ನವದೆಹಲಿ, ಸೆ 29: ಮೂರು ರಾಜ್ಯಗಳಲ್ಲಿನ
4 ವಿಧಾನಸಭೆ ಉಪಚುನಾವಣೆಗೆ ಮತ್ತು ಬಿಹಾರದ ಸಮಷ್ಟಿಪುರ ಸಂಸದೀಯ ಕ್ಷೇತ್ರಕ್ಕೆ ಅಭ್ಯರ್ಥಿಗಳ ಪಟ್ಟಿಯನ್ನು
ಕಾಂಗ್ರೆಸ್ ಭಾನುವಾರ ಪ್ರಕಟಿಸಿದೆ.
ಬಿಹಾರದ ಕಿಶನ್‌ಗಂಜ್‌ನಲ್ಲಿ ಸಯೀದಾ ಬಾನು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರೆ,
ಮಾಂಡವದ ರೀಟಾ ಚೌಧರಿ ಮತ್ತು ರಾಜಸ್ಥಾನದ ಖಿನ್‌ಸರ್ ವಿಧಾನಸಭಾ ಕ್ಷೇತ್ರದ ಹರೇಂದ್ರ ಮಿರ್ಧಾ ಪಕ್ಷದ
ಅಭ್ಯರ್ಥಿಗಳಾಗಿ ಆಯ್ಕೆಯಾಗಿದ್ದಾರೆ ಎಂದು ಪಕ್ಷ ಪ್ರಕಟಣೆಯಲ್ಲಿ ತಿಳಿಸಿದೆ.
ಉತ್ತರ ಪ್ರದೇಶದ ಬಲ್ಹಾ ವಿಧಾನಸಭಾ ಸ್ಥಾನದಲ್ಲಿ ಮನ್ನು ದೇವಿ
ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ.
ಡಾ.ಅಶೋಕ್ ಕುಮಾರ್ ಬಿಹಾರದ ಸಮಷ್ಟಿಪುರ ಸಂಸದೀಯ ಸ್ಥಾನಕ್ಕೆ
ಆಯ್ಕೆಗೊಂಡಿದ್ದಾರೆ