ಲೋಕಸಭೆಯಲ್ಲೂ ಸಿಎಎ , ಎನ್ ಪಿ ಆರ್- ಎನ್ ಆರ್ ಸಿ ಪ್ರತಿಧ್ವನಿ : ಭಾರಿ ಕೋಲಾಹಲ

ನವದೆಹಲಿ, ಫೆ 3, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ಎನ್‌ಪಿಆರ್ ಮತ್ತು ಎನ್‌ಆರ್‌ಸಿ ವಿಷಯಗಳ ಕುರಿತು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷ ಪಕ್ಷಗಳ ಸದಸ್ಯರು ಸೋಮವಾರ ಲೋಕಸಭೆಯಲ್ಲಿ ಪ್ರಸ್ತಾಪಿಸಿ, ಘೋಷಣೆ ಕೂಗಿದ್ದರಿಂದ  ಕೋಲಾಹಲದ ಸನ್ನಿವೇಶ  ನಿರ್ಮಾಣವಾಯಿತು. ಪ್ರಶ್ನೊತ್ತರ ಕಲಾಪ ಆರಂಭವಾಗುತ್ತಿದ್ದಂತೆ  ಕಾಂಗ್ರೆಸ್ ಮತ್ತು ಡಿಎಂಕೆ ಸದಸ್ಯರು ಬಾವಿಗೆ ಪ್ರವೇಶಿಸಿ ಘೋಷಣೆ ಕೂಗಲಾರಂಭಿಸಿದರು. ಕೆಲ ವಿರೋಧ ಪಕ್ಷದ ಸದಸ್ಯರು ಸಹ ಫಲಕಗಳನ್ನು ಹಿಡಿದು ಸಿಎಎ ವಿರೋಧಿ ಘೋಷಣೆಗಳನ್ನು ಕೂಗಿದ್ದರಿಂದ ಕಲಾಪಕ್ಕೆ  ಅಡಚಣೆಯಾಯಿತು.  

ಪ್ರತಿಪಕ್ಷಗಳ ಸದಸ್ಯರು ' ಸಿಎಎಗೆ , ಇಲ್ಲ , ಎನ್ ಆರ್ ಸಿ ಇಲ್ಲ    ಸಂವಿಧಾನ  ಉಳಿಸಿ, ನಮ್ಮ ಪ್ರಜಾಪ್ರಭುತ್ವ  ಉಳಿಸಿ ಎಂದು ಘೋಷಣೆ  ಘೊಷಣೆ  ಕೂಗಿದರು. ಪ್ರಶ್ನೊತ್ತರ ಸಮಯದಲ್ಲಿ ಹಣಕಾಸು ಸಹಾಯಕ ಸಚಿವ  ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ, ಸಿಎಎ ವಿರೋಧಿ ಪ್ರತಿಭಟನಾಕಾರರ ವಿರುದ್ದ ದ ಸಂದರ್ಭದಲ್ಲಿ ಸಚಿವರು   ಮಾಡಿದ್ದ ವಿವಾದಾತ್ಮಕ ಹೇಳಿಕೆಗೆ ಪ್ರತಿಪಕ್ಷದ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸ್ಪೀಕರ್ ಓಂ ಬಿರ್ಲಾ ಪ್ರತಿಭಟನಾ ನಿರತ ಸದಸ್ಯರನ್ನು ತಮ್ಮ ಸ್ಥಾನಗಳಿಗೆ ಮರಳುವಂತೆ ಮನವಿ ಮಾಡಿದರು ಮತ್ತು ರಾಷ್ಟ್ರಪತಿ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯ ಚರ್ಚೆಯ ಮೇಲೆ ಮಾತನಾಡುವಾಗ  ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಬಹುದು ಎಂದು ಮನವಿ ಮಾಡಿ ಆಗ ಸದಸ್ಯರಿಗೆ ಹೆಚ್ಚಿನ  ಸಮಯವನ್ನು ಮಾತನಾಡಲು  ನೀಡುವುದಾಗಿಯೂ ಅವರು  ಭರವಸೆ ನೀಡಿದರು.ಆದರೆ, ಪ್ರತಿಪಕ್ಷದ ಸದಸ್ಯರು ಸ್ಪೀಕರ್ ಮನವಿ ತಿರಸ್ಕರಿಸಿ ಘೋಷಣೆ ಕೂಗುವುದನ್ನು  ಮುಂದಿವರೆಸಿದರು ಆಗ ಸದನ ಗದ್ದಲದ ಗೂಡಾಯಿತು .ಗದ್ದಲದ ನಡುವೆಯೂ  ಸ್ಪೀಕರ್ ಪ್ರಶ್ನೊತ್ತರ ಕಲಾಪ ಮುಂದುವರೆಸಿದರು.