ವಿಧಾನಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ‘ಮಹಾ’ ಸಿಎಂ ಉದ್ಧವ್ ಠಾಕ್ರೆ

ಮುಂಬೈ, ಮೇ ೧೮, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ  ಸೋಮವಾರ ಮಧ್ಯಾಹ್ನ  ವಿಧಾನಪರಿಷತ್ ಸದಸ್ಯರಾಗಿ  ಪ್ರಮಾಣ ವಚನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ   ವಿವಿಧ ರಾಜಕೀಯ ಪಕ್ಷಗಳ   ಎಂಟು ಸದಸ್ಯರು  ವಿಧಾನಪರಿಷತ್ ಸದಸ್ಯರಾಗಿ  ಪ್ರಮಾಣ ವಚನ ಸ್ವೀಕರಿಸಿದರು.ವಿಧಾನಪರಿಷತ್  ಸಭಾಪತಿ ರಾಮರಾಜೆ ನಿಂಬಾಳ್ಕರ್   ನೂತನ ೯ ಸದಸ್ಯರಿಗೆ   ಪ್ರಮಾಣ ವಚನ ಬೋಧಿಸಿದರು ಮುಖ್ಯಮಂತ್ರಿ  ಉದ್ಧವ್ ಠಾಕ್ರೆ ಅವರೊಂದಿಗೆ  ಪತ್ನಿ  ರಷ್ಮಿ ಠಾಕ್ರೆ  ಮತ್ತು  ಇತರ ಉನ್ನತ ಅಧಿಕಾರಿಗಳು  ಹಾಜರಿದ್ದರು.ಖಾಲಿ ಉಳಿದಿದ್ದ  ವಿಧಾನಪರಿಷತ್ತಿನ ೯ ಸ್ಥಾನಗಳಿಗೆ   ನಾಮಪತ್ರಸಲ್ಲಿಸಿದ ನಂತರ ಮೇ ೧೪ ರಂದು ಎಲ್ಲ ಒಂಬತ್ತು ಮಂದಿ    ಅವಿರೋಧವಾಗಿ  ಚುನಾಯಿತರಾಗಿದ್ದರು. ಉದ್ದವ್ ಠಾಕ್ರೆ ಅವರೊಂದಿಗೆ ಶಿವಸೇನೆಯ ನೀಲಂ  ಗೋರೆ  ಬಿಜೆಪಿಯಿಂದ ಗೋಪಿಚಂದ್ ಪಡಲ್ಕರ್,  ಪ್ರವೀಣ್  ದಾಟ್ಕೆ, ರಂಜಿತ್ ಸಿಂಹ್  ಮೋಹಿತ್ ಪಾಟೀಲ್, ರಮೇಶ್  ಕರಾದ್, ಕಾಂಗ್ರೆಸ್  ನ  ರಾಜೇಶ್ ರಾಥೋಡ್, ಎನ್ ಸಿಪಿ ಸೇರಿದ ಶಶಿಕಾಂತ್ ಶಿಂಧೆ ಆಮೂಲ್ ಮಿಟ್ಕಾರಿ  ಪ್ರಮಾಣ  ಸ್ವೀಕರಿಸಿದವರಲ್ಲಿ  ಸೇರಿದ್ದಾರೆ.
ಮಹಾರಾಷ್ಟ್ರ  ಮುಖ್ಯಮಂತ್ರಿಯಾಗಿ ಉದ್ದವ್ ಠಾಕ್ರೆ ೨೦೧೯ ನವಂಬರ್ ೨೮ರಂದು ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ,  ಆಗ  ಅವರು ಯಾವುದೇ ಶಾಸನ ಸಭೆ( ವಿಧಾನಸಭೆ,ವಿಧಾನಪರಿಷತ್)  ಸದಸ್ಯರಾಗಿರಲಿಲ್ಲ.  ಇದರಿಂದ  ಸಂವಿಧಾನದ ಕಲಂ ೧೬೪ ಪ್ರಕಾರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಆರು ತಿಂಗಳೊಳಗಾಗಿ  ಉಭಯ ಸದನಗಳ ಪೈಕಿ ಯಾವುದಾದರೂ ಒಂದು ಸಭೆಗೆ   ಆಯ್ಕೆಯಾಗುವುದು  ಅನಿವಾರ್ಯವಾಗಿತ್ತು.  ಕೊರೊನಾ ಕರಾಣದಿಂದ  ಚುನಾವಣೆಗಳನ್ನು  ರದ್ದುಗೊಳಿಸಲಾಯಿತು. ಆದರೆ, ಕೇಂದ್ರ  ಚುನಾವಣಾ ಆಯೋಗದ ಮಧ್ಯಪ್ರವೇಶದಿಂದ  ಚುನಾವಣೆ   ನಡೆಸಲು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ  ಹಸಿರು ನಿಶಾನೆ ತೋರಿಸಿದ ಕಾರಣ ಉದ್ದವ್   ಠಾಕ್ರೆ  ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.ಒಂದು  ವೇಳೆ  ವಿಧಾನಪರಿಷತ್ ಸದಸ್ಯರಾಗಿ  ನಾಮಕರಣಗೊಳ್ಳದಿದ್ದರೆ, ಮೇ ೨೮ರೊಳಗೆ  ಠಾಕ್ರೆ   ಅವರು ಮುಖ್ಯಮಂತ್ರಿ ಪದವಿಗೆ ರಾಜೀನಾಮೆ  ನೀಡಬೇಕಾಗುತ್ತಿತ್ತು.  ಈಗ ಅವಿರೋಧವಾಗಿ ಆಯ್ಕೆಯಾಗಿರುವ  ಕಾರಣ ಉದ್ದವ್ ಠಾಕ್ರೆ  ಮುಖ್ಯಮಂತ್ರಿಯಾಗಿ  ಮುಂದುವರಿಯಲಿದ್ದಾರೆಮಹಾರಾಷ್ಟ್ರ  ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಉದ್ದವ್   ಠಾಕ್ರೆ  ನೇತೃತ್ವದ ಶಿವಸೇನಾ.. ಬಿಜೆಪಿ  ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದವಾದರೂ,  ನಂತರ ನಡೆದ  ಪರಿಣಾಮಗಳ  ಹಿನ್ನಲೆಯಲ್ಲಿ  ಬಿಜೆಪಿಯ ಮೈತ್ರಿಯನ್ನು ಶಿವಸೇನಾ ಕಳೆದುಕೊಂಡಿತ್ತು.   ಶಿವಸೇನ- ಕಾಂಗ್ರೆಸ್  - ಎನ್ ಸಿಪಿ   ಮೈತ್ರಿ ಕೂಟದ  ನಾಯಕರಾಗಿ   ಹೊರಹೊಮ್ಮಿದ್ದ    ಉದ್ದವ್ ಠಾಕ್ರೆ ಮುಖ್ಯಮಂತ್ರಿಯಾಗಿ  ನವಂಬರ್ ೨೮ರಂದು  ಪ್ರಮಾಣ ವಚನ ಸ್ವೀಕರಿಸಿದ್ದರು.