ಉತ್ತರಪ್ರದೇಶದಲ್ಲಿ ಸಿಎಎ ಪ್ರತಿಭಟನೆ: ಸಾವಿನ ಸಂಖ್ಯೆ 21ಕ್ಕೇರಿಕೆ; ಸಹಜ ಸ್ಥಿತಿಯತ್ತ ರಾಜ್ಯ

ಲಕ್ನೋ, ಡಿಸೆಂಬರ್ 24,ಇದೇ ತಿಂಗಳ 19 ರಂದು ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧದ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರಕ್ಕೆ ಒಳಗಾಗಿದ್ದ ಉತ್ತರಪ್ರದೇಶದಲ್ಲಿ ಮಂಗಳವಾರ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳಿದೆ. ಈ ಮಧ್ಯೆ, ಮೀರತ್ ಮತ್ತು ಫಿರೋಜಾಬಾದ್‌ನಲ್ಲಿ ಗಲಭೆಯ ವೇಳೆ ಗಾಯಗೊಂಡಿದ್ದ ಇಬ್ಬರು ಸಾವನ್ನಪ್ಪುವುದರೊಂದಿಗೆ ಗೋಲಿಬಾರ್‌ಗೆ ಬಲಿಯಾದವರ ಸಂಖ್ಯೆ 21ಕ್ಕೇರಿದೆ. ಹಿಂಸಾಚಾರದಿಂದ ಕ್ರಮವಾಗಿ ಮೀರತ್ ಮತ್ತು ಫಿರೋಜಾಬಾದ್‌ನಲ್ಲಿ ಕ್ರಮವಾಗಿ ಆರು ಮತ್ತು ನಾಲ್ಕು ಜನರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.ರಾಜ್ಯ ರಾಜಧಾನಿ ಲಕ್ನೋ ಮತ್ತು ಗೋರಖ್‌ಪುರದಲ್ಲಿ ಸಮಾಜ ವಿರೋಧಿ ಅಂಶಗಳ ಪೋಸ್ಟರ್‌ಗಳನ್ನು ಹಾಕಿ ಶಾಂತಿಗೆ ಭಂಗ ತರಲು ಯತ್ನಿಸಿದವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ.ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ 2,500 ಜನರನ್ನು ಬಂಧಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ 5,000 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.