ಹಾವೇರಿ: ಫೆ.15: ಇಂದಿನ ಸಮಾಜ ತಂತ್ರಜ್ಞಾನ ಆಧಾರಿತವಾಗಿದೆ. ಕಾಗದರಹಿತ ಆಡಳಿತ ಶುರವಾಗಿದೆ. ಮಹಿಳೆಯರು ತಂತ್ರಜ್ಞಾನದಲ್ಲಿ ಮೇಲುಗೈ ಸಾಧಿಸಬೇಕಾಗಿದೆ. ಪೂರ್ಣವಾದ ತಂತ್ರಜ್ಞಾನದ ಮೂಲಕ ಆಧುನಿಕ ಸಮಾಜದೊಂದಿಗೆ ಹೆಜ್ಜೆಹಾಕಲು ಸಜ್ಜಾಗುವಂತೆ ವಿದ್ಯಾಥರ್ಿನಿಯರಿಗೆ ಶಾಸಕರಾದ ನೆಹರು ಓಲೇಕಾರ ಅವರು ಕರೆ ನೀಡಿದರು.
ನಗರದ ಸರಕಾರಿ ನೌಕರರ ಭವನದಲ್ಲಿ ಮಂಗಳವಾರ ನಡೆದ ಸಕರ್ಾರಿ ಪ್ರಥಮ ದಜರ್ೆ ಮಹಿಳಾ ಕಾಲೇಜು ಹಾಗೂ ಪರಿಶಿಷ್ಟ ಜಾತಿ/ಪಂಗಡ ವಸತಿಯುಕ್ತ ಪ್ರಥಮ ದಜರ್ೆ ಕಾಲೇಜು ಸಹಯೋಗದಲ್ಲಿ ಮೊದಲ ವರ್ಷದ ಪದವಿ ವಿದ್ಯಾಥರ್ಿಗಳಿಗೆ ಉಚಿತ ಲ್ಯಾಪ್ಟಾಪ್ಗಳನ್ನು ವಿತರಿಸಿ ಅವರು ಮಾತನಾಡಿದರು.
ಹಳೆಯ ಕಾಲದಲ್ಲಿ ಅಕ್ಷರಗಳನ್ನು ಕಲಿಯಲು ಸಾಕ್ಷರತಾ ಕಾರ್ಯಕ್ರಮ, ರಾತ್ರಿಶಾಲೆ ನಡೆಸಲಾಗುತ್ತಿತ್ತು. ಗಣಕಯಂತ್ರಜ್ಞಾನವಾಗಲಿ, ಅದರ ನಿರ್ವಹಣೆ ಸಾಮನ್ಯ ಜ್ಞಾನವಾಗಲಿ ಇರಲಿಲ್ಲ. ಆದರೆ ಕಾಲಬದಲಾಗಿದೆ. ಇಂದಿನ ಮಕ್ಕಳು ಗಣಕಯಂತ್ರ, ಮೊಬೈಲ್, ಸಾಮಾಜಿಕ ಮಾಧ್ಯಮಗಳ ಬಗೆಗೆ ಸಂಪೂರ್ಣವಾಗಿ ಮಾಹಿತಿ ಹೊಂದಿದ್ದಾರೆ ಬಳಕೆಮಾಡುತ್ತಿದ್ದಾರೆ. ಇಂದಿನ ಆಧುನಿಕ ಯುಗದಲ್ಲಿ ಎಲ್ಲವೂ ತಂತ್ರಜ್ಞಾನವಾಗುತ್ತಿದೆ. ಮನುಷ್ಯ ಮಾಡುವ ಕೆಲಸವನ್ನು ಇಂದು ಯಂತ್ರಗಳು ನಿರ್ವಹಿಸುತ್ತಿವೆ. ಕಚೇರಿಯ ಎಲ್ಲ ದಾಖಲೆಗಳ ನಿರ್ವಹಣೆ ಕಂಪ್ಯೂಟರ್ ಮಯವಾಗಿದೆ. ಕಾಗದರಹಿತ ಆಡಳಿತ ವ್ಯವಸ್ಥೆಯ ಯುಗ ಆರಂಭವಾಗಿದೆ. ಸಾಮಾನ್ಯ ಜನರೂ ತಂತ್ರಜ್ಞಾನ ಬಳಕೆ ಮಾಡುವುದು ಅನಿವಾರ್ಯವಾಗಿದೆ. ತಂತ್ರಜ್ಞಾನ ಸೇವೆ ಒದಗಿಸುವ ಅಂಗಡಿಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಆರಂಭಗೊಳ್ಳುತ್ತಿರುವುದು ಮುಂಬರುವ ದಿನಗಳಲ್ಲಿ ನಮ್ಮ ಬದುಕಿನಲ್ಲಿ ಆರವರಿಸಿಕೊಳ್ಳುವ ತಂತ್ರಜ್ಞಾನದ ದಿಕ್ಸೂಚಿಯಾಗಿದೆ ಎಂದು ಹೇಳಿದರು.
ಸಕರ್ಾರಿ ಪ್ರಥಮ ದಜರ್ೆಯ ಮಹಿಳಾ ಕಾಲೇಜು ಕಟ್ಟಡದ ಕೆಲಸ ಈಗಾಗಲೇ ಆರಂಭಗೊಂಡಿದ್ದು ನಗರದ ಜಿ.ಎಚ್.ಕಾಲೇಜು ಹಿಂಭಾಗದ 5 ಎಕರೆ ಜಾಮೀನಿನಲ್ಲಿ ಕಾಲೇಜು ಕಟ್ಟಡದ ನಿಮರ್ಾಣ ಕಾರ್ಯ ಪ್ರಗತಿಯಲ್ಲಿದೆ. ಬರುವ ಶೈಕ್ಷಣಿಕ ವರ್ಷದದಲ್ಲಿ ನೂತನ ಕಟ್ಟಡದಲ್ಲಿ ಕಾಲೇಜು ಆರಂಭಗೊಳ್ಳಲಿದೆ ಎಂದರು.
ಪ್ರಸಕ್ತ ಸಾಲಿನಿಂದ ಹಾವೇರಿಯಲ್ಲಿ ಆರಂಭಗೊಂಡಿರುವ ಪರಿಶಿಷ್ಟ ಜಾತಿ/ಪಂಗಡ ವಸತಿಯುಕ್ತ ಪ್ರಥಮ ದಜರ್ೆ ಕಾಲೇಜಿಗೆ ನೂತನ ಕಟ್ಟಡ ನಿಮರ್ಾಣಕ್ಕೆ ಈಗಾಗಲೇ ಹಾವೇರಿಯಿಂದ 6 ಕೀ.ಮಿ ದೂರವಿರುವ ಕಳ್ಳಿಹಾಳ ಗ್ರಾಮದಲ್ಲಿರುವ 9 ಎಕರೆ 36 ಗುಂಟೆ ಸಕರ್ಾರಿ ಜಾಮೀನಿನಲ್ಲಿ ಮಂಜೂರು ಮಾಡಲಾಗಿದೆ. ಕಟ್ಟಡಕ್ಕೆ ಬೇಕಾದ ಅನುದಾನ ಬಿಡುಗಡೆಮಾಡಿಸಲಾಗುವುದು. ವಿದ್ಯಾಥರ್ಿಗಳ ಬೇಡಿಕೆಯಂತೆ ದ್ವೀತಿಯ ಹಾಗೂ ತೃತೀಯ ವರ್ಷದ ಪದವಿ ವಿದ್ಯಾಥರ್ಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಿಸಬೇಕೆಂಬ ಬೇಡಿಕೆಯನ್ನು ಸಕರ್ಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಿ.ಎ ವಿದ್ಯಾಥರ್ಿಗಳಿಗೆ 108 ಲ್ಯಾಪ್ಟಾಪ್, ಬಿಕಾಮ್ ವಿದ್ಯಾಥರ್ಿಗಳಿಗೆ 70 ಲ್ಯಾಪ್ಟಾಪ್ ಹಾಗೂ ಎಸ್.ಸಿ, ಎಸ್. ಟಿ, ವಿದ್ಯಾಥರ್ಿಗಳಿಗೆ 64 ಲ್ಯಾಪ್ಟಾಪ್ಗಳನ್ನು ವಿತರಿಸಲಾಯಿತು.
ಸಕರ್ಾರಿ ಪ್ರಥಮ ದಜರ್ೆಯ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿಬಿ ಫಾತಿಮಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸರಕಾರಿ ಪರಿಶಿಷ್ಟ ಜಾತಿ/ಪಂಗಡ ವಸತಿಯುಕ್ತ ಪ್ರಥಮ ದಜರ್ೆ ಕಾಲೇಜಿನ ಪ್ರಾಶುಂಪಾಲರಾದ ಡಾ. ರಮೇಶ ತೆವರಿ, ಸವಣೂರು ತಾಲೂಕು ಪಂಚಾಯತ್ ಅಧ್ಯಕ್ಷ ತಿಪ್ಪಣ್ಣ ಸುಬ್ಬಣ್ಣನವರ, ಶಾಸಕರ ಆಪ್ತ ಕಾರ್ಯದಶರ್ಿ ರಾಮಣ್ಣ, ಜಗದೀಶ, ಕೆ.ಸಿ. ಕೋರಿ, ಮಂಜು ಇಟಗಿ, ಪ್ರಶಾಂತ, ಸಂಗಮೇಶ, ಸಿಡಿಸಿ ಸದಸ್ಯರಾದ ಅನಿತಾ, ಸರೋಜಾ, ಸುಮಂಗಲಾ ಹಾಗೂ ಇತರರು ಉಪಸ್ಥಿತರಿದ್ದರು.