ಇಂಡಿಯನ್ 2” ಚಿತ್ರೀಕರಣ: ಕ್ರೇನ್ ಬಿದ್ದು ಮೂವರ ದಾರುಣ ಸಾವು

ಚೆನ್ನೈ, ಫೆ 20 ,“ನಟ ಕಮಲ್ ಹಾಸನ್ ಅಭಿನಯದ“ ಇಂಡಿಯನ್ 2 ”ಚಿತ್ರದ ಶೂಟಿಂಗ್ಗೆ ಬಳಸಿದ ಕ್ರೇನ್  ಕುಸಿದುಬಿದ್ದು  ಸಹಾಯಕ ನಿರ್ದೇಶಕರು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.ಆದರೆ ಈ ಘಟನೆಯಲ್ಲಿ  ನಟ ಕಮಲ್ ಹಾಸನ್ ಪವಾಡ ಸದೃಶ  ರೀತಿಯಲ್ಲಿ ಪ್ರಣಾಪಾಯದಿಂದ ಪರಾಗಿದ್ದಾರೆ. ದುರಂತದಲ್ಲಿ  9 ಮಂದಿ ಗಾಯಗೊಂಡಿದ್ದಾರೆ.ಖಾಸಗಿ ಸ್ಟುಡಿಯೊದ ಇವಿಪಿ ಫಿಲ್ಮ್ ಸಿಟಿಯಲ್ಲಿ ಒಂದು ದೃಶ್ಯವನ್ನು ಚಿತ್ರೀಕರಿಸಲು ತೊಡಗಿದ್ದಾಗ ಈ ಅಪಘಾತ ಸಂಭವಿಸಿದೆ ಎಂದೂ  ಪೊಲೀಸರು ತಿಳಿಸಿದ್ದಾರೆ. 

ಕಮಲ್  ಹಾಸನ್ ಮತ್ತು ಚಿತ್ರ ನಿರ್ದೇಶಕ ಎಸ್.ಶಂಕರ್ ದುರಂತದಿಂದ ಪಾರಾಗಿದ್ದಾರೆ. ಮೃತರನ್ನು ಚಿತ್ರದ ಸಹಾಯಕ ನಿರ್ದೇಶಕ ಕೃಷ್ಣ (34), ಅಡುಗೆ ತಂಡದ ಭಾಗವಾಗಿದ್ದ ಮಧು (29) ಮತ್ತು ಚಂದ್ರನ್ (60) ಎಂದು ಗುರುತಿಸಲಾಗಿದೆ.ಗಾಯಗೊಂಡವರನ್ನು  ಪೂನಮಲ್ಲಿ ಖಾಸಗಿ ಆಸ್ಪತ್ರೆಗೆ ಕರೆತರಲು ನಟ ಕಮಲ್ ಹಾಸನ್  ಸಹಕರಿಸಿ  ದುರಂತದ ಬಗ್ಗೆ  ಶೋಕ ವ್ಯಕ್ತಪಡಿಸಿದ್ದಾರೆ. ನಜರಾತ್ಪೇಟೆ ಪೊಲೀಸರು ಪ್ರಕರಣ ದಾಖಲಿಸಿದ್ದು ಅಪಘಾತದ ಕಾರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.