ಏಪ್ರಿಲ್ 1 ರಿಂದ 4 ಕಾರ್ಮಿಕ ಸಂಹಿತೆಗಳಿಗೆ ಕೇಂದ್ರ ಸರ್ಕಾರ ನಿಯಮಗಳನ್ನು ಜಾರಿಗೆ ತರುತ್ತಿರುವುದನ್ನು ವಿರೋಧಿಸಿ ಕಾರ್ಮಿಕ ಕರಾಳದಿನಾಚರಣೆಗೆ ಕರೆ
Call for a black day of labor to protest against the central government implementing rules for 4 lab
ಲೋಕದರ್ಶನ ವರದಿ
ಕೊಪ್ಪಳ 01: ನಾಲ್ಕು ಕಾರ್ಮಿಕ ಕಾಯಿದೆಗಳ ವಿರುದ್ಧ 2026ರ ಏಪ್ರಿಲ್ 1ರಿಂದ ಕರಾಳ ದಿನ ಆಚರಿಸಲು ಕೇಂದ್ರ ಕಾರ್ಮಿಕ ಸಂಘಟನೆಗಳು, ಅಖಿಲ ಭಾರತ ಪೆಢರೇಷನ್‌ಗಳ ಜಂಟಿ ವೇದಿಕೆಯು ಕರೆ ನೀಡಿದೆ.
ಏಪ್ರಿಲ್ 1 ರಿಂದ ಕೇಂದ್ರ ಸರ್ಕಾರ 4 ಕಾರ್ಮಿಕ ಸಂಹಿತೆಗಳ ಅನುಷ್ಠಾನಕ್ಕಾಗಿ ಕೇಂದ್ರ ನಿಯಮಗಳನ್ನು ಜಾರಿಗೆ ತರುವುದಾಗಿ ಘೋಷಿಸಿದೆ. ‘ವ್ಯವಹಾರವನ್ನು ಸುಲಭಿಕರಿಸಲು’ ಎಂಬ ಹೆಸರಿನಲ್ಲಿ ಕಾರ್ಮಿಕ ವಿರೋಧಿ ಮತ್ತು ಮಾಲೀಕರ ಪರವಾದ ಈ ಕಾರ್ಮಿಕ ಸಂಹಿತೆಗಳನ್ನು ಕಾರ್ಮಿಕ ಸಂಘಟನೆಗಳು ನಿರಂತರವಾಗಿ ವಿರೋಧಿಸುತ್ತಿವೆ ಮತ್ತು ಅವನ್ನು ರದ್ದುಪಡಿಸುವಂತೆ ಆಗ್ರಹಿಸುತ್ತಿವೆ.
2026ರ ಫೆಬ್ರವರಿ 12ರಂದು ನಡೆದ ಐತಿಹಾಸಿಕ ಸಾರ್ವತ್ರಿಕ ಮುಷ್ಕರದ ನಂತರವೂ ಕೇಂದ್ರ ಸರ್ಕಾರ ಈ ವಿಷಯದಲ್ಲಿ ಯಾವುದೇ ಗಂಭೀರ ಚರ್ಚೆಗೆ ಮುಂದೆ ಬಂದಿಲ್ಲ. ಕಾರ್ಮಿಕ ಸಂಹಿತೆಗಳ ರಚನೆಯ ಹಂತದಿಂದಲೂ ಕಾರ್ಮಿಕ ಸಂಘಟನೆಗಳೊಂದಿಗೆ ಯಾವುದೇ ಸಮಾಲೋಚನೆ ನಡೆಸಿಲ್ಲ. ಭಾರತದ ಕಾರ್ಮಿಕರ ಜೀವನಕ್ಕೆ ಸಂಬಂಧಿಸಿದಂತಹ ಮಹತ್ವದ ವಿಷಯದ ಬಗ್ಗೆ ಚರ್ಚಿಸಲು ಭಾರತೀಯ ಕಾರ್ಮಿಕ ಸಮ್ಮೇಳನವನ್ನೂ ಕರೆದಿಲ್ಲ.
ಇದು ಭಾರತವು ಬದ್ಧವಾಗಿರುವ ಅಂತರರಾಷ್ಟ್ರೀಯ ಕಾರ್ಮಿಕ ಮಾನದಂಡಗಳ ಉಲ್ಲಂಘನೆಯಾಗಿದೆ ಎಂದು ಸಿಐಟಿಯು ಅಭಿಪ್ರಾಯ ಪಟ್ಟಿದೆ. ಈ ಕಾರ್ಮಿಕ ಸಂಹಿತೆಗಳು ಕಾರ್ಮಿಕರನ್ನು ಮತ್ತೆ ಬ್ರಿಟಿಷ್ ವಸಾಹತು ಕಾಲದ ಶೋಷಣಾತ್ಮಕ ಪರಿಸ್ಥಿತಿಗಳಿಗೆ ತಳ್ಳಲಿವೆ.
ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಕಾಲಗಳಲ್ಲಿ ಕಾರ್ಮಿಕ ವರ್ಗವು ಕೆಲಸದ ಸುರಕ್ಷತೆ, ಸಂಘಟನೆಯ ಹಕ್ಕು, ತ್ರಿಪಕ್ಷೀಯ ಮಾತುಕತೆ, ಮುಷ್ಕರ ಹಕ್ಕು, ಸಮರ್ಕ ವೇತನ, ಸಾಮಾಜಿಕ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ, ಬೋನಸ್, ಗ್ರ್ಯಾಚ್ಯುಟಿ ಮತ್ತು ಪಿಂಚಣಿ ಹಕ್ಕುಗಳಿಗಾಗಿ ಹೋರಾಟ ನಡೆಸಿ ಈ ಹಕ್ಕುಗಳನ್ನು ಗಳಿಸಿದೆ.
1926ರ ಟ್ರೇಡ್ ಯೂನಿಯನ್ ಕಾಯ್ದೆಯ ಮೂಲಕ ಸಂಘಟನೆಯ ಹಕ್ಕು ಕಾನೂನೀಕರಿಸಲಾಯಿತು. ಬ್ರಿಟಿಷ್ ಕಾಲದಲ್ಲಿ ಐದು ಕಾನೂನುಗಳು ಮತ್ತು ಸ್ವಾತಂತ್ರ್ಯಾನಂತರ ಸಂಸತ್ತಿನ ಮೂಲಕ ಒಟ್ಟು 44 ಕೇಂದ್ರ ಕಾನೂನುಗಳು ಹಾಗೂ ರಾಜ್ಯ ಮಟ್ಟದಲ್ಲಿ ಸುಮಾರು 150 ಕಾನೂನುಗಳು ರೂಪಗೊಂಡಿವೆ. ಇವೆಲ್ಲವೂ ಸುಮಾರು 150 ವರ್ಷಗಳ ಹೋರಾಟದ ಫಲ. ಆದರೆ, ಈ ಎಲ್ಲಾ ಸಾಧನೆಗಳನ್ನು ಈಗಿನ ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರಚಿಸುವ ಮೂಲಕ ಅವೆಲ್ಲವನ್ನೂ ಹಿಂಪಡೆಯಲು ಪ್ರಯತ್ನಿಸುತ್ತಿದೆ.
ಈ ಸಂಹಿತೆಗಳಲ್ಲಿರುವ ಪ್ರಮುಖ ಅಂಶಗಳು :
ಸಿ ಸಂಘಟನೆಗೆ ಕಠಿಣ ನಿಯಮಗಳು,
ಸಿ ನೋಂದಣಿ ಕಷ್ಟಕರ, ಅಲ್ಲದೆ ರದ್ದತಿ ಸುಲಭವಾಗಲಿದೆ.
ಸಿ ಉದ್ಯೋಗದಾತರ ಕಾನೂನುಗಳ ಉಲ್ಲಂಘನೆಗಳನ್ನು ಅಪರಾಧವಲ್ಲದಂತೆ ಮಾಡುವುದಾಗಿದೆ.
2ನೇ ಪುಟಕ್ಕೆ........
-2-
ಸಿ ಕಾರ್ಮಿಕ ಸಂಘಟನೆಗಳ ಚಟುವಟಿಕೆಗಳನ್ನು ಅಪರಾಧೀಕರಣ ಎಂದು ಬಿಂಬಿಸಲಾಗುತ್ತದೆ.
ಸಿ ಕೆಲಸದ ಗಂಟೆಗಳಿಗೆ ಮಿತಿ ಇಲ್ಲದಂತೆ ಮಾಡುವುದಾಗಿದೆ.
ಸಿ ಮುಷ್ಕರ ಹಕ್ಕು ಅಸಾಧ್ಯವಾಗುತ್ತದೆ.
ಸಿ ಖಾಯಂ ಅವಧಿಯ ಉದ್ಯೋಗಗಳನ್ನು ಇಲ್ಲವಾಗಿಸುವುದು,
ಸಿ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ದುರ್ಬಲಗೊಳಿಸುವುದು,
ಸಿ ಕನಿಷ್ಠ ವೇತನವನ್ನು ಬಡತನ ರೇಖೆಗಿಂತ ಕಡಿಮೆ ಮಟ್ಟದಲ್ಲಿ ನಿಗದಿ ಮಾಡುವುದು,
ಸಿ ಖಾಯಂಯೇತರ ಕಾರ್ಮಿಕರಿಗೆ ಹಕ್ಕುಗಳೇ ಇಲ್ಲದಂತೆ ಮಾಡುವುದು, ಕಾರ್ಮಿಕರಿಗೆ
ಸಿ ಸುರಕ್ಷತಾ ನಿಯಮಗಳನ್ನು ಕಡಿಮೆ ಮಾಡುವುದಾಗಿದೆ.
ಕೇಂದ್ರ ಸರಕಾರದ ಕಾರ್ಮಿಕ ಸಂಹಿತೆಗಳು ಭಾರತೀಯ ಸಂವಿಧಾನದ ಆತ್ಮಕ್ಕೂ, ಅಂತರರಾಷ್ಟ್ರೀಯ ಕಾರ್ಮಿಕ ಮಾನದಂಡಗಳಿಗೂ ಹಾಗೂ ಮಾನವ ಹಕ್ಕುಗಳಿಗೂ ವಿರುದ್ಧವಾಗಿವೆ ಎಂದು ಸಿಐಟಿಯು ಅಭಿಪ್ರಾಯ ಪಟ್ಟಿದೆ. ಈ ಹಿನ್ನೆಲೆಯಲ್ಲಿಯಲ್ಲಿ, ಕಾರ್ಮಿಕ ಸಂಘಟನೆಗಳು ಹೋರಾಟ ಮುಂದುವರಿಸಲು ತೀರ್ಮಾನಿಸಿವೆ. 2026 ಫೆಬ್ರವರಿ 12ರ ರಾಷ್ಟ್ರವ್ಯಾಪಿ ಮುಷ್ಕರವನ್ನು ಯಶಸ್ವಿಗೊಳಿಸಿದ ಎಲ್ಲಾ ಕಾರ್ಮಿಕರು, ರೈತರು ಮತ್ತು ನಾಗರಿಕರಿಗೆ ಅಭಿನಂದನೆ ಸಲ್ಲಿಸುತ್ತಾ, ಮುಂದಿನ ದೀರ್ಘ ಹೋರಾಟಗಳಿಗೆ ಸಿದ್ಧರಾಗುವಂತೆ ಕರೆ ನೀಡಿದೆ.
ದೇಶದಾದ್ಯಂತ ಎಲ್ಲಾ ಕೆಲಸದ ಸ್ಥಳಗಳಲ್ಲಿ ಏಪ್ರಿಲ್ 1ರಂದು ಕಾರ್ಮಿಕರು ಕಪ್ಪುಬ್ಯಾಡ್ಜ್ ಧರಿಸುವ ಮುಖಾಂತರ ಕರಾಳ ದಿನಾಚರಣೆಯನ್ನು ಆಚರಿಸಬೇಕಿದೆ. ಕೈಗೆ/ತಲೆಗೆ ಕಪ್ಪು ಪಟ್ಟಿಗಳು ಕಟ್ಟುವುದು. ಊಟದ ವಿರಾಮದ ಅವಧಿಯಲ್ಲಿ ಪ್ರತಿಭಟನೆ ಮಾಡುವುದು, ಘೋಷಣೆ ಕೂಗುವುದು. ಧರಣಿ ಮತ್ತು ಮೆರವಣಿಗೆ ಸಂಘಟಿಸುವುದು. ಸೈಕಲ್/ಮೋಟಾರ್‌ಸೈಕಲ್ ಜಾಥಾ ಸೇರಿದಂತೆ ಇತರ ವೈವಿಧ್ಯಮಯ ಪ್ರತಿಭಟನೆಗಳನ್ನು ಸಂಘಟಿಸಲಾಗುತ್ತಿದೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 