ಬಾಗಲಕೋಟೆ: ಅಂಗನವಾಡಿಗಳಿಗೆ ಪೂರೈಸಲಾದ ಆಹಾರ ಧಾನ್ಯಗಳು ಪ್ರವಾಹದಿಂದ ಹಾಳಾಗಿದ್ದು, ಅವುಗಳನ್ನು ಪುನಃ ಬಳಸದಂತೆ ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಮಂಗಳವಾರ ಜರುಗಿದ ಪ್ರವಾಹದಿಂದ ಒಳಗಾದ ಅಂಗನವಾಡಿ ಶಾಲೆ ಪುನಃ ಪ್ರಾರಂಭ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರವಾಹದ ನೀರಿನಿಂದ ನೆಂದ ದವಸ ದಾನ್ಯಗಳನ್ನು ಬಳಸಬಾರದು. ಪ್ರವಾಹದ ನೀರು ಕಲುಷಿತಗೊಂಡಿರುವದರಿಂದ ನೆನೆದ ದವಸ ದಾನ್ಯಗಳನ್ನು ಪುನಃ ಬಳಸುವದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪ್ರವಾಹದಿಂದ ಹಾಳಾದ ದವಸ ಧಾನ್ಯಗಳನ್ನು ಬಳಸದಂತೆ ಕ್ರಮವಹಿಸಲು ಸೂಚಿಸಿದರು.
ಜಿಲ್ಲೆಯಲ್ಲಿ 110 ಅಂಗನವಾಡಿಗಳು ಪ್ರವಾಹಕ್ಕೆ ಒಳಗಾಗಿದ್ದು, ಒಟ್ಟು 334 ಮಕ್ಕಳಿದ್ದಾರೆ. ಈಗ ಪ್ರವಾಹದ ನೀರು ಇಳಿಮುಖವಾಗಿದ್ದು, ಪುನಃ ಅಂಗನವಾಡಿ ಪ್ರಾರಂಭಿಸುವ ಮೊದಲು ಕಟ್ಟಡಗಳು ಸೂಸ್ಥಿತಿಯಲ್ಲಿ ಇರುವ ಬಗ್ಗೆ ಪರಿಶೀಲಿಸಬೇಕು. ಕಟ್ಟಡ ಬಳಸಲು ಯೋಗ್ಯವಿದ್ದಲ್ಲಿ ಮಾತ್ರ ಬಳಸಬೇಕು. ಬೀಳುವ ಹಂತದಲ್ಲಿದ್ದರೆ ಪುನಃ ಬಳಸದೇ ಪಯರ್ಾಯವಾಗಿ ಸಮುದಾಯ ಭವನ, ದೇವಸ್ಥಾನ, ಬಾಡಿಗೆ ಕಟ್ಟಡಗಳಲ್ಲಿ ಪ್ರಾರಂಭಿಸಲು ತಿಳಿಸಿದರು. ಪಯರ್ಾಯ ವ್ಯವಸ್ಥೆಗೆ ಎಲ್ಲ ರೀತಿಯ ಅನುಕೂಲ ಮಾಡಿಕೊಡಲಾಗುವುದೆಂದು ಸಿಇಓ ತಿಳಿಸಿದರು.
ಅಲ್ಲದೇ ಅಂಗನವಾಡಿಯಿಂದ ದಿನನಿತ್ಯ ಪೂರೈಸಲಾಗುತ್ತಿರುವ ಮೊಟ್ಟೆ, ಹಾಲು ಹಾಗೂ ಉಪಹಾರವನ್ನು ಮಕ್ಕಳಿಗೆ ತಲುಪಿಸುವ ಕೆಲಸವಾಗಬೇಕು. ಮಾತೃಪೂರ್ಣ, ಮಾತೃಶ್ರೀ ಹಾಗೂ ಮಾತೃವಂದನಾ ಕಾರ್ಯಕ್ರಮಗಳಡಿ ಗಭರ್ಿಣಿ ಹಾಗೂ ಬಾಣಂತಿಯರಿಗೆ ನೀಡುವ ಸೌಲಭ್ಯಗಳನ್ನು ತಪ್ಪದೇ ಫಲಾನುಭವಿಗಳಿಗೆ ಒದಗಿಸುವ ಕೆಲಸವಾಗಬೇಕು. ಈ ಪ್ರವಾಹದಿಂದ 870 ಗಭರ್ಿಣಿಯರು ಹಾಗೂ 863 ಬಾಣಂತಿಯರು ಸಂತ್ರಸ್ತರಾಗಿದ್ದು. ಅವರಿಗೆ ನೀಡುವ ಸೌಲಭ್ಯಗಳನ್ನು ಅವರಿರುವಲ್ಲಿಗೆ ತೆರೆಳಿ ಪೂರೈಸುವ ಕೆಲಸವಾಗಬೇಕು ಎಂದರು. ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕಾಲಕಾಲಕ್ಕೆ ತಪಾಸಣೆಗೆ ಒಳಪಡಿಸಲು ಸೂಚಿಸಿದರು.
ಪ್ರವಾಹದ ಸಮಯದಲ್ಲಿ ಗಭರ್ಿಣಿ ಹಾಗೂ ಬಾಣಂತಿಯರಿರುವ ಪರಿಹಾರ ಕೇಂದ್ರಗಳಿಗೆ ಹೋಗಿ ಪೌಷ್ಠಿಕ ಆಹಾರ, ಸೊಳ್ಳೆ ಪರದೆ ಪೂರೈಸಿರುವ ಕಾರ್ಯವನ್ನು ಕಂಡು ಅಂಗನವಾಡಿ ಮೇಲ್ವಿಚಾರಕಿ, ಕಾರ್ಯಕತರ್ೆ ಹಾಗೂ ಸಹಾಯಕಿಯರನು ಇದೇ ಸಂದರ್ಭದಲ್ಲಿ ಶ್ಲಾಘಿಸಿದರು. ಕಾಲಕಾಲಕ್ಕೆ ಗಭರ್ಿಣಿಯರ ತಪಾಸಣೆ ಮಾಡಿಸುವಂತೆ ತಿಳಿಸಿದರು. ಆಹಾರ ಪೂರೈಕೆಯಲ್ಲಿ ಯಾವುದೇ ರೀತಿಯಲ್ಲಿ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದರು. ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಪ್ರಭಾರಿ ಉಪನಿದರ್ೇಶಕ ಎ.ಕೆ.ಬಸಣ್ಣವರ ಸೇರಿದಂತೆ ಆಯಾ ತಾಲೂಕಿನ ಸಿಡಿಪಿಓ, ಮೇಲ್ಚಿಚಾರಕಿಯರು ಉಪಸ್ಥಿತರಿದ್ದರು.