ನವದೆಹಲಿ, ಮೇ ೯, ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ ?ಸಿಬಿಎಸ್ ಇ ೧೦ ಹಾಗೂ ೧೨ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಜುಲೈ ೧ರಿಂದ ೧೫ರವರೆಗೆ ನಡೆಸಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವ ಡಾ.ರಮೇಶ್ ಪೋಕ್ರಿಯಾಲ್ ನಿಶಾಂಕ್ ಪ್ರಕಟಿಸಿದ್ದಾರೆ.ಕೋವಿಡ್ ಸೋಂಕು ಹರಡುವುದನ್ನು ತಡೆಯಲು ಜಾರಿಗೊಳಿಸಿರುವ ಲಾಕ್ ಡೌನ್ ನಿಂದಾಗಿ ಈ ಪರೀಕ್ಷೆಗಳನ್ನು ಮುಂದೂಡಲಾಗಿತ್ತು.
ಬೋರ್ಡ್ ಪರೀಕ್ಷೆಯ ಹೊಸ ದಿನಾಂಕಕ್ಕಾಗಿ ಎಲ್ಲಾ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದು, ಇದೀಗ ಹೊಸ ದಿನಾಂಕ ಘೋಷಿಸಲಾಗಿದೆ.ಕೋವಿಡ್ ವೈರಸ್ ಪರಿಸ್ಥಿತಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.ಈಶಾನ್ಯ ದೆಹಲಿಯ ೧೦ನೇ ತರಗತಿ ವಿದ್ಯಾರ್ಥಿಗಳು ಹಿಂಸಾಚಾರದ ಕಾರಣ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗರಲಿಲ್ಲ, ಪರೀಕ್ಷೆ ಸಂಬಂಧ ಸಿಬಿಎಸ್ ಇ ವಿವರವಾದ ವೇಳಾಪಟ್ಟಿಯನ್ನು ಸದ್ಯದಲ್ಲೆ ಬಿಡುಗಡೆಗೊಳಿಸಲಿದೆ.