ಬೆಳಗಾವಿ, 30: ಜಿಲ್ಲೆಯ ಹುಕ್ಕೇರಿ ತಾಲೂಕಿನ ಮನಗುತ್ತಿ ಗ್ರಾಮದಲ್ಲಿ ನವಭಾರತ ಕಂಪನಿಯಿಂದ ಗ್ರಾ.ಪಂ. ಸದಸ್ಯ ಜೀವಪ್ಪ ಪಾಟೀಲ ಮತ್ತು ಪ್ರಗತಿಪರ ರೈತ ಸುಧೀರ ಚೌಗಲಾ ಅವರ ತೋಟದಲ್ಲಿ ರೈತರ ಕ್ಷೇತ್ರೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ಜೀವಪ್ಪ ಪಾಟೀಲ ಮಾತನಾಡಿ ಈಗಿನ ದಿನಮಾನಗಳಲ್ಲಿ ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸುವುದರಿಂದ ಮಣ್ಣಿನ ಫಲವತ್ತತ್ತೆ ಹಾಳಾಗುತ್ತದೆ ಮತ್ತು ನಾವು ತಿನ್ನುವ ಆಹಾರವು ಕೂಡ ರಾಸಾಯನಿಕವಾಗಿದ್ದರಿಂದ ನಮ್ಮಲ್ಲಿ ಇನ್ನಿತರ ರೋಗರುಜಿನಗಳು ಬರುತ್ತವೆ ಅದ್ದರಿಂದ. ಎಲ್ಲಾ ರೈತರು ಸಾವಯುವ ಮತ್ತು ಜೈವಿಕ ಗೊಬ್ಬರಗಳನ್ನು ಉಪಯೋಗಿಸಿ ಒಳ್ಳೆಯ ಇಳುವರಿ ಬೆಳೆ ಬೆಳೆಯಬಹುದು ಎಂದು ಅಲ್ಲಿ ನೆರೆದ ರೈತರಿಗೆ ವಿವರಿಸಿದರು.
ಪ್ರಗತಿ ಪರ ರೈತರಾದ ಸುಧೀರ ಚೌಗಲೆ ಹಾಗೂ ಸುಬ್ಬರಾವ ನಿಪನ್ಯಾಳ ಮಾತನಾಡಿ ನಾವು ನವಭಾರತ ಕಂಪನಿಯ ಉತ್ಪನ್ನಗಳನ್ನು ನಮ್ಮ ಎಲ್ಲಾ ಬೆಳೆಗೆ ಉಪಯೋಗಿಸಿದ್ದು ಒಳ್ಳೆಯ ಇಳುವರಿ ಮುತ್ತು ಉತ್ಪನ್ನಗಳನ್ನು ಪಡೆದುಕೊಂಡಿದ್ದೇವೆ ಎಂದು ಅಲ್ಲಿ ನೆರೆದ ರೈತರಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ಕಂಪನಿಯ ಸೇವಾ ಅಧಿಕಾರಿ ಬಿ.ಎನ್. ಕುದರಿ ಮಾತನಾಡಿ ಕಂಪನೀಯ ಉತ್ಪನ್ನಗಳ ಬಗ್ಗೆ ಅಲ್ಲಿ ನೆರೆದ ರೈತರಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ಊರಿನ ರೈತರಾದ ಕೃಷ್ಣ ಚೌಗಲೆ, ವಿಶ್ವನಾಥ ದಿನ್ನಿಮನಿ, ಸುಬ್ಬರಾವ ನಿಪನ್ಯಾಳ, ಮನೋಹರ ಪಾಟೀಲ, ಕೆಂಪಣ್ಣ ಪೂಜಾರಿ, ಸೋಮಣ್ಣ ಪಾಟೀಲ, ಯಲ್ಲಪ್ಪ ದೇವಕಿ, ದಯಾನಂದ, ಕೋಕಿತಕರ, ಸಂಜು ಚೌಗಲೆ, ಮಾರುತಿ ಪಾಟೀಲ, ಗೋವಿಂದ ನಾವಗೆ, ಕಂಪನೀಯ ಅಧಿಕಾರಿಗಳಾದ ಬಿ.ಎನ್. ಕುದರಿ, ರಾಘವೇಂದ್ರ ಲಾಮಲೆ ಹಾಗೂ ಊರಿನ ಎಲ್ಲ ರೈತ ಬಾಂಧವರು ಉಪಸ್ಥಿತರಿದ್ದರು.
ರಾಘವೇಂದ್ರ ಲಾಮಲೆ ನಿರೂಪಿಸಿದರು.