ಸಿಎಎ ವಿರೋಧ: ನಜ್ಮಾ ಹೆಪ್ತುಲ್ಲಾ ವಿರುದ್ಧ ಕಪ್ಪು ಬಾವುಟ ಪ್ರದರ್ಶನ

ಕೊಚ್ಚಿ, ಡಿ.16 ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯನ್ನು ವಿರೋಧಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಅಲುವಾದಲ್ಲಿ ಮಣಿಪುರ ರಾಜ್ಯಪಾಲರಾದ ಡಾ.ನಜ್ಮಾ ಹೆಪ್ತುಲ್ಲಾ ಅವರ ವಿರುದ್ಧ ಕಪ್ಪು ಬಾವುಟಗಳನ್ನು ಪ್ರದರ್ಶಿಸಿದ್ದಾರೆ.ನಿನ್ನೆ ಸಂಜೆ ಇಲ್ಲಿಗೆ ಬಂದ ರಾಜ್ಯಪಾಲರು ಅಲುವಾ ಮೂಲಕ ಲಕ್ಷದ್ವೀಪಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.ಅಲುವಾ ಸೇತುವೆ ಪ್ರದೇಶದಲ್ಲಿ ಇಬ್ಬರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಕ್ಷಣ ವಶಕ್ಕೆ ತೆಗೆದುಕೊಂಡರು.ಈ ಕುರಿತು ಪ್ರತಿಕ್ರಿಯಿಸಿದ ರಾಜ್ಯಪಾಲರು, ಮಣಿಪುರದ ಜನರು ಅಥವಾ ರಾಜ್ಯದ ರಾಜಕೀಯ ನಾಯಕತ್ವವು ಇದುವರೆಗೆ ಸಿಎಎಯನ್ನು ವಿರೋಧಿಸಿಲ್ಲ ಎಂದರು.