಎಸ್.ಎಮ್.ಎಸ್ ಏಂಇಕಅ ಎಂದು ಟೈಪಿಸಿ ಒಂದು ಸ್ಪೇಸ್ ಬಿಟ್ಟು ತಮ್ಮ ಇಕಅ ಕಾರ್ಡ ನಂಬರ ನಮೂದಿಸಿ "9731979899"ಗೆ ಕಳುಹಿಸುವ ಮೂಲಕ ವಿವರ ಪಡೆಯಬಹುದೆಂದು ಮಾಹಿತಿ ನೀಡಿದರು.

ಶಶಿಧರ. ಕುರೇರ್ ಮಾಹಾನಗರ ಪಾಲಿಕೆ ಆಯುಕ್ತರೊಂದಿಗೆ ಅನಗೋಳದ ಹರಿಜನ ಕೇರಿಗೆ ಭೆೇಟಿ ನೀಡಿ ಯುವ ಮತದಾರರು ಮತದಾರ ಪಟ್ಟಿಯಲ್ಲಿ ತಮ್ಮ ಹೆಸರು ನೊಂದಾಯಿಸಿಕೊಳ್ಳಲು ತಿಳುವಳಿಕೆ ನೀಡಿದರು.