ಸರಕಾರಿ ಸೌಲಭ್ಯಗಳ ಸದುಪಯೋಗಕ್ಕೆ ಕರೆ

ಸರಕಾರಿ ಸೌಲಭ್ಯಗಳ ಸದುಪಯೋಗಕ್ಕೆ ಕರೆ


ಲೋಕದರ್ಶನ ವರದಿ

ಶಿಗ್ಗಾವಿ01: ಸಕರ್ಾರ ಹಲವಾರು ಯೋಜನೆಗಳ ಮೂಲಕ ಹಾಗೂ ಸಬ್ಸಿಡಿ ಸಾಲಸೌಲಭ್ಯ ನೀಡುತ್ತಿದೆ, ಉದ್ಯೋಗಿನಿ ಯೋಜನೆ ಮೂಲಕ 3 ಲಕ್ಷದ ವರೆಗೆ ಸಾಲ ನೀಡುತ್ತಿದೆ 90 ಸಾವಿರ ಸಬ್ಸಿಡಿ ಇದೆ. ಇದೇ ರೀತಿ ಹಲವಾರು ಯೋಜನೆಗಳನ್ನು  ಸದ್ಬಳಕೆ ಮಾಡಿಕೊಂಡು ಸ್ವ ಸಾಮಥ್ರ್ಯದ ಮೇಲೆ ಅಭಿವೃದ್ದಿ ಹೊಂದಬೇಕು ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ಪಿ.ವಾಯ್.ಗಾಜಿಯವರ ಹೇಳಿದರು.

   ಪಟ್ಟಣದ ತಾಲೂಕ ಪಂಚಾಯತ ಸಭಾಭವನದಲ್ಲಿ ಬುಧವಾರ ಸಮರ್ಥನಂ ಅಂಗವಿಕಲರ ಸಂಸ್ಥೆ  ವಿಕಲಚೇತನರಿಗೆ ಒಂದು ದಿನದ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು. ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆತರಬೇಕು ಎಂಬ ಸದುದ್ದೇಶದಿಂದ ಸಮರ್ಥನಂ ಅಂಗವಿಕಲರ ಸಂಸ್ಥೆ ತರಬೇತಿ ಕಾಯರ್ಾಗಾರ ನಡೆಸುತ್ತಿರವದು ಶ್ಲಾಘನೀಯ ವಿಕಲಚೇತನರು ಅವರಿಂದ ತರಬೇತಿ ಪಡೆದು, ಸಕರ್ಾರದ ಯೋಜನೆಗಳನ್ನು ಪಡೆದು ಸ್ವ ಉದ್ಯೋಗ ಮಾಡಿ,  ದೇಶೀಯ ರಾಸಾಯನಿಕ ಮುಕ್ತ ಆಹಾರ ವಸ್ತುಗಳ ಬೇಡಿಕೆ ಹೆಚ್ಚಾಗಿದ್ದು ಅಂತ ಉದ್ಯೋಗದ ಮೂಲಕ ಅಭಿವೃದ್ದಿ ಹೊಂದಿ ಎಂದು ಸಲಹೆ ನೀಡಿದರು.

ತಾಪಂ ವ್ಯವಸ್ಥಾಪಕ ಸಂತೋಷ ಅಲಗೂರ ಮಾತನಾಡಿ, ವಿಕಲಚೇತನರು ಸಂಸ್ಥೆ ಮೂಲಕ ತರಬೇತಿ ಹೊಂದಿ ಹಾಗೂ ಸಕರ್ಾರದ ಸವಲತ್ತುಗಳನ್ನು ಪಡೆದು ಸ್ವ ಉದ್ಯೋಗದ ಮೂಲಕ ಸ್ವಾವಲಂಬಿ ಬದುಕು ನಡೆಸುವಂತೆ ಸಲಹೆ ನೀಡಿದರು.

     ಸಮರ್ಥನಂ ಅಂಗವಿಕಲರ ಸಂಸ್ಥೆಯ ನಂದನಕುಮಾರ ಮಾತನಾಡಿ, ಸಕರ್ಾರ ಹಲವಾರು ಯೋಜನೆಗಳನ್ನು ನೀಡುತ್ತಿದೆ ಅವು ಸಮರ್ಪಕವಾಗಬೇಕಾದರೆ ಕೌಶಲ್ಯ ತರಬೇತಿ ಮುಖ್ಯವಾಗಿದೆ. ನಮ್ಮ ಸಂಸ್ಥೆ  18 ರಿಂದ 30 ವರ್ಷದೊಳಗಿನ 10ನೇ ತರಗತಿಯ ಬರೆಗೆ ವ್ಯಾಸಾಂಗ ಮಾಡಿದ ವಿಕಲಚೇತನರಿಗೆ 3 ತಿಂಗಳ ಕಂಪ್ಯೂಟರ್ ಹಾಗೂ ಐಟಿ, ಬಿಪಿಒ, ಸ್ಪೋಕನ್ ಇಂಗ್ಲಿಷ ತರಬೇತಿ ಕಾಯರ್ಾಗಾರ ಮಾಡುವ ಕುರಿತು ಮಾಹಿತಿ ನೀಡಿದರು.

   ಸಮರ್ಥನಂ ಅಂಗವಿಕಲರ ಸಂಸ್ಥೆಯ ಗವಿಸಿದ್ದಪ್ಪ ಕೋರಗಲ್, ತಾಪಂ ಸಿಬ್ಬಂದಿ ಸುರೇಶ ತೆಗ್ಗಿಹಳ್ಳಿ, ಹಾಗೂ ಸಿದ್ದಪ್ಪ ಮುಸಳಿ ಸೇರಿದಂತೆ ತಾಲೂಕಿನ ವಿಕಲಚೇತನರು ಭಾಗವಹಿಸಿದ್ದರು.