ಬಾಗಲಕೋಟೆ25: ಬಡ ರೋಗಿಗಳಿಗೆ ಅನುಕೂಲವಾಗಲೆಂದು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ಜೂನ್ 2018 ರಿಂದ ಆರಂಭಗೊಂಡಿರುವ ಸಿಟಿಸ್ಕ್ಯಾನ್ ಸೆಂಟರನಿಂದ ಈವರೆಗೆ ಸುಮಾರು 5600 ರೋಗಿಗಳನ್ನು ತಪಾಸಿಸಲಾಗಿದೆ.
ಖಾಸಗಿ ಆಸ್ಪತ್ರೆಗಳ ನಗರಯೆಂದೇ ಖ್ಯಾತಿಗೊಳಪಟ್ಟ ಬಾಗಲಕೋಟೆ ನಗರಕ್ಕೆ ಸಿಟಿ ಸ್ಕ್ಯಾನ್ ಉಚಿತ ಸೇವೆಯಿಂದಾಗಿ ಸಾಕಷ್ಟು ಅನುಕೂಲವಾಗಿದೆ. ರಾಷ್ಟ್ರೀಯ ಆರೋಗ್ಯ ಮಿಶನ್ ಯೋಜನೆಯಡಿ ಪಿಪಿಪಿ (ಖಾಸಗಿ-ಸಾರ್ವಜನಿಕ ಸಹಭಾಗಿತ್ವ) ಯಡಿಯಲ್ಲಿ ಪುಣೆಯ ಕೃಸ್ನಾ ಡೈಗ್ನೋಸ್ಟಿಕ್ ಸಂಸ್ಥೆಯು ಆರಂಭಿಸಿರುವ ಈ ಕಾರ್ಯಕ್ರಮದಡಿ ಬಾಗಲಕೋಟೆ ಸೇರಿದಂತೆ ವಿಜಯಪುರ, ಯಾದಗಿರಿ ಹಾಗೂ ಧಾರವಾಡ ಜಿಲ್ಲೆಯಲ್ಲಿ ಪ್ರತಿದಿನ ನೂರಾರು ರೋಗಿಗಳು ಇದರ ಉಚಿತ ಸೇವೆ ಪಡೆಯುತ್ತಿದ್ದಾರೆ. ತಲೆಯಿಂದ ಪಾದದವರೆಗೆ ದೇಹದ ಪ್ರತಿ ಅಂಗಾಂಗಗಳನ್ನು ಪರೀಕ್ಷಿಸಿ ನ್ಯೂನತೆಗಳನ್ನು ತಕ್ಷಣವೇ ಕಂಡು ಹಿಡಿಯುವ ಸಿಟಿಸ್ಕ್ಯಾನ್ 24*7 ಅವಧಿಗೆ ಕಾರ್ಯನಿರ್ವಹಿಸುತ್ತದೆ.
ಜಿಲ್ಲಾ ಆಸ್ಪತ್ರೆಯ ವೈದ್ಯರ ಶಿಫಾರಸ್ಸಿನ ಮೇರೆಗೆ ದಿನನಿತ್ಯ 25 ರಿಂದ 30 ರೋಗಿಗಳನ್ನು ಪರೀಕ್ಷಿಸಲಾಗುತ್ತಿದೆ. ತುತರ್ು ಚಿಕಿತ್ಸಾ ರೋಗಿಗಳಿಗೆ ಮೊದಲ ಆಧ್ಯತೆ ನೀಡಲಾಗುವದಲ್ಲದೇ ಇದರಿಂದ ಸಾಕಷ್ಟು ಅನುಕೂಲಗಳಾಗುತ್ತಿರುವ ಬಗ್ಗೆ ಘಟಕದ ತಂತ್ರಜ್ಞಾರಾದ ಅಜಿತ ಶೇಟಫಾಳಕರ ಜೈನ್ ತಿಳಿಸಿದರು. ಸದ್ಯ ಒಟ್ಟು 5 ಜನರು ಈ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಪಘಾತ ಸಂಬಂಧಿತ ರೋಗಿಗಳಿಗೆ ತಕ್ಷಣವೇ ಸ್ಪಂಧಿಸಲಾಗುತ್ತದೆ. ದೂರದ ಮುಧೋಳ, ಜಮಖಂಡಿ ಸುತ್ತಲಿನ ಬಡರೋಗಿಗಳೂ ಸಹ ದಿನನಿತ್ಯ ಬರುತ್ತಿದ್ದಾರೆ.
ಖಾಸಗಿಯಾಗಿ ಪರೀಕ್ಷೆ ಮಾಡಲು ಸಿಟಿಸ್ಕ್ಯಾನ್ಗೆ ಕನಿಷ್ಟ 3-4 ಸಾವಿಗಳಷ್ಟು ಖಚರ್ಾಗುತ್ತದೆ. ಹೊಟ್ಟೆ, ಎದೆನೋವಿನ ರೋಗಿಗಳೇ ಹೆಚ್ಚಾಗಿ ಪರೀಕ್ಷೆಗೊಳಪಡುತ್ತಾರೆ. ಮೆದುಳು, ಮೂತ್ರಪಿಂಡ, ಎಂಜಿಯೋಗ್ರಾಫಿ ಬೆನ್ನೆಲುಬು, ಮೂಗು, ಅಂಗಾಗಳನ್ನು ಸಹ ಪರೀಕ್ಷಿಸಿ ತಕ್ಷಣವೇ ವರದಿ ನೀಡಲಾಗುತ್ತದೆ. ಘಟಕದಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಯಾವುದೇ ರೋಗಿಯಿಂದಲೂ ಯಾರ ಹಣ ಪಡೆಯುವದಿಲ್ಲ. ಸಂಪೂರ್ಣ ಉಚಿತವಾಗಿದ್ದು, ಜಿಲ್ಲೆಯ ಜನರು ಇದರ ಸದುಪಯೋಗ ಪಡೆಯಬಹುದಾಗಿದೆ.