ಮಹಾಲಿಂಗಪುರ03: ಮಾನತೆಯ ಸ್ವರೂಪವೆ ಭಾರತ ಸಂವಿಧಾನದ ಸಂಕಲ್ಪ. ದೇಶದ ಯುವ ಜನರು ಸಕರ್ಾರದ ಸೌಲಭ್ಯಕ್ಕೆ ಹಾತೋರೆಯದೆ ಅವಿಶ್ರಾಂತ ದುಡಿಮೆ, ಜ್ಞಾನಾರ್ಜನೆ ಸಂಪಾದಿಸಿ, ಕೌಶಲ್ಯಭರಿತ ಜೀವನ ರೂಪಿಸಿಕೊಳ್ಳಿ. ದೇಶದ ಆಸ್ತಿ ಯುವ ಜನಾಂಗ, ಭಾರತ ಘನತೆ ಗೌರವ ಎತ್ತರಿಸುವ ಕಾರ್ಯ ಎಸಗಲು ವಿದ್ಯಾರ್ಥಿಗಳಿಗೆ ಮುಧೋಳ ಪ್ರಧಾನ ದಿವಾಣಿ ನ್ಯಾಯಾಧೀಶರಾದ ಸುದೀನ್ಕುಮಾರ ಡಿ.ಜೆ. ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಮಹಾಲಿಂಗಪುರ ಸಕರ್ಾರಿ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ವಕೀಲರ ಸಂಘ, ಮುಧೋಳ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮುಧೋಳ ತಾಲೂಕು ಕಾನೂನು ಸೇವಾ ಸಮಿತಿ, ವಿವಿಧ ಇಲಾಖೆ ಹಾಗೂ ಸುವರ್ಣ ಮಹಿಳಾ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಕುರಿತು ಅಗತ್ಯ ಕಾನೂನು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನ್ಯಾಯವಾದಿ ಅನೀಲ ಓಸ್ವಾಲ ಅವರು ಮಾತನಾಡಿ, ಸಾರ್ವಜನಿಕ ಮೂಲಭೂತ ಹಕ್ಕುಗಳ ಅನುಚ್ಚೇದದ ಕುರಿತು ಸಂವಿಧಾನದ ಸಮಾನತೆಯ ವಿಶ್ಲೇಷಣೆಯನ್ನು ಮತ್ತು ವಾಕ್ ಸ್ವಾತಂತ್ರ್ಯದ ಅಭಿವ್ಯಕ್ತತೆಯನ್ನು ಸವಿಸ್ತಾರವಾಗಿ ವಿವರಿಸಿದರು.
ನ್ಯಾಯವಾಧಿ ಎಂ.ಕೆ.ಸಂಗಣ್ಣವರ ಅವರು ಸಂವಿಧಾನದಲ್ಲಿ ಬರುವ ಕರ್ತವ್ಯದ ಅನುಚ್ಚೇದದ ಕುರಿತು ಮಾಮರ್ಿಕವಾಗಿ ಮಾತನಾಡಿದರು.
ಪ್ರಾಚಾರ್ಯರಾದ ಎ.ಡಿ.ಬಾಗವಾನ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಶಾಂತ ಮುಖ್ಯೆನ್ನವರ, ಮಹಾಲಿಂಗಪುರ ಠಾಣಾಧಿಕಾರಿ ಆರ್.ಎಸ್.ಧರ್ಮಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವೈ.ದೇವಣಗಾಂವಿ, ನ್ಯಾಯವಾದಿಗಳಾದ ಎ.ಎಸ್.ಚಂದರಗಿ, ಎಂ.ಪಿ.ರೋಣದ, ಸುವರ್ಣ ಆಸಂಗಿ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಶಿವಾನಂದ ಹುಣಶ್ಯಾಳ, ಸದಸ್ಯ ನಂದು ಲಾತೂರ, ಮಿನಾಕ್ಷಿ ಹಿರೇಮಠ, ಇನ್ನೂ ಹಲವಾರು ನ್ಯಾಯವಾದಿಗಳು ಕಾಲೇಜು ಸಿಬ್ಬಂದಿ ವರ್ಗ, ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.