ಕೇಂದ್ರ ಸರಕಾರ ಆರ್ಥಿಕ ನೀತಿ ವಿರೋಧಿಸಿ ಹೋರಾಟಕ್ಕೆ ಸಿಐಟಿಯು ಕರೆ

ಲೋಕದರ್ಶನ ವರದಿ

ರಾಮದುರ್ಗ 03: ಹಿಂದೆ ಬ್ರಿಟಿಷರ ಕಾಲದಲ್ಲಿ ದೊಡ್ಡ ಹೋರಾಟವೇ ನಡೆದು, ಕಾರ್ಮಿಕರು ಸೌಲಭ್ಯಗಳನ್ನು ಪಡೆದಿದ್ದಾರೆ. ಹೋರಾಟ ಮಾಡುವ ಹಕ್ಕು ಸಂಘಟನೆ ಕಟ್ಟುವದು ನಮಗೆ ಸಿಕ್ಕಿದ್ದು ಹೋರಾಟದಿಂದಲೇ. ಆದರೇ ಇವತ್ತೂ ಹೋರಾಟದ ಹಕ್ಕನ್ನು ಹಾಗೂ ಸಂಘಟನೆ ಕಟ್ಟುವ ಹಕ್ಕುಗಳನ್ನು ಕಿತ್ತುಕೊಳ್ಳುವ ಕೆಲಸ ಕೇಂದ್ರ ಸರಕಾರ ನಡೆಸಿದೆ ಎಂದು ಸಿಐಟಿಯು 6 ನೇ ಸಮ್ಮೇಳನದ ಭಾಗವಾಗಿ ಸರಸ್ವತಿ ಕಲ್ಯಾಣ ಮಂಟಪದಲ್ಲಿ ನಡೆದ ಬಹಿರಂಗ ಸಭೆಯನ್ನು ಉದ್ದೇಶಿಸಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಕಾಂ|| ಆರ್. ಮಹಾಂತೇಶ ಮಾತನಾಡಿದರು.

ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಇಂತಹ ಸಂದಿಗ್ದ ಸಂದರ್ಭದಲ್ಲಿ ಕೇಂದ್ರ ಮೋದಿ ಸರಕಾರ ಬೆಲೆ ಏರಿಕೆ ನಿಯಂತ್ರಣ ಮಾಡುವಲ್ಲಿ ವಿಫಲವಾಗಿದೆ. ಇದಕ್ಕೆ ಕಾರಣ ಜಿಎಸ್ಟಿ ಹೆಚ್ಚು ಮಾಡಿದ್ದು. ನೋಟು ಅಮಾನ್ಯಿಕರಣದಿಂದ ಆಗಿದೆ. ಇದರಿಂದ ದೇಶದ ಆರ್ಥಿಕ ವ್ಯವಸ್ಥೆ ಕುಸಿದು ಹೋಗಿದೆ. ಈ ನೀತಿಯ ವಿರುದ್ದ ಜನ ಹೋರಾಟಕ್ಕೆ ತಯಾರಾಗಬೇಕೆಂದು ಕಾಂ|| ಮಹಾಂತೇಶರವರು ಕರೆ ನೀಡಿದರು. ಕಳೆದ 30 ವರ್ಷಗಳಿಂದ ಜಿಲ್ಲೆಯಲ್ಲಿ ಕಾರ್ಮಿಕರುನ್ನು ಸಂಘಟಿಸಿ ಅವರ ಬೇಡಿಕೆಗಳಿಗೆ ಪ್ರಾಮಾಣಿಕ ಪ್ರಯತ್ನ ಸಿಐಟಿಯು ಮಾಡಿದೆ. ಇನ್ನೂ ಮುಂದುವರೆದೂ ಪ್ರಬಲ ಸಂಘಟನೆ ಕಟ್ಟುವದಕ್ಕೆ ನಾವೇಲ್ಲರೂ ಒಕ್ಕಟ್ಟಾಗಿ ಇರಬೇಕು. ನಮ್ಮ ಮಧ್ಯಮದಲ್ಲಿ ಜಾತಿಯ ಬೀಜ ಬಿತ್ತಲು ಬರುವ ಜನರ ಬಗ್ಗೆ ಎಚ್ಚರದಿಂದರಬೇಕೆಂದು ಬಹಿರಂಗ ಸಭೆಯ ಅಧ್ಯಕ್ಷತೆ ವಹಿಸಿ ಕಾಂ|| ವ್ಹಿ.ಪಿ. ಕುಲಕರ್ಣಿರವರು ಮಾತನಾಡಿದರು.

ಕೊನೆಯಲ್ಲಿ ಜಿಲ್ಲಾ ಸಂಚಾಲಕ ಸಮಿತಿ ರಚನೆಯಾಗಿ ಜಿಲ್ಲೆಯ ಸಂಚಾಕರಾಗಿ ಕಾಂ|| ಗೈಬು ಜೈನೆಖಾನರವರು ಸರ್ವಾನುಮತದಿಂದ ಆಯ್ಕೆಯಾದರು. 10 ಜನ ಸಹ ಸಂಚಾಲಕರು, 22 ಜನ ಸಂಚಾಲನಾ ಸಮಿತಿ ಒಟ್ಟು 33 ಜನ ಸಿಐಟಿಯು ಜಿಲ್ಲಾ ಸಂಚಾಲಕ ಸಮಿತಿಗೆ ಆಯ್ಕೆಯಾದರು.

ಕೊನೆಯಲ್ಲಿ ನೂತನವಾಗಿ ಆಯ್ಕೆಯಾದ ಗೈಬು ಜೈನೆಖಾನ್ ವಂದಿಸಿ ಜಿಲ್ಲಾ ಸಮ್ಮೇಳನ ಕಲಾಪಗಳನ್ನು ಮುಕ್ತಾಯ ಮಾಡಿದರು.