ರಾಯಭಾಗ, ಫೆ 14 : ಚಿಂಚಲಿ ಪಟ್ಟಣದಲ್ಲಿ ಉತ್ತರ ಕರ್ನಾಟಕ ಹಾಗೂ ಪೂರ್ವ ಮಹಾರಾಷ್ಟ್ರ ಭಾಗಗಳ ಆರಾಧ್ಯ ದೈವ ಚಿಂಚಲಿಯ ಮಾಯಕ್ಕಾದೇವಿ ಜಾತ್ರೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣ ಸಿಂಗಾರಗೊಂಡಿದೆ.
ಒಂದು ತಿಂಗಳ ಕಾಲ ಈ ವೈಭವದ ಜಾತ್ರೆ ನಡೆಯಲಿದ್ದು, ಮುತೈದೆ ಹುಣ್ಣುಮೆ ಬಡವರ ಭಾರತ ಹುಣ್ಣಿಮೆ ಎಂದು ಕರೆಯಲಾಗುವ ಸಂದರ್ಭದಲ್ಲಿ ಜಾತ್ರೆ ನಡೆಯುವುದು ವೈಶಿಷ್ಟ್ಯ. ಈ ಹುಣ್ಣುಮೆಯಿಂದ ಬರುವ ಹುಣ್ಣುಮೆವರೆಗೆ ನಡೆಯುವ ಈ ಜಾತ್ರೆಗೆದ ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಭಕ್ತಸಾಗರವೇ ಹರಿದು ಬರುತ್ತಿದೆ. ಮಹಾ ನೈವೈದೈ ದಿನವಾದ ಇಂದು ಭಕ್ತರ ಸೇನೆಯೇ ನೆರೆದಿತ್ತು. ದೇವಿಯ ದರ್ಶನ ಪಡೆದು ಭಕ್ತಾದಿಗಳು ಕೃತಾರ್ಥರಾದರು.
ದಕ್ಷಿಣ ಭಾರತದ ಜಾಗೃತ ದೇವಿ ಶ್ರೀಮಾಯಾಕ್ಕಾನ ಸ್ಮರಣೆ ಮುಗಿಲು ಮುಟ್ಟಿದೆ. ಕೃಷ್ಣಾ ನದಿಯಲ್ಲಿ ಭಕ್ತ ಸಮೂಹ ಸ್ನಾನ ಮಾಡಿ ಅಲ್ಲಿದ ನೀರು ತಂದು ಅಡುಗೆ ಮಾಡುವುದು ವಾಡಿಕೆ. ದೇವಿ ಶಕ್ತಿಯ ಮಹ್ವತದ ಬಗ್ಗೆ ಹಾಡುತ್ತಾ ನೈವೈದೈ ತಯಾರಿಸಿ. ದೇವಸ್ಥಾನಕ್ಕೆ ಕಪ್ಪು ಬಟ್ಟೆ ತೊಡ್ಡು ವೈವೇದ್ಯ ಅರ್ಪಿಸಲಾಗುತ್ತದೆ. ತಂಡ ತಂಡವಾಗಿ ಕುಣಿಯುತ್ತಾ, ವಾದ್ಯಗಳು ಹಾಗೂ ಡೊಳ್ಳು ಬಾರಿಸುತ್ತಾ ದೇವಿಗೆ ನೈವೈದೈ ಅರ್ಪಣೆ ಮಾಡುವುದೇ ಒಂದು ವೈಭೋಗ.
ಹಸ್ತಾ ನಕ್ಷತ್ರದಂದು ರಾತ್ರಿ ಸರಿಯಾಗಿ 12 ಗಂಟೆಗೆ ಮಾಯಾಕ್ಕಾ ದೇವಿಯ ಬೆಳ್ಳಿ ಪಲ್ಲಕ್ಕಿ ಹೊರಡುತ್ತದೆ. ಪಲ್ಲಕ್ಕಿಯಲ್ಲಿ ಬಂಗಾರದ ಉತ್ಸವ ಮೂರ್ತಿ ಇಟ್ಟು ದೇವಸ್ಥಾನವನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕುವಾಗ ದೇವಿಯ ಭಕ್ತರು ರಾತ್ರಿಪಲ್ಲಕ್ಕಿಯ ಮೇಲೆ ಖಾರೀಕು, ಕೊಬ್ಬರಿ, ಹವಳ, ಮುತ್ತು. ಭಂಡಾರವನ್ನು ಹಾಕುತ್ತಾರೆ. ದೇವಿ ದರ್ಶನಕ್ಕಾಗಿ ಬರುವ ಭಕ್ತಾದಿಗಳು ಸಮುದ್ರದ ಅಲೆಗಳಂತೆ ಕಂಗೊಳಿಸುವುದೇ ಒಂದು ಪವಾಡ.
ಈ ಜಾತ್ರೆಯ ಸಮಯದಲ್ಲಿ ದೂರದ ಊರಿನಿಂದ ಬಂದ ಭಕ್ತರಿಗೆ ಪಟ್ಟಣದ ಜನ ಪ್ರತಿಯೊಂದು ಮನೆಯಲ್ಲೂ ಭಕ್ತಾದಿಗಳನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತಾರೆ. ಜಾತ್ರೆಯ ವೇಳೆಯಲ್ಲಿ ಪಟ್ಟಣದ ಆಕಾರವೇ ಬದಲಾಗುತ್ತದೆ. ದೇವಿ ಮಾಯಾಕ್ಕನನ್ನು ಮಾಕುಬಾಯಿ, ಮಾಯಾಕ್ಕಾ, ಮಾಯಮ್ಮಾ, ಮಹಾಕಾಲಿ, ಪಾರ್ವತಿ ಅವತಾರ, ಎಂದು ಹೀಗೆ ಅನೇಕ ಹೆಸರುಗಳಿಂದ ಭಕ್ತಸಾಗರ ಕರೆಯುತ್ತದೆ.
ಶ್ರೀಮಾಯಾಕ್ಕಾ ದೇವಿ ಜಾತ್ರೆ ದೇಶದ ಅತ್ತಿಡೊಡ್ಡ ಜಾತ್ರೆ ಎಂಬ ಮಹತ್ವ ಹೊಂದಿದ್ದು, ಐದು ದಿನಗಳ ಕಾಲ ಮಂಗಳ ಕಾರ್ಯಗಳು ನೆರವೇರುತ್ತದೆ. ಕಷ್ಟ, ಕಾರ್ಪಣ್ಯಗಳನ್ನು ಹೊಂದಿರುವವರು ಮಾಯಕ್ಕ ಜಾತ್ರೆಗೆ ಬಂದರೆ ಅವರ ಸಮಸ್ಯೆ ನಿವಾರಣೆಯಾಗುತ್ತದೆ ಎನ್ನುವ ಪ್ರತೀತಿ ಇದೆ.