ಬಂದರು ಟ್ರಸ್ಟ್, ಹಡಗುಕಟ್ಟೆ ಕಾರ್ಮಿಕ ಮಂಡಳಿ ಉದ್ಯೋಗಿಗಳಿಗೆ ಪಿಎಲ್ಆರ್ ಯೋಜನೆ ವಿಸ್ತರಣೆಗೆ ಸಚಿವ ಸಂಪುಟ ಒಪ್ಪಿಗೆ

 ನವದೆಹಲಿ, ಜ 29:     ಯೋಜನೆಯಲ್ಲಿ ಯಾವುದೇ ಬದಲಾವಣೆ ಇಲ್ಲವೇ ತಿದ್ದುಪಡಿ ಮಾಡುವವರೆಗೆ ಸದ್ಯ, ಅಸ್ತಿತ್ವದಲ್ಲಿರುವ ಉತ್ಪಾದಕತೆ ಜೋಡಣೆ ಪುರಸ್ಕಾರ (ಪಿಎಲ್‌ಆರ್) ಯೋಜನೆಯನ್ನು 2017-18ರ ಆಚೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

 ಈ ಯೋಜನೆಯಿಂದ ವಾರ್ಷಿಕವಾಗಿ 28,821 ಪ್ರಮುಖ ಬಂದರು ಟ್ರಸ್ಟ್‌ಗಳು ಮತ್ತು ಹಡಗುಕಟ್ಟೆ ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ.  ಪ್ರಸ್ತುತ ವೇತನ ಮಿತಿಯಲ್ಲಿ ತಿಂಗಳಿಗೆ 7,000 ರೂ.ನಂತೆ ಉತ್ಪಾದಕತೆ  ಸಂಯೋಜನೆ ಪುರಸ್ಕಾರ ಲೆಕ್ಕಹಾಕಲಾಗುವುದು ಎಂದು ಕೇಂದ್ರ ಸಚಿವ ಪ್ರಕಾಶ್‍ ಜಾವಡೇಕರ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

 ಈ ಯೋಜನೆಯು ಉತ್ತಮ ಉತ್ಪಾದಕತೆಯನ್ನು ಉತ್ತೇಜಿಸುವುದರೊಂದಿಗೆ  ಬಂದರು ವಲಯದಲ್ಲಿ ಉತ್ತಮ ಕೈಗಾರಿಕಾ ಸಂಬಂಧ ಮತ್ತು  ಕೆಲಸದ ವಾತಾವರಣವನ್ನು ಬೆಳೆಸುತ್ತಿದೆ.

 ಪ್ರಮುಖ ಬಂದರು ಟ್ರಸ್ಟ್‌ಗಳು ಮತ್ತು ಹಡಗುಕಟ್ಟೆ ಮಂಡಳಿ ಉದ್ಯೋಗಿಗಳಿಗೆ ಉತ್ಪಾದಕತೆ ಸಂಯೋಜನೆಯ ಪುರಸ್ಕಾರ ನೀಡುವ ಯೋಜನೆ ಅಸ್ತಿತ್ವದಲ್ಲಿದೆ. ಇದರಲ್ಲಿ ಉತ್ಪಾದಕತೆ ಸಂಯೋಜನೆ ಪುರಸ್ಕಾರವನ್ನು ಸಂಯೋಜಿತ ಬಂದರುಗಳ ಕಾರ್ಯಕ್ಷಮತೆ ಸೂಚ್ಯಂಕದ ಆಧಾರದ ಮೇಲೆ ನೀಡಲಾಗುತ್ತದೆ.