ನವದೆಹಲಿ, ಡಿ18 ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್
(ಸಿಬಿಎಸ್ಇ) 10 ಮತ್ತು 12 ತರಗತಿಯ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ . ಸಿಬಿಎಸ್ಇ ವಾರ್ಷಿಕ
ಪರೀಕ್ಷೆಗಳು ಮುಂದಿನ ವರ್ಷ ಅಂದರೆ 2020ರ ಫೆಬ್ರವರಿ 15ರಿಂದ ಪ್ರಾರಂಭವಾಗಲಿವೆ. ವಿದ್ಯಾರ್ಥಿಗಳು
ಸಿಬಿಎಸ್ಇ ವೆಬ್ಸೈಟ್ ಗೆ ಭೇಟಿ ನೀಡಿ ಪರೀಕ್ಷಾ ವೇಳಾಪಟ್ಟಿಯನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.ಸಿಬಿಎಸ್ಇ
ಮಂಡಳಿ ಬಿಡುಗಡೆ ಮಾಡಿರುವ ವೇಳಾಪಟ್ಟಿಯ ಪ್ರಕಾರ, 10ನೇ ತರಗತಿ ಪರೀಕ್ಷೆಗಳು 2020ರ ಫೆಬ್ರವರಿ
15ರಿಂದ ಮಾರ್ಚ್ 20ರವರೆಗೂ ಹಾಗೂ 12ನೇ ತರಗತಿ ಪರೀಕ್ಷೆಗಳು 2020ರ ಫೆಬ್ರವರಿ 15ರಿಂದ ಮಾರ್ಚ್30ರವರೆಗೆ
ನಡೆಯಲಿವೆ. ಸಿಬಿಎಸ್ಇ ಬೋರ್ಡ್ ಇತ್ತೀಚೆಗೆ 10 ಮತ್ತು 12ನೇ ತರಗತಿಯ ಮಾದರಿ ಪತ್ರಿಕೆಗಳನ್ನು ಬಿಡುಗಡೆ
ಮಾಡಿತ್ತು. 2020ನೇ ವರ್ಷಕ್ಕೆ 30 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಪ್ರಾಯೋಗಿಕ ಪರೀಕ್ಷೆಗಳು ಬರುವ 2020ರ ಜನವರಿ 1ರಿಂದ ಫೆಬ್ರವರಿ 7ರವರೆಗೆ ನಡೆಯಲಿವೆ .