‘ವಯೋ ವಂದನಾ’ ಯೋಜನೆ ವಿಸ್ತರಣೆಗೆ ಸಚಿವ ಸಂಪುಟ ಒಪ್ಪಿಗೆ

ನವದೆಹಲಿ, ಮೇ 20, ವಯೋವೃದ್ಧರ ಆದಾಯ ಭದ್ರತೆ ಮತ್ತು ಕಲ್ಯಾಣಕ್ಕಾಗಿ 2020ರ ಮಾರ್ಚ್‍ 31ರಿಂದ ಅನ್ವಯವಾಗುವಂತೆ ಮೂರು ವರ್ಷಗಳ ಅವಧಿಗೆ ‘ಪ್ರಧಾನಮಂತ್ರಿ ವಯೋ ವಂದನಾ ಯೋಜನೆ’ ವಿಸ್ತರಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. 2020-21 ಸಾಲಿಗೆ ಶೇ 7.40ರಷ್ಟು ವಾರ್ಷಿಕ ಬಡ್ಡಿ ದರ ನೀಡುವುದಕ್ಕೂ ಸಂಪುಟ ಒಪ್ಪಿಗೆ ನೀಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಏಪ್ರಿಲ್‍ 1ರಿಂದ ಅನ್ವಯವಾಗುವಂತೆ ಹಿರಿಯ ನಾಗರಿಕ ಉಳಿತಾಯ ಯೋಜನೆಗೆ ವಾರ್ಷಿಕ ಕನಿಷ್ಠ ಶೇ 7.75ರಷ್ಟು ಬಡ್ಡಿದರಕ್ಕೂ ಸಚಿವ ಸಂಪುಟ ಒಪ್ಪಿಗೆ ನೀಡಿದೆ.  ಪ್ರತಿ ಹಣಕಾಸು ವರ್ಷದಲ್ಲಿ ಉಳಿತಾಯ ಮೇಲಿನ ಬಡ್ಡಿದರ ಪರಿಷ್ಕರಣೆ ಮಾಡಲು  ಹಣಕಾಸು ಸಚಿವಾಲಯಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.  ಈ ಯೋಜನೆಯಡಿ, 12 ಸಾವಿರ ಪಿಂಚಣಿ ಪಡೆಯುವವರು 1,56,658 ರೂ ಪಡೆಯುವುದಕ್ಕೆ ಹಾಗೂ 10,000 ಮಾಸಿಕ ಪಿಂಚಣಿ ಪಡೆಯುವವರು ಕನಿಷ್ಠ 1,62,162 ರೂ ಪಿಂಚಣಿ ಪಡೆಯುವುದಕ್ಕೆ ಕನಿಷ್ಠ ಹೂಡಿಕೆಯನ್ನು ಪರಿಷ್ಕರಿಸಲಾಗಿದೆ.