ಧಾರವಾಡ 5: ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ವಿದ್ಯಾಥರ್ಿಗಳು 65 ನೇ ರಾಷ್ಟ್ರಮಟ್ಟದ ಶಾಲಾ ಕ್ರೀಡಾಕೂಟ-2019-20ನೇ ಸಾಲಿನ 19 ವರ್ಷದೊಳಗಿನ ವಯೋಮಿತಿಯ ಬಾಲಕ/ಬಾಲಕಿಯರ ಟೇಕ್ವಾಂಡೋ ಕ್ರೀಡಾಕೂಟದಲ್ಲಿ ಸಿಬಿಎಸ್ಇ ವೆಲ್ಫೇರ್ ಸ್ಪೋಟ್ರ್ಸ ಆರ್ಗನೈಜೇಶನ್ ವತಿಯಿಂದ ದಿ. 02ರಿಂದ 06ರವರೆಗೆ ಅಸ್ಸಾಂನ ಗುವಾಹಾಟಿಯಲ್ಲಿ ನಡೆದಿದ್ದು, ಅದರಲ್ಲಿ ನಮ್ಮ ಸಂಸ್ಥೆಯ ವಿಧ್ಯಾಥರ್ಿಗಳು ಭಾಗವಹಿಸಿ ಉತ್ತಮ ಸಾಧನೆ ಗೈದಿರುತ್ತಾರೆ.
ಬಾಲಕಿಯರ ವಿಭಾಗದಲ್ಲಿ ಖುಷಿ ಕುಡಸೋಮಣ್ಣವರ (ಮಂಜನಾಥೇಶ್ವರ ಸೆಂಟ್ರಲ್ ಸ್ಕೂಲ್) 55 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕಗಳಿಸಿರುತ್ತಾರೆ. ಸಂಜನಾ ವಿ ಬಳ್ಳಾರಿ (ಜೆ.ಎಸ್.ಎಸ್. ಪಬ್ಲಿಕ್ ಸ್ಕೂಲ್ ಕೆಲಗೇರಿ, ಧಾರವಾಡ) ಹಾಗೂ ಬಾಲಕರ ವಿಭಾಗದಲ್ಲಿ ಮನೋಜಕುಮಾರ (ಜೆ.ಎಸ್.ಎಸ್. ಪಬ್ಲಿಕ್ ಸ್ಕೂಲ್ ಕೆಲಗೇರಿ, ಧಾರವಾಡ) ಭಾಗವಹಿಸಿರುತ್ತಾರೆ. ಇವರೊಂದಿಗೆ ತಂಡದ ತರಬೇತುದಾರರಾಗಿ ಜಿಲ್ಲಾ ಟೆಕ್ವಾಂಡೊ ಸಂಸ್ಥೆಯ ಹಿರಿಯ ತರಬೇತುದಾರ ಹಾಗೂ ಕಾರ್ಯದಶರ್ಿ ಅಂಜಲಿ ಪರಪ್ಪ ಹಾಗೂ ತಂಡದ ವ್ಯವಸ್ಥಾಪಕ ಶೋಭಾ ರಸಾಳಕರ ಅವರು ತೆರಳಿದ್ದರು.
ಈ ಸಾಧನೆಯನ್ನು ರಾಷ್ಟ್ರೀಯ ತರಬೇತುದಾರ ಪರಪ್ಪ ಎಸ್. ಕೆ, ಹೆಸರಾಂತ ಬಿಲ್ಡರ್ ಗಿರೀಶ ಕುಡಸೋಮಣ್ಣವರ, ಸಹಾಯಕ ತರಬೇತುದಾರ ಆನಂದ ಕಿಟದಾಳ, ಪೋಷಕರು ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.