ದಾಳಿ ನಡೆಸಿರುವ ದುಷ್ಕರ್ಮಿ ಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ

ಬೆಳಗಾವಿ, 24: ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಸಲ್ಲಿಸಲಾಗಿದ್ದ ಅರ್ಜಿ ಯನ್ನು ಹಿಂದಕ್ಕೆ ಪಡೆಯುವಂತೆ ಜೀವ ಬೆದರಿಕೆ ಹಾಕಿ, ಮನೆಯ ಮುಂದಿದ್ದ ಸಿಸಿ ಕ್ಯಾಮೆರಾವನ್ನು ಧ್ವಂಸ ಮಾಡಿರುವ ಮತ್ತು ಮನೆಯ ಮೇಲೆ ದಾಳಿ ನಡೆಸಿರುವ ಗ್ರಾಮ ಪಂಚಾಯತಿ ಸದಸ್ಯರ ಸದಸ್ಯತ್ವ ಅನರ್ಹಗೊಳಿಸಬೇಕು. ದಾಳಿ ನಡೆಸಿರುವ ದುಷ್ಕಮರ್ಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ರಾಮದುರ್ಗ ತಾಲೂಕಿನ ಓಬಳಾಪೂರ ಗ್ರಾಮದ ಮಾಹಿತಿ ಹಕ್ಕು ಕಾರ್ಯಕರ್ತ ಶ್ರೀನಿವಾಸಗೌಡ ಪಾಟೀಲ ಆಗ್ರಹಿಸಿದ್ದಾರೆ.

ಈ ಕುರಿತು ಅವರು ಬುಧವಾರದಂದು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾ ಹಕ ಅಧಿಕಾರಿಗಳು ಹಾಗೂ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಓಬಳಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೋಪಡ್ಲ ಗ್ರಾಮದ ಕೆಲ ಪಂಚಾಯತ ಸದಸ್ಯರು ಮತ್ತು ಓಬಳಾಪೂರ  ಗ್ರಾಮದ ಪಂಚಾಯತಿ ಸದಸ್ಯರ ಸಂಬಂಧಿಕರು ಸೇರಿ ನನ್ನ ಮನೆಯ ಮೇಲೆ ದಾಳಿ ನಡೆಸಿದ್ದಾರೆ ಮತ್ತು ಮನೆಗೆ ಅಳವಡಿಸಲಾಗಿದ್ದ ಸಿಸಿ ಕ್ಯಾಮೇರಾವನ್ನು ಧ್ವಂಸಗೊಳಿಸಿದ್ದಾರೆ. ಈ ಕುರಿತು ಎಫ್ಐಆರ್ ದಾಖಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಮಾಹಿತಿ ಹಕ್ಕಿನ ಅಡಿಯಲ್ಲಿ ಪಂಚಾಯತಿಯ ವ್ಯವಹಾರಗಳ ಬಗ್ಗೆ ಮಾಹಿತಿ ಕೇಳಿರುವದರ ಬಗ್ಗೆ ಈ ದುಷ್ಕರ್ಮಿಗಳು ಗ್ರಾಮಸ್ಥರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಪಂಚಾಯತಿಯ ಕೆಲಸ ಮಾಡಬಾರದು ಎಂದು ಅಜರ್ಿ ನೀಡಿದ್ದಾರೆ ಎಂದು ಸುಳ್ಳು ಹೇಳಿ ಗ್ರಾಮಸ್ಥರನ್ನು ನನ್ನ ವಿರುದ್ಧ ಎತ್ತಿ ಕಟ್ಟಿ ದಾಳಿ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಓಬಳಾಪೂರ ಗ್ರಾಮ ಪಂಚಾಯತಿಯಲ್ಲಿ ಕೆಲವು ಸದಸ್ಯರು ಪಂಚಾಯತಿ ಕೆಲಸಗಳನ್ನು ತಮ್ಮ ತಮ್ಮ ಸಂಬಂಧಿಕರಿಗೆ ನೀಡಿದ್ದಾರೆ ಮತ್ತು ಕೆಲಸ ಮಾಡದೆ ಹಣ ಪಡೆದಿದ್ದಾರೆ. ಪಂಚಾಯತಿಯಲ್ಲಿ 2017-18 ನೇ ಸಾಲಿನಲ್ಲಿ 19 ಲಕ್ಷ ರೂ. ದುರ್ಬಳಕೆಯಾಗಿರುವದು ಲೆಕ್ಕ ಪರಿಶೋಧಕರ ವರದಿಯಲ್ಲಿ ಧೃಡ ಪಟ್ಟಿದೆ. ಅಲ್ಲದೆ ಸ್ವಚ್ಛ ಭಾರತ ಮಿಶನ್ ಅಡಿಯಲ್ಲಿ 1 ಕೋಟಿಗಿಂತ ಅಧಿಕ ಹಣ ಖಚರ್ು ಮಾಡಿ, ವಯಕ್ತಿಕ ಶೌಚಾಲಯಗಳನ್ನು ನಿಮರ್ಿಸಲಾಗಿದೆ. ಆ ಶೌಚಾಲಯಗಳು ತೀರ ಕಳಪೆಯಾಗಿವೆ. ಈ ಯೋಜನೆಯ ಅರ್ಧದಷ್ಟು ಹಣ ದುರ್ಬಳಕೆಯಾಗಿದೆ. ವಸತಿ ಯೋಜನೆಗಳಲ್ಲೂ ಅವ್ಯವಹಾರ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಕುರಿತು ಸಮಗ್ರ ತನಿಖೆ ನಡೆಸಬೇಕು. ನಾಗರಿಕರ ಬದುಕಿನ ಹಕ್ಕಿಗೆ ಧಕ್ಕೆ ತಂದಿರುವ, ಭ್ರಷ್ಟಾಚಾರ ಮತ್ತು ದಾಳಿಯಲ್ಲಿ ಭಾಗಿಯಾಗಿರುವ ಸದಸ್ಯರ ಸದಸ್ಯತ್ವ ರದ್ದು ಪಡಿಸಬೇಕು. ಈ ಕುರಿತು ಶೀಘ್ರ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿರುವ ಅವರು, ಕ್ರಮ ಜರುಗಿಸದಿದ್ದರೇ, ಉಪವಾಸ ಸತ್ಯಾಗ್ರಹ ಆರಂಭಿಸುವದಾಗಿ ಎಚ್ಚರಿಕೆ ನೀಡಿದ್ದಾರೆ.