'ಬಡವರ ಬಂಧು' ಯೋಜನೆಗೆ ಸಿಎಂ ಕುಮಾರಸ್ವಾಮಿ ಚಾಲನೆ

ಬಂಗಳೂರು, ನ.22- ಬೀದಿ ಬದಿ ವ್ಯಾಪಾರಿಗಳಿಗೆ ಪೊಲೀಸರು ಮತ್ತು  ಅಧಿಕಾರಿಗಳು ಗದಾಪ್ರಹಾರ ಮಾಡಿ  ಎತ್ತಂಗಡಿ ಮಾಡದೆ ಅವರಿಗೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚಿಸಿದರು.

ಸಹಕಾರ ಇಲಾಖೆ ಯಶವಂತಪುರ ಎಪಿಎಂಸಿ ಮಾರುಕಟ್ಟೆ ಯಾಡರ್್ನಲ್ಲಿ ಆಯೋಜಿಸಿದ್ದ ರಾಜ್ಯ ಸಕರ್ಾರದ ಮಹತ್ವಾಕಾಂಕ್ಷೆಯ ಬಡವರ ಬಂಧು ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸಣ್ಣ ಪುಟ್ಟ ವ್ಯಾಪಾರಿಗಳಿಗೆ ತೊಂದರೆ ಕೊಡದೆ ಅವರಿಗೆ ಜಾಗ ಗುರುತಿಸಿಕೊಡಿ.ಅವರಿಂದ 50, 100ರೂ.ವಸೂಲಿ ಮಾಡುವುದಕ್ಕೆ ಕಡಿವಾಣ ಹಾಕಬೇಕು.ಈ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಹೇಳಿದರು.

ಕಾನ್ಸ್ಟೇಬಲ್ಗಳಿಗೆ ಸಂಬಳ ಸಾಕಾಗುತ್ತಿಲ್ಲ ಎಂಬುದು ಗೊತ್ತಿದೆ.ಅವರ ಸಮಸ್ಯೆಗೆ ಪರಿಹಾರ ನೀಡಿ ಉತ್ತಮ ಜೀವನಕ್ಕೂ ಸವಲತ್ತು ಕೊಡಲಾಗುವುದು.ನಿಷ್ಟೆಯಿಂದ ಕೆಲಸ ಮಾಡಿ ಎಂದು ತಿಳಿಸಿದರು.

ಚಿಕ್ಕಂದಿನಿಂದ ಬಡವರ ಕಷ್ಟ ನೋಡಿದ್ದೇನೆ. ಅವರ ಕಷ್ಟಗಳಿಗೆ ಸ್ಪಂದಿಸಬೇಕೆಂಬ ಉದ್ದೇಶದಿಂದ ಬಡವರ ಬಂಧು ಯೋಜನೆ ಪ್ರಾರಂಭಿಸಿದ್ದೇನೆ.  ಲೇವಾದೇವಿದಾರರಿಂದ ಕಿರುಕುಳಕ್ಕೊಳಗಾಗುತ್ತಿರುವ ಸಣ್ಣ ವ್ಯಾಪಾರಿಗಳ ಬದುಕು ನೆಮ್ಮದಿಯಾಗಿರಲಿ ಎಂಬುದೂ ನಮ್ಮ ಉದ್ದೇಶ ಎಂದರು.

ಕೈಗೆ ಚಿನ್ನದ ಕಡಗ, ಕತ್ತಿಗೆ ಚಿನ್ನದ ಸರ ಧರಿಸಿದವರು ಬೆಳಗ್ಗೆ ಸಾಲ ಕೊಡುತ್ತಾರೆ.ಸಂಜೆ ವಸೂಲು ಮಾಡುತ್ತಾರೆ.ಬೆಳಗ್ಗೆ 5 ಗಂಟೆ ವೇಳೆಗೆ ತಳ್ಳುವ ಗಾಡಿ ಕೆಳಗೆ ಮಕ್ಕಳನ್ನು ಮಲಗಿಸಿ ವ್ಯಾಪಾರ ಮಾಡಿದರೂ ನೆಮ್ಮದಿ ಇರುತ್ತಿರಲಿಲ್ಲ. ರಕ್ತ ಹೀರುವವರ ಕಪಿ ಮುಷ್ಟಿಯಿಂದ ಅವರನ್ನು ಹೊರತರಲು 10 ಸಾವಿರ ರೂ.ವರೆಗೂ ಬಡ್ಡಿ ರಹಿತ ಸಾಲ ನೀಡುವ ಯೋಜನೆ ತರಲಾಗಿದೆ. ಸಂಜೆ ಮನೆಗೆ ನೆಮ್ಮದಿಯಾಗಿ ಮರಳಬೇಕು ಎಂಬ ಉದ್ದೇಶದಿಂದ ಆಥರ್ಿಕ ಇಲಾಖೆ ನೀಡಿದ  ಹೊರೆಯಾಗಲಿದೆ ಎಂಬ ಸಲಹೆಯನ್ನು ಬದಿಗಿರಿಸಿ ನಾಲ್ಕೂವರೆ ಲಕ್ಷ ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲವಾಗುವ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ ಎಂದರು.

ಉತ್ತಮ ರೀತಿಯಲ್ಲಿ ಈ ಯೋಜನೆಯನ್ನು ಬಳಸಿಕೊಳ್ಳಿ, ಚಕ್ರಬಡ್ಡಿ ನೀಡುತ್ತಿದ್ದವರಿಗೆ ಯಾವ ರೀತಿ ಮರುಪಾವತಿ ಮಾಡುತ್ತಿದ್ದಿರೋ ಅದೇ ರೀತಿ ಇಲಾಖೆಗೆ ಸಾಲ ಮರುಪಾವತಿಸುವುದರಿಂದ ಮರು ಸಾಲ ಪಡೆಯಲು ಅನುಕೂಲವಾಗುತ್ತದೆ ಎಂದು ಸಿಎಂ ಸಲಹೆ ನೀಡಿದರು.

ಇನ್ಫೋಸಿಸ್ನ ನಾರಾಯಣಮೂತರ್ಿ ಅವರು 10ಸಾವಿರ ಮೂಲ ಬಂಡವಾಳದಿಂದ ಪ್ರಾರಂಭಿಸಿ ಇಂದು ಲಕ್ಷಾಂತರ ಮಂದಿಗೆ ಉದ್ಯೋಗ ನೀಡುತ್ತಿದ್ದಾರೆ.ಅವರನ್ನು ಮಾದರಿಯನ್ನಾಗಿಟ್ಟುಕೊಳ್ಳಿ ನಿರಾಶರಾಗಬೇಡಿ. ನಿಮ್ಮ ಮನೆ ಬಾಗಿಲಿಗೆ ಸಾಲ ನೀಡುವ  ಯೋಜನೆ ತಂದಿದ್ದೇವೆ ಎಂದರು.

ಜನ ಸಹಕಾರ ನೀಡಿದರೆ ಬೆಂಗಳೂರಿನ ವಾಹನ ದಟ್ಟಣೆ, ಕಸವಿಲೇವಾರಿ ಸಮಸ್ಯೆಗಳಿಗೂ ಕಠಿಣ ಕ್ರಮ ಕೈಗೊಳ್ಳುವ ಅಭಿಲಾಷೆ ಇದೆ.  ಪೆರಿಪೆರಲ್ ರಿಂಗ್ ರಸ್ತೆಗೆ 12 ಸಾವಿರ ಕೋಟಿ ರೂ.ಬೇಕಾಗಿತ್ತು.ಈಗ 17 ಸಾವಿರ ಕೋಟಿ ಬೇಕು.ಭೂ ಸ್ವಾಧೀನ ಮಾಡಿಕೊಳ್ಳಲು ಬೇಕಾಗಿರುವ ನಾಲ್ಕೂವರೆ ಸಾವಿರ ಕೋಟಿ ರೂ.ಗಳನ್ನು ಸಕರ್ಾರವೇ ಭರಿಸಲು ತೀಮರ್ಾನಿಸಿದೆ ಎಂದು ಸಿಎಂ ಹೇಳಿದರು.

ಬಡ್ಡಿ ವಸೂಲಿ ಮಾಡುವವರು ಗುಂಡಾಗಳನ್ನು ಬಳಸುತ್ತಾರೆ ಎಂಬುವುದನ್ನು ಪ್ರಸ್ತಾಪಿಸಿ, ನಾನು ಯಾವ ರೀತಿ ಮಾತನಾಡಬೇಕು ಎಂಬ ಬಗ್ಗೆ ಸಮಿತಿ ರಚಿಸಿ ಅವರ ಸಲಹೆಯಂತೆ ಭಾಷಣ ಮಾಡಬೇಕೇನೋ ಎಂದು ಬೇಸರ ವ್ಯಕ್ತಪಡಿಸಿದರು.

ಡಿಸಿಎಂ ಡಾ.ಜಿ.ಪರಮೇಶ್ವರ್ ಮಾತನಾಡಿ, ಬಡವರ ಬಂಧು ಯೋಜನೆ ಬೀದಿ ಬದಿ ವ್ಯಾಪಾರಿಗಳ ಬಾಳಿಗೆ ಬೆಳಕು ನೀಡುವ ಯೋಜನೆಯಾಗಿದೆ ಎಂದು ಹೇಳಿದರು.

ಶೇ.10ರಿಂದ 50ರಷ್ಟು ಬಡ್ಡಿ ಕಟ್ಟಿ ಶಾರೀರಿಕ, ಮಾನಸಿಕ, ಹಿಂಸೆ ಅನುಭವಸುತ್ತಿದ್ದುದನ್ನು ತಪ್ಪಿಸಲು ನಮ್ಮ ಸಮ್ಮಿಶ್ರ ಸಕರ್ಾರ ಈ ಯೋಜನೆ ತಂದಿದೆ ಎಂದು ತಿಳಿಸಿದರು.

ಈ ಯೋಜನೆ ಯಾವುದೇ ಕಾರಣಕ್ಕೂ ವ್ಯರ್ಥವಾಗಬಾರದು.ನಮ್ಮ ಕ್ಷೇತ್ರದ ಹೂ ಮಾರುವ ರಾಜಮ್ಮ ಎಂಬಾಕೆಯ ಮಗ ಐಎಎಸ್ ಆಗಿದ್ದಾನೆ. ನೀವೂ ಕೂಡ ನಿರಾಶರಾಗಬೇಡಿ.ನಿಮ್ಮ ಮಕ್ಕಳೂ ಸಹ ಇಂಜಿನಿಯರ್, ಡಾಕ್ಟರ್ ಆಗಬಹುದು.ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.