ನಟ ದರ್ಶನ್ ಹುಟ್ಟುಹಬ್ಬದ ಆಯೋಜಕರ ವಿರುದ್ಧ ದೂರು

ಬೆಂಗಳೂರು, ಫೆ 17, ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟು ಹಬ್ಬ ಆಯೋಜಕರ ಹಾಗೂ ಅಭಿಮಾನಿಗಳ ವಿರುದ್ಧ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ದರ್ಶನ್ ಮನೆ ಪಕ್ಕದ ನಿವಾಸಿ ರಾಮಪ್ರಸಾದ್ ಎಂ.ಎಸ್ ಎಂಬುವವರು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ದರ್ಶನ್  ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಫೆ 15ರಂದು ಅವರ ನಿವಾಸದ ಎದುರು ನೆರೆದಿದ್ದ ಅಭಿಮಾನಿಗಳು ತಮ್ಮ ಕೆಎ-02 ಎಂಎನ್ 1396 ಸಂಖ್ಯೆಯ ಕಾರು ಜಖಂಗೊಳಿಸಿದ್ದು, 40  ಸಾವಿರ ಮೌಲ್ಯದಷ್ಟು ಹಾನಿಯಾಗಿದೆ. ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಇರುವುದು ಈ ಘಟನೆಗೆ  ಕಾರಣವಾಗಿದೆ ಎಂದು ಆರೋಪಿಸಿ,  ದರ್ಶನ ಅಭಿಮಾನಿ, ಆಯೋಜಕರ ವಿರುದ್ಧ ಕಾನೂನು ಕ್ರಮ  ಕೈಗೊಳ್ಳಬೇಕು ಎಂದು ಅವರು ದೂರು ನೀಡಿದ್ದಾರೆ.ದೂರು ಸ್ವೀಕರಿಸಿ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.