ಬೈಲಹೊಂಗಲ; ನೂತನ ಸದಸ್ಯರ ನೋಂದಣಿಗೆ ಅಭಿಯಾನ

ಲೋಕದರ್ಶನ ವರದಿ

ಬೈಲಹೊಂಗಲ 05:  ಪಕ್ಷದ ಆದೇಶದ ಮೇರೆಗೆ ನೂತನ ಸದಸ್ಯರ ನೋಂದಣಿ ಅಭಿಯಾನ ಆರಂಭಿಸಲಾಗಿದ್ದು,  ಕಾರ್ಯಕರ್ತರು ಪ್ರತಿಯೊಂದು ಮನೆಗೆ ತೆರಳಿ ಕೇಂದ್ರ ಸಕರ್ಾರದ ಸಾಧನೆಗಳನ್ನು ತಲುಪಿಸಿ, ಹೊಸ ಸದಸ್ಯರನ್ನು ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿಕೊಳ್ಳಬೇಕೆಂದು ಬೆಳಗಾವಿ ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ಡಾ. ವಿಶ್ವನಾಥ ಪಾಟೀಲ ಹೇಳಿದರು. 

ಅವರು ಪಟ್ಟಣದ ಬಿಜೆಪಿ ಕಾಯರ್ಾಲಯದಲ್ಲಿ ಮಂಡಲ ಬಿಜೆಪಿ ಸದಸ್ಯತ್ವ ಅಭಿಯಾನ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬ ಕಾರ್ಯಕರ್ತರ ಮೇಲಿದೆ. ಪಕ್ಷವನ್ನು ಮತ್ತಷ್ಟು  ಬಲ ಪಡಿಸುವ ನಿಟ್ಟಿನಲ್ಲಿ  ಹೊಸ ಸದಸ್ಯತ್ವದ ಅಭಿಯಾನ ಯೋಜನೆಯನ್ನು ಹಾಕಿಕೊಂಡಿದ್ದು ಕಾರ್ಯಕರ್ತರು ಪ್ರತಿಯೊಬ್ಬರ ಮನೆ ಮನೆಗೆ ತೆರಳಿ ಹೊಸ ಸದಸ್ಯರನ್ನು ಪಕ್ಷಕ್ಕೆ ಆಹ್ವಾನಿಸಬೇಕೆಂದು ಕರೆ ನೀಡಿದರು. 

ಜಿಲ್ಲಾ ಉಪಾಧ್ಯಕ್ಷ ಗೂಳಪ್ಪ ಹೊಸಮನಿ, ಪ್ರಧಾನ ಕಾರ್ಯದಶರ್ಿಗಳಾದ ಧನಂಜಯ ಜಾಧವ,  ಗುರುಪಾದ ಕಳ್ಳಿ, ಮಂಡಲ ಅಧ್ಯಕ್ಷ ಮಡಿವಾಳಪ್ಪ ಹೋಟಿ, ಸಿ.ಕೆ.ಮೆಕ್ಕೇದ, ಈರಣ್ಣ ಕರಿಕಟ್ಟಿ, ಸಂಜಯ ಗಿರೆಪ್ಪಗೌಡರ ಆಶೀಫ ಗೋವೆ, ರಾಮನಗೌಡ ಪಾಟೀಲ, ಬಸವರಾಜ ನೇಸರಗಿ  ಮತ್ತಿತರರು  ಇದ್ದರು.