ನವದೆಹಲಿ, ಜ.17 ,ಈ ತಿಂಗಳ ಅಂತ್ಯದ ವೇಳೆಗೆ ಜಮ್ಮು ಮತ್ತು ಶ್ರೀನಗರ ವಿಮಾನ ನಿಲ್ದಾಣದ ಭದ್ರತಾ ಜಬಾವ್ದಾರಿಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ವಹಿಸಿಕೊಳ್ಳಲಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.ಜಮ್ಮು ಮತ್ತು ಕಾಶ್ಮೀರ ಆಡಳಿತವು ಗುರುವಾರ ಸಂಜೆ ಈ ನಿರ್ಧಾರವನ್ನು ಕೈಗೊಂಡಿದ್ದು, ಜಮ್ಮು ಮತ್ತು ಶ್ರೀನಗರ ವಿಮಾನ ನಿಲ್ದಾಣಗಳನ್ನು ತಕ್ಷಣದ ಭದ್ರತೆಗಾಗಿ ರಾಷ್ಟ್ರೀಯ ನಾಗರಿಕ ವಿಮಾನಯಾನ ಭದ್ರತಾ ಪಡೆಗೆ ಕೇಳಿದೆ.ಜನವರಿ 11ರಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಡಿಎಸ್‌ಪಿ ದೇವಿಂದರ್ ಸಿಂಗ್ ಎಂಬವರು ಕುಲ್ಗಾಮ್ ಜಿಲ್ಲೆಯ ಮಿರ್ ಬಜಾರ್‌ನಲ್ಲಿ ಇಬ್ಬರು ಹಿಜ್ಬುಲ್ ಭಯೋತ್ಪಾದಕರನ್ನು ಕರೆದೊಯ್ಯುತ್ತಿದ್ದಾಗ ಅವರನ್ನು ಬಂಧಿಸಲಾಗಿತ್ತು.ಡಿಎಸ್‌ಪಿ ವಿಮಾನ ನಿಲ್ದಾಣದ ಭದ್ರತೆಯಾಗಿ ನೇಮಕಗೊಂಡಿದ್ದ ಮತ್ತು ಭಯೋತ್ಪಾದಕರನ್ನು ದೇಶದ ಇತರ ಭಾಗಗಳಿಗೆ ಕಳುಹಿಸುತ್ತಿದ್ದ ಡಿವೈಎಸ್‌ಪಿ ದೇವಿಂದರ್ ಸಿಂಗ್ ಅವರನ್ನು ಬಂಧಿಸಿದ ಇತ್ತೀಚಿನ ಬೆಳವಣಿಗೆಗಳ ಬಳಿಕ ಈ ಹಸ್ತಾಂತರ ನಡೆದಿದೆ.ರಾಜ್ಯದ ಮೂರು ವಿಮಾನ ನಿಲ್ದಾಣಗಳನ್ನು ಸಿಐಎಸ್‌ಎಫ್‌ಗೆ ಹಸ್ತಾಂತರಿಸಲು ರಾಜ್ಯ ಆಡಳಿತ ಕಳೆದ ವರ್ಷ ನಿರ್ಧರಿಸಿತ್ತು.ಜಮ್ಮು ಮತ್ತು ಶ್ರೀನಗರ ವಿಮಾನ ನಿಲ್ದಾಣಗಳಲ್ಲಿ ಭದ್ರತೆಯನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಮತ್ತೊಂದು ಪ್ಯಾರಾ ಮಿಲಿಟರಿ ಫೋರ್ಸ್ ಮತ್ತು ರಾಜ್ಯ ಪೊಲೀಸರು ಒದಗಿಸುತ್ತಿದ್ದಾರೆ.ಜಮ್ಮು ಮತ್ತು ಶ್ರೀನಗರ ವಿಮಾನ ನಿಲ್ದಾಣದ ಭದ್ರತೆಯನ್ನು ವಹಿಸಿಕೊಂಡ ನಂತರ, ಲೇಹ್ ವಿಮಾನ ನಿಲ್ದಾಣವೂ ಸಿಐಎಸ್ಎಫ್ ಭದ್ರತೆಯಲ್ಲಿ ಇರಲಿದೆ ಎಂದು ಮೂಲಗಳು ತಿಳಿಸಿವೆ.ರಾಷ್ಟ್ರೀಯ ನಾಗರಿಕ ವಿಮಾನಯಾನ ಭದ್ರತಾ ಪಡೆ ಸಿಐಎಸ್ಎಫ್, ದೇಶದ ದೆಹಲಿ, ಮುಂಬೈ ಸೇರಿದಂತೆ 61 ವಿಮಾನ ನಿಲ್ದಾಣಗಳನ್ನು ಕಾವಲು ನೀಡುತ್ತಿದೆ.