ಬೆಂಗಳೂರು, ನ. 21: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ಬಿ ರಿಪೋರ್ಟ್ ಸಲ್ಲಿಸಿ ತಮ್ಮದೇನೂ ಪಾತ್ರವಿಲ್ಲ ಎಂದು ಹೇಳಿರುವುದು ಮನಸಿಗೆ ಸಮಾಧಾನ, ಸಂತಸ ತಂದಿದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಕೆ.ಜೆ.ಜಾಜರ್್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಮೇಲಿನ ಆರೋಪ ಸತ್ಯಕ್ಕೆ ದೂರವಾಗಿತ್ತು. ಡಿ.ಕೆ ರವಿ ಆತ್ಮಹತ್ಯೆ ಪ್ರಕರಣದಲ್ಲೂ ಇಲ್ಲಸಲ್ಲದ ಆರೋಪ ಮಾಡಿದ್ದರು. ಈಗ ಸತ್ಯ ಏನು ಅಂತ ಜನರಿಗೆ ಗೊತ್ತಾಗಿದೆ ಎಂದರು.
ಪ್ರಧಾನಿ ಮೋದಿ ಹಿಂದೆ ಬೆಂಗಳೂರಿಗೆ ಚುನಾವಣಾ ಪ್ರಚಾರಕ್ಕೆ ಬಂದಾಗ ಅವರು ಸಹ ತಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಜೈಲಿನಲ್ಲಿರಬೇಕಾದವರು ಸಚಿವರಾಗಿದ್ದಾರೆ ಎಂದು ಟೀಕಿಸಿದ್ದರು. ಬಿಜೆಪಿಯವರು ನಿರಂತರ ಆರೋಪ ಮಾಡುವ ಮೂಲಕ ತಮ್ಮನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡಿದ್ದರು. ಈಗ ಎಲ್ಲವೂ ಬಯಲಾಗಿದೆ ಎಂದರು.
ತಮ್ಮ ಮೇಲೆ ಸುಳ್ಳು ಆರೋಪ ಬಂದಾಗ ಪಕ್ಷ ತಮ್ಮ ಬೆಂಬಲಕ್ಕೆ ನಿಂತಿತ್ತು. ಪಕ್ಷದ ನಾಯಕರೂ ಬೆಂಬಲಕ್ಕೆ ನಿಂತಿದ್ದರು. ಈಗ ಸಿಬಿಐ ತಮ್ಮ ಬಗ್ಗೆ ರಿಪೋರ್ಟ್ ಕೊಟ್ಟಿದೆ. ಇದಕ್ಕಿಂತ ಇನ್ನೇನು ಬೇಕು ? ಎಂದು ಬಿಜೆಪಿ ನಾಯಕರಿಗೆ ಜಾಜರ್್ ತಿರುಗೇಟು ನೀಡಿದರು.
ಅಲ್ಪಸಂಖ್ಯಾತನೆಂಬ ಕಾರಣಕ್ಕೆ ಬಿಜೆಪಿ ತಮ್ಮನ್ನು ಗುರಿಯಾಗಿಸಿದೆ. ಅಲ್ಪಸಂಖ್ಯಾತನೆಂಬ ಕಾರಣಕ್ಕಾಗಿ ಬೆಳೆದು ಬಂದವನಲ್ಲ. ಆದರೂ ನನ್ನನ್ನು ಸುಕಾ ಸುಮ್ಮನೆ ಟಾಗರ್ೆಟ್ ಮಾಡಿದರು. ಗಣಪತಿ ಹಾಗೂ ಡಿ.ಕೆ.ರವಿ ಎರಡೂ ಪ್ರಕರಣಗಳಲ್ಲೂ ನನಗೆ ನ್ಯಾಯ ಸಿಕ್ಕಿದೆ ಎಂದರು.