ಯುವ ಮತ್ತು ಭಾವಿ ಮತದಾರರ ನೋಂದಣಿ ಕುರಿತು ಅಭಿಯಾನ

ಬೆಳಗಾವಿ, 20: ಲೋಕಸಭೆಯ ಸಾರ್ವತ್ರಿಕ ಚುನಾವಣೆ-2019 ರ ಅಂಗವಾಗಿ 11-ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಸ್ವೀಪ್ ಯೋಜನೆಯಡಿಯಲ್ಲಿ ``ಯುವ ಮತ್ತು ಭಾವಿ ಮತದಾರರ ನೋಂದಣಿ ಕುರಿತು ಅಭಿಯಾನ'' ಕಾರ್ಯಕ್ರಮವನ್ನು ಜ್ಯೊತಿ ಪದವಿ ಪೂರ್ವ ಕಾಲೇಜು ಬೆಳಗಾವಿಯಲ್ಲಿ ಇಂದು (ನ.20) ರಂದು ಆಯೋಜಿಸಲಾಗಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಹಾಗೂ ಸ್ವೀಪ್ ಯೋಜನೆಯ ಅಧ್ಯಕ್ಷರಾದ ಆರ್.ರಾಮಚಂದ್ರನ್ ಇವರ ಘನ ಅಧ್ಯಕ್ಷತೆಯಲ್ಲಿ ಹಾಗೂ ಮಹಾನಗರ ಪಾಲಿಕೆ ಆಯುಕ್ತರಾದ ಶಶಿಧರ ಕುರೇರ, ಜ್ಯೊತಿ ಕಾಲೇಜಿನ ಪ್ರಾಚಾರ್ಯರ ಘನ ಉಪಸ್ಥಿತಿಯಲ್ಲಿ ಕಾಲೇಜಿನ ವಿದ್ಯಾಥರ್ಿ-ವಿದ್ಯಾಥರ್ಿನಿಯರ ಉಪಸ್ಥಿತಿಯಲ್ಲಿ ಯುವ ಮತದಾರರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡಿಸುವ ಕುರಿತು ಮತದಾರರ ನೋಂದಣಿ ಅಭಿಯಾನ ಕಾರ್ಯಕ್ರಮವನ್ನು ನಡೆಸಲಾಯಿತು