ಲೋಕದರ್ಶನವರದಿ
ಮುಧೋಳ: ಕಳೆದ ಸುಮಾರು 16 ವರ್ಷಗಳಿಂದ ರಾಜ್ಯದಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಅತಿಥಿ ಉಪನ್ಯಾಸಕರಾಗಿ ಸರಕಾರಿ ಪ್ರಥಮ ದಜರ್ೆ ಹಾಗೂ ಪಿ.ಯು. ಮಹಾವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವವರನ್ನು ಕೂಡಲೆ ಖಾಯಂಗೊಳಿಸಿ ಹಾಗೂ ಅವರ ಗೌರವ ಧನವನ್ನು ಹೆಚ್ಚಿಸಿ ಕುಟುಂಬಕ್ಕೆ ಭದ್ರತೆ ನೀಡಬೆಕೆೆಂದು ಅತಿಥಿ ಉಪನ್ಯಾಸಕರ ಸಂಘದವರು ರಾಜ್ಯದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಯುಜಿಸಿ.ಯ ಮಾನದಂಡಗಳ ಪ್ರಕಾರ ಎಲ್ಲ ಅರ್ಹತೆ ಹೊಂದಿದ್ದರು ಕೂಡ ನಮ್ಮನ್ನು ಖಾಯಂಗೊಳಿಸಿವುದಿಲ್ಲ ಮೇಲಾಗಿ ಗೌರವಧನವನ್ನು ಕೂಡಾ ಹೆಚ್ಚಿಸಿರುವುದಿಲ್ಲವೆಂದು ಮನವಿಯಲ್ಲಿ ಅತಿಥಿ ಉಪನ್ಯಾಸಕರು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.
ಮನವಿ ಸ್ವಿಕರಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಕಾರಜೋಳರು, ಅತಿಥಿ ಉಪನ್ಯಾಸಕರ ಬೇಡಿಕೆಗಳು ನ್ಯಾಯಸಮ್ಮತವಾಗಿದ್ದು, ಈ ಕುರಿತು ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರ ಜೊತೆ ಮಾತನಾಡಿ, ಅವರ ಬಹು ದಿನದ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಸ್ಪಂಧಿಸುವುದಾಗಿ ಕಾರಜೋಳ ಭರವಸೆ ನೀಡಿದರು.
ಡಿಡಿಪಿಯು. ಶ್ರೀಧರ ಪೂಜಾರ ಸರಕಾರಿ ಪ್ರಥಮ ದಜರ್ೆ ಕಾಲೇಜಿನ ಪ್ರಾ. ಎನ್.ಎಲ್.ತೇರದಾಳ, ಪ್ರಾ. ಪಿ.ಐ.ಭಂಡಾರಿ, ಪ್ರಾ.ಬಸವರಾಜ ಗಂಜಿಹಾಳ, ಪ್ರಾ.ಲಿಂಗದ, ಬಿಇಓ.ವಿಠ್ಠಲ ದೇವಣಗಾಂವಿ, ಬಿಜೆಪಿ ಅಧ್ಯಕ್ಷರಾದ ಗುರುರಾಜ ಕಟ್ಟಿ, ಕೆ.ಆರ್.ಮಾಚಪ್ಪನವರ, ಪ್ರಮುಖರಾದ ಆರ್.ಎಸ್.ತಳೇವಾಡ, ಉಪನ್ಯಾಸಕರು ಹಾಗೂ ಗಣ್ಯರು ವಿದ್ಯಾಥರ್ಿಗಳು ಉಪಸ್ಥಿತರಿದ್ದರು.