ನವದೆಹಲಿ, ಮಾ 9,ಕರೋನ ಸೋಂಕು ವಿಶ್ವದ ಉದ್ಯಮ ರಂಗ ಮತ್ತು , ಆರ್ಥಿಕತೆ ಮೇಲೆ ಪರಿಣಾಮ ಬೀರಿರುವುದು ಹಳೆಯ ಸುದ್ದಿಯಾದರೂ ಶಿಕ್ಷಣ ವಲಯದ ಮೇಲೂ ಬಹಳ ಕೆಟ್ಟ ಪರಿಣಾಮ ಬೀರಿದ್ದು, 25 ರಾಷ್ಟ್ರಗಳ 300 ದಶಲಕ್ಷ ಮಕ್ಕಳು ಶಾಲೆಯಿಂದ ದೂರ ಉಳಿದಿದ್ದಾರೆ. ವೈರಸ್ ಹೆದರಿಕೆಯ ಕಾರಣ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳು ತಾತ್ಕಾಲಿಕವಾಗಿ ಮತ್ತು ಅನಿರ್ದಿಷ್ಟವಾಗಿ ಸ್ಥಗಿತಗೊಳಿಸಲಾಗಿದೆ. ಹೆಚ್ಚು ಹೆಚ್ಚು ಜನರು ಮನೆಯಲ್ಲೇ ಇರಲು ಆಯ್ಕೆಮಾಡಿಕೊಂಡಿರುವುದರಿಂದ, ವಿಶ್ವಸಂಸ್ಥೆಯ ಅಂದಾಜು 300 ಮಿಲಿಯನ್ ಮಕ್ಕಳಬಾಧಿತರಾಗಿ ಶಾಲೆಯಿಂದ ದೂರವೇ ಉಳಿದಿದ್ದಾರೆ. ಕರೋನವೈರಸ್ ಏಕಾಏಕಿ ಹಿನ್ನೆಲೆಯಲ್ಲಿ 25 ಕ್ಕೂ ಹೆಚ್ಚು ದೇಶಗಳು ಕೆಲವು ರೀತಿಯ ಶಾಲೆಗಳನ್ನು ಮುಚ್ಚಿವೆ, 14 ದೇಶಗಳು ರಾಷ್ಟ್ರವ್ಯಾಪಿ ಶಾಲೆಗಳನ್ನು ಮುಚ್ಚುವುದನ್ನು ಕಡ್ಡಾಯಗೊಳಿಸಿವೆ, ಸುಮಾರು 290 ಮಿಲಿಯನ್ ಶಾಲೆಗೆ ಹೋಗುವ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ . ಚೀನಾ, ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ, ಜಪಾನ್, ಇರಾನ್, ಇಟಲಿ, ಕುವೈತ್, ಲೆಬನಾನ್, ಮಂಗೋಲಿಯಾ, ಜಾರ್ಜಿಯಾ, ಬಹ್ರೇನ್, ಅರ್ಮೇನಿಯಾ, ಅಜೆರ್ಬೈಜಾನ್, ಯುಎಇ ಮತ್ತು ಕೊರಿಯಾ ದೇಶಾದ್ಯಂತ ಶಾಲೆಗಳನ್ನು ಮುಚ್ಚಿವೆ.ಶಾಲೆಗಳನ್ನು ಸ್ಥಳೀಯವಾಗಿ ಮುಚ್ಚಿದ ದೇಶಗಳಲ್ಲಿ ಭಾರತವೂ ಸೇರಿದೆ. ಆ ಸಾಲಿಗೆ ಸೇರಿದ ಇತರೆ ರಾಷ್ಟ್ರಗಳೆಂದರೆ ಅಫ್ಘಾನಿಸ್ತಾನ, ಭೂತಾನ್, ಫ್ರಾನ್ಸ್, ಜರ್ಮನಿ, ಗ್ರೀಸ್, ಇರಾಕ್, ಪಾಕಿಸ್ತಾನ, ಪ್ಯಾಲೆಸ್ಟೈನ್, ಉಕ್ರೇನ್, ಯುಕೆ, ಅಮೆರಿಕ ಮತ್ತು ವಿಯೆಟ್ನಾಂ ಸಹ ಸೇರಿದೆ. ಸಾಫ್ಟ್ ವೇರ್ ಸೇರಿದಂತೆ ಅನೇಕ ಉದ್ಯಮಗಳ ಮೇಲೂ ಇದು ಬಹಳ ಕೆಟ್ಟ ಪರಿಣಾಮ ಬೀರಿದೆ.