ನವದೆಹಲಿ, ಮೇ 18 ಕೇಂದ್ರೀಯ ಮಾಧ್ಯಮಿಕ ಮಂಡಳಿಯ (ಸಿಬಿಎಸ್ಇ) 10 ಮತ್ತು 12 ನೇ ತರಗತಿಯ ಬಾಕಿಯಿರುವ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿ ಇಂದು ಸಂಜೆ ಪ್ರಕಟವಾಗುವ ಸಾಧ್ಯತೆ ಇದೆ. ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದ್ದ ಪರೀಕ್ಷೆಗಳನ್ನು ಜುಲೈನಲ್ಲಿ ನಡೆಸಲು ನಿರ್ಧರಿಸಲಾಗಿದೆ. 29 ಮಹತ್ವದ ವಿಷಯಗಳ ಪರೀಕ್ಷೆಗಳನ್ನು ನಡೆಸಲಾಗುವುದೆಂದು ಮಂಡಳಿ ಪ್ರಕಟಿಸಿದೆ.ಕೊರೊನಾ ವೈರಸ್ ಭೀತಿಯಿಂದ10 ಮತ್ತು 12 ನೇ ತರಗತಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗಿರಲಿಲ್ಲ.ಪರೀಕ್ಷೆಗಳ ದಿನಾಂಕ ಅಂತಿಮಗೊಳಿಸಲು ಕೆಲವು ತಾಂತ್ರಿಕ ಅಂಶಗಳನ್ನು ಪರಿಶೀಲಿಸಲಾಗುತ್ತಿದ್ದು ಇಂದು ಪರೀಕ್ಷಾ ವೇಳಾಪಟ್ಟಿ ಪ್ರಕಟಿಸುವುದಾಗಿ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಹೇಳಿದ್ದರು ಅದರಂತೆ ಸಂಜೆ ವೇಳಾಪಟ್ಟಿ ಪ್ರಕಟವಾಗುವ ಸಾದ್ಯತೆಯಿದೆ.