ಬೈಲಹೊಂಗಲ: ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ
ಲೋಕದರ್ಶನ ವರದಿ
ಬೈಲಹೊಂಗಲ 24: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮುಸ್ಲಿಂ ಬಾಂದವರಿಂದ ಹೊರ ಬಂದ ರಾಷ್ಟ್ರಗೀತೆ, ಭಾರತ ಮಾತಾಕೀ ಜೈ, ಒಂದೇ ಮಾತರಂ ಘೋಷಣೆ ರಾಷ್ಟ್ರೀಯ ಐಕ್ಯತಾ ಭಾವ ಮೂಡಿಸುವುದರ ಜೊತೆಗೆ ಹಿಂದು, ಮುಸ್ಲಿಂ ಬಾಂಧವರೆಲ್ಲರೂ ಒಂದೇ, ನಾವೆಲ್ಲರೂ ಭಾರತೀಯರು ಎಂಬ ಸಂದೇಶ ಸಾರಿದರು.
ಪಟ್ಟಣದ ಅಂಬೇಡ್ಕರ ಉದ್ಯಾನವನ ಎದುರು ವೇದಿಕೆ ಹಾಕಿ ಪ್ರತಿಭಟನೆಗಿಳಿದಿದ್ದ ಅಪಾರ ಸಂಖ್ಯೆಯ ಮುಸ್ಲಿಂ ಬಾಂದವರು ದೇಶದಲ್ಲಿ ಏನು ಆಗುತ್ತದೆಯೋ, ಬಿಡುತ್ತದೆಯೋ ಗೊತ್ತಿಲ್ಲ. ಆದರೆ ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ವೀರಕೇಸರಿ ಅಮಟೂರು ಬಾಳಪ್ಪನ ಪುಣ್ಯ ಭೂಮಿಯಾದ ಬೈಲಹೊಂಗಲ ನಾಡಿನಲ್ಲಿ ಯಾರೂ ಯಾವುದೇ ಕಾರಣಕ್ಕೂ ಜಾತೀಯತೆ, ಧಮರ್ಾಂಧತೆಗೆ ಸಿಲುಕಿ ಕೋಮು ಸೌಹಾರ್ದತೆಗೆ ಧಕ್ಕೆ ಆಗದಂತೆ ಜಾಗೃತರಾಗಿರೋಣವೆಂದು ಶಫಥ ಮಾಡಿದರು.
ಮುಸ್ಲಿಂ ಸಮಾಜದ ಹಿರಿಯ ವಕೀಲ ಝಡ್.ಎ.ಗೋಕಾಕ ಮಾತನಾಡಿ, ಸಂವಿಧಾನ ಎಲ್ಲರಿಗೂ ಸಮಾನ ಹಕ್ಕು ಕೊಟ್ಟಿದೆ. ಅದರ ಸದ್ಬಳಕೆ ಅಗತ್ಯವಿದೆ. ಅದನ್ನು ಯಾವುದೇ ಕಾರಣಕ್ಕೂ ದುರ್ಬಳಕೆ ಮಾಡಿಕೊಳ್ಳಬಾರದು. ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಆಗುವ ಲಾಭ, ಹಾನಿ ಬಗ್ಗೆ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.
ಧರ್ಮಗುರು ಶೌಕತ್ಅಲಿ ಭಾದಿ ಮಾತನಾಡಿ, ಭಾರತ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಭಾರತಕ್ಕೆ ಏನಾದರೂ ಅಪಾತ್ತು ಬಂದಾಗ ಭಾರತೀಯ ಪುಣ್ಯ ನೆಲದ ಹಿಂದು, ಮುಸ್ಲಿಂ ಬಾಂಧವರು ಎಲ್ಲರೂ ಸೇರಿ ದೇಶದ ರಕ್ಷಣೆಗೆ ಕಂಕಣ್ಣ ಬದ್ಧರಾಗಿರಬೇಕು. ಪ್ರಾಣ ಹೋದರು ಭಾರತಾಂಬೆಯ ರಕ್ಷಣೆಗೆ ಕಟಿಬದ್ಧರಾಗಿರಬೇಕು ಎಂದರು.
ಶಾಸಕ ಮಹಾಂತೇಶ ಕೌಜಲಗಿ, ಜಿಲ್ಲಾ ಪಂಚಾಯ್ತಿ ಸದಸ್ಯ ಶಂಕರ ಮಾಡಲಗಿ, ರಫೀಕ ಬಡೇಘರ ಮಾತನಾಡಿದರು. ಮುಸ್ಲಿಂ ಸಮಾಜದ ಮುಖಂಡರಾದ ಡಾ.ಐಜಾಜ್ ಬಾಗೇವಾಡಿ, ನಿಸ್ಸಾರಅಹ್ಮದ ತಿಗಡಿ, ಮಹ್ಮದರಫೀಕ ನಾಯ್ಕ, ಆಲಮ್ ಖಾರೆಖಾಜಿ, ಅಬ್ದುಲ್ ರಹಿಮ್ ಹುಬ್ಬಳ್ಳಿ, ದಾವುಲಸಾಬ ಕಂದಗೋಳಿ, ಜಿ.ಡಿ.ಬಾಗವಾನ, ಜಿಲ್ಲಾ ಪಂಚಾಯ್ತಿ ಸದಸ್ಯ ಅನಿಲ ಮ್ಯಾಕಲಮಡರ್ಿ, ಶರೀಫ ಮೊಖಾಶಿ, ಬಾಬು ಸುತಗಟ್ಟಿ, ಫಾರುಖ್ ತಿಗಡಿ, ಅಲ್ಫಲಾ ಯುವಕ ಸಂಘ, ಹಜರತ್ ಟೀಫೂ ಸುಲ್ತಾನ ಸೋಶಿಯಲ್ ವೇಲಪೇರ ಕಮೀಟಿ, ಮಿಲ್ಲತ್ತ ಯುವಕ ಸಂಘ, ರಾಹತ್ ಫೌಂಡೇಶನ ಸಂಘಟನೆ ಪದಾಧಿಕಾರಿಗಳು, ಸಾವಿರಾರು ಮುಸ್ಲಿಂ ಬಾಂದವರು ಇದ್ದರು.
ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಡಿವೈಎಸ್ಪಿ ಜೆ.ಎಂ.ಕರುಣಾಕರಶೆಟ್ಟಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಕೈಕೊಳ್ಳಲಾಗಿತ್ತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 