ಬೆಂಗಳೂರು, ಡಿ 14 ಸಚಿವ ಸಂಪುಟ
ವಿಸ್ತರಿಸುವುದು ಇಲ್ಲವೇ ಪುನಾರಚಿಸುವುದು ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರ ಪರಮಾಧಿಕಾರ
ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಬೆಂಗಳೂರಿನ
ಪಕ್ಷದ ಕೇಂದ್ರ ಕಚೇರಿಗೆ ಇಂದು ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ
ಮಾತನಾಡಿದ ಅವರು, ಮುಖ್ಯಮಂತ್ರಿಗಳು ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಸಚಿವ ಸಂಪುಟಕ್ಕೆ ಯಾರು ಸೂಕ್ತ,
ಯಾರಿಗೆ ಯಾವ ಖಾತೆ ನೀಡಬೇಕು ಎಂಬ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಕೆಲ ಶಾಸಕರು ಸಚಿವ ಸ್ಥಾನ ಇಲ್ಲವೇ
ಖಾತೆಗಳ ಬಗ್ಗೆ ಅಥವಾ ಕೆಲಸ ಸಚಿವರು ಮತ್ತೊಂದು ಉನ್ನತ ಹುದ್ದೆ ಬಗ್ಗೆ ಅಪೇಕ್ಷೆ ಹೊಂದುವುದರಲ್ಲಿ
ತಪ್ಪೇನಿಲ್ಲ. ಹಾಗೆಂದು ಇದನ್ನು ಅಸಮಧಾನ ಎಂದು ಅರ್ಥೈಸಿಕೊಳ್ಳಬಾರದು ಎಂದು ಹೇಳಿದರು. ಖಾತೆಯ ಬಗ್ಗೆ
ತಮಗೆ ಯಾವುದೇ ಅಸಮಾಧಾನವಿಲ್ಲ. ಏನೇ ಜವಾಬ್ದಾರಿ ನೀಡಿದರೂ ಸಮರ್ಥವಾಗಿ ನಿರ್ವಹಿಸುತ್ತೇನೆ. ತತ್ವಕ್ಕೆ
ಬದ್ಧನಾಗಿ ಕಾರ್ಯ ನಿರ್ವಹಿಸುತ್ತೇನೆ. ಈಗಿನ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸುವತ್ತ ಕಾರ್ಯಮಗ್ನನಾಗಿದ್ದೇನೆ.
ತಮಗೆ ವಹಿಸಿರುವ ಇಲಾಖೆಗಳಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ
ಎಂದು ಸಿ.ಟಿ.ರವಿ ಹೇಳಿದರು. ಪಕ್ಷದ ಕಾರ್ಯಕರ್ತರ ಪರಿಶ್ರಮದಿಂದ ರಾಜ್ಯದಲ್ಲಿ ಸ್ಥಿರ ಮತ್ತು ಸದೃಢ
ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಸಂಪುಟ ಸಚಿವರು ವಾರಕ್ಕೊಮ್ಮೆ ಬಿಜೆಪಿ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರನ್ನು
ಭೇಟಿ ಮಾಡಿ ಅವರ ಕುಂದು-ಕೊರತೆಗಳನ್ನು ವಿಚಾರಿಸಲಿದ್ದಾರೆ ಎಂದು ಶ್ರೀ ಸಿ.ಟಿ.ರವಿ ಹೇಳಿದರು ಬಳಿಕ ಸಿ.ಟಿ.ರವಿ ಅವರು ಮಲ್ಲೇಶ್ವರಂನ ಖಾಸಗಿ ಆಸ್ಪತ್ರೆಯಲ್ಲಿ
ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕರಾದ
ಸಿದ್ದರಾಮಯ್ಯ ಅವರವನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು