ವಿಚ್ಛೇದನ ಪ್ರಕರಣಗಳಲ್ಲಿ ತೀವ್ರ ಸಂಕಷ್ಟ ಅನುಭವಿಸುವರು ಮಕ್ಕಳು ಮಾತ್ರ ..... ಸುಪ್ರೀಂ ಕೋಟರ್್

ನವದೆಹಲಿ, ಫೆ 19, ವಿವಾಹ ವಿಚ್ಛೇದನ  ಪ್ರಕರಣಗಳಲ್ಲಿ   ತೊಂದರೆ  ಅನುಭವಿಸುವವರು   ಪತಿ ಪತ್ನಿಯಲ್ಲ,   ಅವರಿಗೆ  ಜನಿಸಿದ  ಮಕ್ಕಳು    ಎಂದು ಸುಪ್ರೀಂ ಕೋಟರ್್  ಬುಧವಾರ  ಅಭಿಪ್ರಾಯಪಟ್ಟಿದೆ.  ಪತಿ ಪತ್ನಿ  ಬೇರ್ಪಡೆಗೊಂಡಾಗ  ತಮ್ಮ ಮಕ್ಕಳು  ಯಾರು   ಬಳಿ   ಇರಬೇಕು  ಎಂಬ ಬಗ್ಗೆ ವಾದಗಳು  ನಡೆಯುತ್ತವೆ.  ಈ ಪೈಕಿ  ಯಾರೋ ಒಬ್ಬರನ್ನು  ನ್ಯಾಯಾಲಯ  ಅರ್ಹರು ಎಂದು ನಿರ್ಣಯಿಸಿ,  ಮಕ್ಕಳನ್ನು ಅವರ ಸುಪಧರ್ಿಗೆ ಕಳುಹಿಸುತ್ತದೆ  ಎಂದು ಹೇಳಿದೆ. ವಿಚ್ಚೇದನ  ಪ್ರಕರಣವೊಂದರಲ್ಲಿ   ಸುಪ್ರೀಂ ಕೋಟರ್್ ಮಂಗಳವಾರ ತೀಪು ನೀಡಿದೆ.   ಇಂತಹ  ಪ್ರಕರಣಗಳಲ್ಲಿ   ಹೆಚ್ಚು  ನಷ್ಟಹೊಂದುವುದು   ಗಂಡ ಹೆಂಡತಿಯಲ್ಲ,  ಅವರಿಗೆ  ಜನಿಸಿದ  ಮಕ್ಕಳು.   ಇಂತಹ  ಮಕ್ಕಳ  ಭಾರಿ ನಷ್ಟ,  ಮಾನಸಿಕ  ಬಳಲಿಕೆ  ಅನುಭವಿಸುತ್ತಾರೆ, ಭಾರಿ ಬೆಲೆ ತೆರಬೇಕಾದವರು  ಅವರೇ  ಎಂದು  ನ್ಯಾಯಾಲಯ ಹೇಳಿದೆ.  

ಮಕ್ಕಳಿಗೆ   ತಂದೆ ತಾಯಿ ಇಬ್ಬರ  ಪ್ರೇಮವನ್ನು  ಹೊಂದುವ  ಹಕ್ಕಿದೆ,   ಅವರಿಬ್ಬರ ಪೈಕಿ  ಒಬ್ಬರನ್ನು  ಆಯ್ಕೆ ಮಾಡಿಕೊಳ್ಳಬೇಕಾದಾಗ   ಮಕ್ಕಳು ತೀವ್ರ ಮನೋವೇದನೆಗೆ ಒಳಗಾಗುತ್ತಾರೆ. ಮಗುವಿನ ಪಾಲನೆಯನ್ನು  ತಂದೆಗೂ, ತಾಯಿಗೂ  ನ್ಯಾಯಾಲಯ ನಿರ್ಣಯಿಸಿ.. ಮಕ್ಕಳ  ಕಸ್ಟಡಿಯನ್ನು  ಅವರಿಗೆ ವಹಿಸಿದಾಗ  ಅ   ಮಕ್ಕಳ ಕನಸುಗಳೆಲ್ಲವೂ ಛಿದ್ರಗೊಳ್ಳುತ್ತವೆ  ಇಂತಹ   ವಿಷಯಗಳಲ್ಲಿ ಮಕ್ಕಳ ಹಕ್ಕುಗಳನ್ನು ಗೌರವಿಸಬೇಕು ಎಂದು ನ್ಯಾಯಮೂತರ್ಿ ಎ.ಎಂ.ಖಾನ್ವಿಲ್ಕರ್ ಮತ್ತು ನ್ಯಾಯಮೂತರ್ಿ ಅಜಯ್ ರಸ್ತೋಗಿ ಅವರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.