ಕ್ಯಾಲೆಂಡರ್ ಬಿಡುಗಡೆ- ಅಭಿನಂದನಾ ಕಾರ್ಯಕ್ರಮ
Calendar release - Congratulatory program
ಧಾರವಾಡ 29: ಮರಾಠ ವಿದ್ಯಾ ಪ್ರಸಾರಕ ಮಂಡಳದ ಕ್ಯಾಲೆಂಡರ್ ಬಿಡುಗಡೆ ಮತ್ತು ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ಗಣನೀಯವಾಗಿ ಸೇವೆಯನ್ನು ಸಲ್ಲಿಸಿದ ಸುಭಾಷ ಯಲ್ಲಪ್ಪ ಶಿಂಧೆ ಅವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಯಶಸ್ವಿಗೊಳಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಮನೋಹರ ಎನ್ ಮೋರೆ ಅವರು ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದರು ಮತ್ತು ಮರಾಠ ವಿದ್ಯಾ ಪ್ರಸಾರಕ ಮಂಡಳದಲ್ಲಿ ಸತತವಾಗಿ 28 ವರ್ಷಗಳ ಕಾಲ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ಮತ್ತು ಕಾರ್ಯಾಧ್ಯಕ್ಷರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಸುಭಾಷ ಯಲ್ಲಪ್ಪ ಶಿಂಧೆ ಅವರಿಗೆ ಸನ್ಮಾನಿಸಲಾಯಿತು.ಸನ್ಮಾನಿತರು ಸಮಾಜದಲ್ಲಿ ಇಷ್ಟು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸುತ್ತಾ ಬಂದಿರುವುದು ನನ್ನ ಪುಣ್ಯ ಎಂದು ನುಡಿದರು.
ಅನುಭವವು ಸಂತೋಷ, ದುಃಖ, ನೋವು, ವಿಫಲತೆ, ಯಶಸ್ಸು, ಸಾಧನೆಗಳನ್ನು ಕಲಿಸುತ್ತದೆ ಅದಕ್ಕೆ ಜೀವನವು ಒಂದು ವಿಶ್ವವಿದ್ಯಾಲಯವಿದ್ದಂತೆ ಎಂದು ನುಡಿದರು. ಅಧ್ಯಕ್ಷೀಯವಾಗಿ ಮನೋಹರ ಮೊರೆ ಅವರು ಸಮಾಜದ ಒಳಿತಿಗಾಗಿ ಇಲ್ಲಿಯವರೆಗೂ ಸೇವೆಯನ್ನು ಸಲ್ಲಿಸುತ್ತಾ ಬಂದಿರುತ್ತಾರೆ ಮತ್ತು ಸಮಾಜದವರ ಸಹಕಾರದಿಂದ ಶೈಕ್ಷಣಿಕವಾಗಿ ಹಾಗೂ ಕಟ್ಟಡಗಳನ್ನು ನಿರ್ಮಿಸುವಲ್ಲಿ ಅಭಿವೃದ್ಧಿಯನ್ನು ಹೊಂದುತ್ತ ಬಂದಿರುತ್ತೇವೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಯಲ್ಲಪ್ಪ ಭೀಮಪ್ಪ ಚವ್ಹಾಣ, ಕಾರ್ಯಾಧ್ಯಕ್ಷರಾದ ಸುನಿಲ ಪ. ಮೋರೆ, ಗೌರವ ಕಾರ್ಯದರ್ಶಿಗಳಾದ ರಾಜು ತಿ. ಬಿರಜೆನವರ, ಸಹ ಕಾರ್ಯದರ್ಶಿಗಳಾದ ರಾಜು ಜ್ಯೋತಿಬಾ ಕಾಳೆ, ನಿರ್ದೇಶಕರಾದ ಈಶ್ವರ ಪಾಟೀಲ, ಶಿವಾಜಿ ಸೂರ್ಯವಂಶಿ, ಸುಭಾಷ ಧ. ಪವಾರ, ಪ್ರಸಾದ ಶಾಮರಾವ ಹಂಗಳಕಿ, ಮಲ್ಲೇಶಪ್ಪ ಶಿಂದೆ, ಮಹೇಶ ಶಿಂಧೆ ಹಾಗೂ ಸಮಾಜ ಬಾಂಧವರಾದ ಸಂಭಾಜಿ ಗೋಡ್ಸೆ, ಟಿ. ಕೆ. ಪವಾರ, ಮೋಹನ ಕೆಮಕರ, ವಾಸು ವಾಡ್ಕರ, ಸುಭಾಷ ಗಾಯಕ್ವಾಡ, ಚಂದ್ರಕಾಂತ ಜಮದಾಳೆ, ದಿನೇಶ ಡುಮ್ಮಾಳ, ಶಂಕರ ಇಂಗಳೇ, ರಮೇಶ ಕದಂ, ಸುಧೀರ ಜಾಧವ, ಸೋಮನಾಥ ನಲವಡೆ ಇನ್ನು ಮುಂತಾದ ಸಮಾಜ ಬಾಂಧವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಪ್ರಾಚಾರ್ಯರಾದ ಶೈಲಶ್ರೀ ಎಂ ಸಂಕೋಜಿ ಮಾತನಾಡಿದರು. ಉಪನ್ಯಾಸಕಿ ಲಕ್ಷ್ಮಿ ಮೇಟಿ ಅವರು ನಿರೂಪಣೆ ಮಾಡಿದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 