ಸಿಎಎ ಬೆಂಬಲಿಸಿದ ರಾಷ್ಟ್ರಪತಿ, ಪ್ರಧಾನಿ: ವಿರೋಧ ಪಕ್ಷಗಳಿಂದ ವಿರೋಧ

ನವದೆಹಲಿ, ಜ.31,ಪೌರತ್ವ ತಿದ್ದುಪಡಿ ಕಾಯ್ದೆ -ಸಿಎಎ  ವಿರುದ್ಧ ದೇಶಾದ್ಯಂತ  ಹಿಂಸಾಚಾರ ಸೇರಿದಂತೆ ಬೃಹತ್ ಪ್ರತಿಭಟನೆ ನಡೆಯುತ್ತಿರುವ ಹೊರತಾಗಿಯೂ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಹೊಸ ಪೌರತ್ವ ಕಾನೂನನ್ನು ಪ್ರಶಂಸಿಸಿದ್ದಾರೆ."ಸಂಸತ್ತಿನ ಉಭಯ ಸದನಗಳೂ ಈ ಹೊಸ ಪೌರತ್ವ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದೆ. ಮಹಾತ್ಮ ಗಾಂಧಿ ನೀಡಿದ ಆಶ್ವಾಸನೆಗಳಲ್ಲಿ ಒಂದನ್ನು ಈಡೇರಿಸಿರುವುದಕ್ಕೆ ನಾನು ಸಂತೋಷಪಡುತ್ತೇನೆ "ಎಂದು ರಾಷ್ಟ್ರಪತಿ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುತ್ತಾ ಹೇಳಿದರು.

ಸದನದ ಮುಂಭಾಗದಲ್ಲಿ ಕುಳಿತಿದ್ದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಆಡಳಿತಾರೂಢ ಸದಸ್ಯರು ಈ ವೇಳೆ ಮೇಜುಕುಟ್ಟಿ ಬೆಂಬಲ ವ್ಯಕ್ತಪಡಿಸಿದರೆ,  ವಿರೋಧ ಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿದರು.ಭಾರತದಲ್ಲಿ ನಂಬಿಕೆಯನ್ನು ಪುನರಾವರ್ತಿಸುವ ಮತ್ತು ಪೌರತ್ವಕ್ಕಾಗಿ ಉತ್ಸುಕರಾಗಿರುವ ಯಾರಾದರೂ ಪೌರತ್ವದ ಹಕ್ಕನ್ನು ಹೊಂದಬಹುದು ಎಂದು ನನ್ನ ಸರ್ಕಾರ ಸ್ಪಷ್ಟಪಡಿಸಲು ಬಯಸಿದೆ ಎಂದು ಅವರು ಹೇಳಿದರು.

ಇಂತಹ ಪ್ರಕ್ರಿಯೆಯು ಮೊದಲೇ ಅಸ್ತಿತ್ವದಲ್ಲಿತ್ತು ಮತ್ತು ಇವುಗಳು ಇಂದಿಗೂ ಹಾಗೆಯೇ ಉಳಿದಿವೆ ಎಂದು ಹೇಳುವ ಮೂಲಕ ರಾಷ್ಟ್ರಪತಿ ಈ ಬಗ್ಗೆ ಇರುವ ಆತಂಕವನ್ನು ನಿವಾರಿಸಲು ಪ್ರಯತ್ನಿಸಿದ್ದಾರೆ.ಪಾಕಿಸ್ತಾನದ ಹಿಂದೂಗಳು ಮತ್ತು ಸಿಖ್ಖರು ಭಾರತಕ್ಕೆ ಬರಲು ಬಯಸಿದರೆ ಅವರಿಗೆ ಬರಲು ಅವಕಾಶ ನೀಡಬೇಕು ಮತ್ತು ಅವರಿಗೆ ಎಲ್ಲ ಬೆಂಬಲ ಮತ್ತು ನೆರವು ನೀಡುವುದು 'ಭಾರತ ಸರ್ಕಾರದ ಕರ್ತವ್ಯ' ಎಂದು ಮಹಾತ್ಮ ಗಾಂಧಿ ಹೇಳಿದ್ದರು ಎಂಬುದನ್ನು ರಾಷ್ಟ್ರಪತಿ ಸ್ಮರಿಸಿದರು."ಕಾಲಕಾಲಕ್ಕೆ ಹಲವಾರು ನಾಯಕರು ಮತ್ತು ರಾಜಕೀಯ ಮುಖ್ಯಸ್ಥರು ಈ ವಿಷಯಗಳಲ್ಲಿ ಮಾತನಾಡಿದ್ದಾರೆ ಮತ್ತು ಅಂತಹ ಬದ್ಧತೆಯನ್ನು ಗೌರವಿಸುವುದು ನಮ್ಮ ಕರ್ತವ್ಯ" ಎಂದು ಅವರು ಹೇಳಿದರುಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಧಾರ್ಮಿಕ ನೆಲೆಯಲ್ಲಿ ಕಿರುಕುಳಕ್ಕೆ ಒಳಗಾಗಿರುವ ಅಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರಿಗೆ ತ್ವರಿತ ವಿಧಾನವನ್ನು ಅನುಸರಿಸಿ ಭಾರತದಲ್ಲಿ ಪೌರತ್ವ ನೀಡಲು ಈ ಹೊಸ ಕಾನೂನು ಅವಕಾಶ ಕಲ್ಪಿಸುತ್ತದೆ ಎಂದು ಅವರು ಹೇಳಿದರು.