ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ಗೆ ಸಿಸಿಐ ನೋಟೀಸ್

ನವದೆಹಲಿ/ಬೆಂಗಳೂರು, ನ.23-ಕನ್ನಡಕ್ಕೆ ಡಬ್ ಆದ ತಮಿಳು ಚಿತ್ರವೊಂದರ ಬಿಡುಗಡೆಗೆ ವಿರೋಧಿಸಿ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ವಿಧಿಸಲಾದ 5 ಲಕ್ಷ ರೂ. ದಂಡ ಪಾವತಿಸದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರಿಗೆ ಭಾರತೀಯ ಪ್ರತಿಸ್ಪಧರ್ಾ ಆಯೋಗ (ಸಿಸಿಐ) ನೋಟೀಸ್ ಜಾರಿಗೊಳಿಸಿದೆ.

ನ.11 ರಂದು ಈ ಸಂಬಂಧ ನೋಟೀಸ್ ಜಾರಿಗೊಳಿಸಲಾಗಿದ್ದು, ಇದು ಸ್ವೀಕೃತವಾದ ದಿನಾಂಕದಿಂದ 30 ದಿನಗಳೊಳಗಾಗಿ 5 ಲಕ್ಷ ರೂ. ದಂಡ ಪಾವತಿಸದಿದ್ದರೆ ಅದರ ವಸೂಲಾತಿಗೆ ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಆಯೋಗ ತಿಳಿಸಿದೆ. 

ನಿಗದಿತ ದಿನ ದೊಳಗೆ ದಂಡ ಪಾವತಿಸುವಲ್ಲಿ ವಿಫಲ ವಾದಲ್ಲಿ ಪ್ರತಿ ತಿಂಗಳಿಗೆ ಶೇ.1.5ರಷ್ಟು ಸರಳ ಬಡ್ಡಿ ವಿಧಿಸಲಾಗುವುದು. ಅಲ್ಲದೆ, ಜುಲ್ಮಾನೆ ಮೊತ್ತ ವಸೂಲಿಗೆ ಅಗತ್ಯವಾದ ಕಾನೂನು ಕ್ರಮಕೈಗೊಳ್ಳುವುದಾಗಿ ಸಿಸಿಐ ಕಾರ್ಯದಶರ್ಿ ನೋಟೀಸ್ನಲ್ಲಿ ತಿಳಿಸಿದ್ದಾರೆ.

ಕನ್ನಡಕ್ಕೆ ಡಬ್ ಆದ ಸತ್ಯದೇವ್ ಐಪಿಎಸ್ ಸಿನಿಮಾ ಬಿಡುಗಡೆಗೆ ವಾಟಾಳ್ನಾಗರಾಜ್, ಕನ್ನಡ ಒಕ್ಕೂಟಗಳ ಮುಖಂಡರು ಮತ್ತಿತರರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಚಿತ್ರ ತೆರೆಕಾಣಲು ಅಡ್ಡಿಯಾಗಿತ್ತು.

ಈ ಸಂಬಂಧ ನಿಮರ್ಾಪಕರು ಆಯೋಗದ ಮೊರೆ ಹೋಗಿದ್ದರು. ಸ್ಪಧರ್ಾತ್ಮಕ ಕಾಯ್ದೆ 2002ರ ನಿಯಮಗಳನ್ನು  ಉಲ್ಲಂಘಿಸಿದ್ದಕ್ಕಾಗಿ ಆಯೋಗವು ಮೇಲಿನ ಎಲ್ಲಾ ಪ್ರತಿವಾದಿಗಳಿಗೆ ದಂಡ ವಿಧಿಸಿತ್ತು.