ಭಾರತ್ ಬಂದ್ಗೆ ಕರೆ: ಕೊಪ್ಪಳ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ

ಲೋಕದರ್ಶನ ವರದಿ ಕೊಪ್ಪಳ 08: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಾನಾ ಕಾಮರ್ಿಕ ಸಂಘಟನೆಗಳು ಕರೆ ನೀಡಿರುವ ದೇಶವ್ಯಾಪಿ ಬಂದ್ ಬಿಸಿ ಕೊಪ್ಪಳಕ್ಕೆ ತಟ್ಟಿಲ್ಲ. ಜಿಲ್ಲಾ ಕೇಂದ್ರವಾದ ಕೊಪ್ಪಳ ನಗರ ಸೇರಿದಂತೆ ಜಿಲ್ಲೆಯ ಬಹುಭಾಗ ತಾಲೂಕಾ, ಪಟ್ಟಣ ಕೇಂದ್ರಗಳಲ್ಲಿ ಭಾರತ ಬಂದ್ ಸಂಪೂರ್ಣ ವಿಫಲವಾಗಿದೆ ಎಂದು ಹೇಳಬಹುದಾಗಿದೆ. ಜನಜೀವನ ಯತಾಸ್ಥಿತಿಯಲ್ಲಿ ಮುಂದುವರೆದಿದೆ. ಶಾಲಾ ಕಾಲೇಜುಗಳಿಗೆ ಬಂದ್ ಶೇ.25% ರಷ್ಟು ತಟ್ಟಿದೆ. ಕೆಲವು ಶಾಲೆ ಅದರಲ್ಲೂ ಖಾಸಗಿ ಶಾಲೆ ಮುಂಜಾಗ್ರತೆ ಕ್ರಮವಾಗಿ ಬಂದ್ಗೆ ರಜೆ ಘೋಷಿಸಿದೆ. ಸರಕಾರಿ ಶಾಲಾ ಕಾಲೇಜು ಸೇರಿದಂತೆ ಕಛೇರಿಗಳು ಯಥಾವತ್ತಾಗಿ ಕಾರ್ಯನಿರ್ವಹಿಸಿದೆ. ಬ್ಯಾಂಕುಗಳು ತನ್ನ ವಹಿವಾಟು ಸ್ಥಗೀತಗೊಳಿಸಿಲ್ಲ. ಒಂದೆರಡು ಪ್ರಮುಖ ಬ್ಯಾಂಕ್ ಬಂದಾಗಿರುವ ಬಗ್ಗೆ ಮಾಹಿತಿ ದೊರೆತಿದೆ. ಬಸ್ ಸಂಚಾರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಅಂಗಡಿಗಳು ಮುಂಗಟ್ಟುಗಳು ಬಂದಾಗಿಲ್ಲ. ಕಾಮರ್ಿಕ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಕೇಂದ್ರ ಸರಕಾರದ ಬೆಲೆ ಏರಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮತ್ತು ಪೌರತ್ವ ಖಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಕಛೇರಿಗೆ ತೆರಳಿ ಸರಕಾರಕ್ಕೆ ಮನವಿ ಪತ್ರ ಅಪರ್ಿಸಿದರು.