ಗುಣಮಟ್ಟದ ಉಪಕರಣಗಳನ್ನು ಖರೀದಿಸಿ, ಕರ್ತವ್ಯ ನಿರ್ಲಕ್ಷ್ಯ ತೋರುವ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ : ಮೊಹಮ್ಮದ್ ಮೊಹೀಸೀನ್

ಗುಣಮಟ್ಟದ ಉಪಕರಣಗಳನ್ನು ಖರೀದಿಸಿ, ಕರ್ತವ್ಯ ನಿರ್ಲಕ್ಷ್ಯ ತೋರುವ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ :  ಮೊಹಮ್ಮದ್ ಮೊಹೀಸೀನ್ Buy quality equipment and take strict action against doctors who neglect their duties: Mohammad Mohs

         ಕಾರವಾರ 29:  ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಖರೀದಿಸಿದ ವೈದ್ಯಕೀಯ ಉಪಕರಣಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಂತೆ ಮತ್ತು ರೋಗಿಗಳ ಚಿಕಿತ್ಸೆ ಮತ್ತು ಕರ್ತವ್ಯದಲ್ಲಿ ನಿರ್ಲಕ್ಷ್ಯತೆ ತೋರುವ ವೈದ್ಯರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಸಂಸ್ಥೆಯ ಡೀನ್ ಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮದ್ ಮೊಹೀಸೀನ್ ಸೂಚನೆ ನೀಡಿದರು. 

        ಅವರು ಸೋಮವಾರ ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಭೇಟಿ ನೀಡಿ, ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೋಗಿಗಳ ಚಿಕಿತ್ಸೆಗೆ ಖರೀದಿಸುವ ವೈದ್ಯಕೀಯ ಉಪಕರಣಗಳು ನಿಗಧಿತ ಮಾನದಂಡಗಳನ್ನು ಹೊಂದಿರುವ ಬಗ್ಗೆ ಪರೀಶೀಲಿಸಿ, ಅತ್ಯಾಧುನಿಕವಾದ ಮತ್ತು ಧೀರ್ಘ ಕಾಲದ ಬಳಕೆಗೆ ಯೋಗ್ಯವಾಗಬಹುದಾದ ಉಪಕರಣಗಳನ್ನು ಖರೀದಿಸುವ ಮೂಲಕ ರೋಗಿಗಳ ಉತ್ತಮ ವೈದ್ಯಕೀಯ ಸೌಲಭ್ಯಗಳು ದೊರೆಯುವಂತೆ ನೋಡಿಕೊಳ್ಳಿ ಎಂದರು. 

       ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಉತ್ತಮ ರೀತಿಯ ಆರೈಕೆ ಮತ್ತು ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಬೇಕು, ಕರ್ತವ್ಯದಲ್ಲಿ ನಿರ್ಲಕ್ಷ್ಯತೆ ತೋರುವ ವೈದ್ಯರು ಮತ್ತು ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ ಅವರು, ಆಸ್ಪತ್ರೆ ಆವರಣದಲ್ಲಿ ಸ್ವಚ್ಛತೆಗೆ ಹೆಚ್ಚಿನ ಅದ್ಯತೆ ನೀಡಿ, ವೈದ್ಯಕೀಯ ತ್ಯಾಜ್ಯಗಳನ್ನು ಸಮರ​‍್ಕ ರೀತಿಯಲ್ಲಿ ನಿಗಧಿತ ಅವಧಿಯೊಳಗೆ ವಿಲೇವಾರಿ ಮಾಡುವಂತೆ ಸೂಚಿಸಿದರು. 

       ಪ್ರಸ್ತುತ ಹೊಸ ಕಟ್ಟಡದಲ್ಲಿ ಕೆಲವು ವಿಭಾಗಗಳು ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ವಿಭಾಗಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಿ, ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯಗಳಿದರೂ ಖಾಸಗಿ ಆಸ್ಪತ್ರೆಗಳಿಗೆ ರೆಫರಲ್ ಮಾಡುವುದು ಕಂಡು ಬಂದಲ್ಲಿ ಅಂತಹ ವೈದ್ಯರನ್ನು ಅಮಾನತು ಸೇರಿದಂತೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ ಅವರು, ಎ.ಬಿ.ಆರ್‌.ಕೆ ಯಲ್ಲಿನ ಚಿಕಿತ್ಸಾ ವೆಚ್ಚದ ಮರು ಪಾವತಿ ಕುರಿತ ಗೊಂದಲಗಳನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ. ಆಸ್ಪತ್ರೆಯ ನಿರ್ವಹಣೆಗೆ ಅಗತ್ಯವಿರುವ ಆರ್ಥಿಕ ಸಂಪನ್ಮೂಲದ ಕ್ರೂಢೀಕರಣಕ್ಕೆ ಸರ್ಕಾರದ ಮಾರ್ಗಸೂಚಿಯಂತೆ ದರಗಳನ್ನು ಪರಿಷ್ಕರಣೆ ಮಾಡುವಂತೆ ತಿಳಿಸಿದರು. 

        ಪ್ರಸ್ತುತ ಕ್ರಿಮ್ಸ್‌ ನಲ್ಲಿ ಹೊರರೋಗಿಗಳು ಮತ್ತು  ಒಳರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆಯ ಸಂಖ್ಯೆಯಲ್ಲಿ  ಹೆಚ್ಚಳವಾಗಬೇಕು, ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ಪಡೆಯುವಂತೆ ಅವರಿಗೆ ಎಲ್ಲಾ ಸೌಲಭ್ಯಗಳನ್ನು ಮತ್ತು ಇನ್ನೂ ಹೆಚ್ಚಿನ ಉತ್ತಮ ಶುಶ್ರೂಷೆ ನೀಡಬೇಕು, ಸಾರ್ವಜನಿಕರು ಮತ್ತು ರೋಗಿಗಳಿಂದ ದೂರುಗಳು ಬಾರದಂತೆ ಪ್ರತಿಯೊಬ್ಬರೂ ಕರ್ತವ್ಯ ನಿರ್ವಹಿಸಬೇಕು ಎಂದರು. 

        ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ಅವರು ,ರೋಗಿಗಳೊಂದಿಗೆ ಅವರಿಗೆ ದೊರೆಯುತ್ತಿರುವ ಚಿಕಿತ್ಸೆಯ ಗುಣಮಟ್ಟದ ಕುರಿತಂತೆ ಪ್ರಶ್ನಿಸಿ, ಉತ್ತಮ ಚಿಕಿತ್ಸೆ ದೊರೆಯುತ್ತಿರುವ ಬಗ್ಗೆ ಖಚಿತಪಡಿಸಿಕೊಂಡರು. 

        ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದೀಲೀಷ್ ಶಶಿ, ಕ್ರಿಮ್ಸ್‌ ನ ಡೀನ್ ಡಾ.ಪೂರ್ಣಿಮಾ, ಮುಖ್ಯ ಲೆಕ್ಕಾಧಿಕಾರಿ  ಹಾಗೂ ಆರ್ಥಿಕ ಸಲಹೆಗಾರ ಆನಂದಸಾ ಹಬೀಬ್ ಹಾಗೂ ಕ್ರಿಮ್ಸ್‌ ನ ಎಲ್ಲಾ ವೈದ್ಯಕೀಯ ವಿಭಾಗಗಳ ಮುಖ್ಯಸ್ಥರು ಇದ್ದರು. ಪ್ರತಿಯೊಬ್ಬರು ಕನ್ನಡ ಭಾಷೆ ಮತ್ತು , ನಾಡು, ನುಡಿ , ದೇಶಕ್ಕೆ ಶ್ರಮಿಸಬೇಕು, ವಿದ್ಯಾರ್ಥಿಗಳು ಸೋಲು-ಗೆಲುವಿಗೆ ಕುಗ್ಗದೆ ಗುರಿ ಕಡೆ ಪರಿಪೂರ್ಣತೆ ಇದ್ದಾಗ ಮಾತ್ರ ಯಶಸ್ಸು ಕಾಣಬಹುದು ಎಂದು ಹೇಳಿದರು. 

ನಿವೃತ್ತ ಉಪನ್ಯಾಸಕ ಶ್ರೀಧರ ಬಿ ನಾಯಕ ಕುವೆಂಪು ಅವರ ಬಗ್ಗೆ ಉಪನ್ಯಾಸ ನೀಡಿ, ರಾಷ್ಟ್ರಕವಿ ಕುವೆಂಪು ಅವರು ಕನ್ನಡ ಸಾಹಿತ್ಯದ ಮೇಲ್ಪರ್ವತ ಇದ್ದಂತೆ. ರಾಮಾಯಣ ದರ್ಶನಂ ಕೃತಿಗಾಗಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆಯಿತು. ಸಾಹಿತ್ಯವು ಕುವೆಂಪು ಅವರ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಅವರು ಸಾಹಿತ್ಯದಲ್ಲಿ ಬರೆದಂತೆ ಬದುಕಿನಲ್ಲಿ ಅಳವಡಿಸಿಕೊಂಡಿದ್ದರು, ಸಣ್ಣ ಕೆಥೆ, ಸಾಹಿತ್ಯ, ಕದಂಬರಿ, ನಾಟಕ ಮಹಾಕಾವ್ಯ, ಹೀಗೆ ಸಾಹಿತ್ಯದ ಎಲ್ಲಾ ಪ್ರಕಾರಗಳನ್ನು ಬರೆದಿದ್ದಾರೆ, ಅವರು ರಚಿಸಿದ ಕೃತಿಗಳಲ್ಲಿ ಪ್ರಕೃತಿ ಪೇಮ, ರಾಷ್ಟ್ರೀಯತೆ, ವೈಚಾರಿಕತೆ, ವೈಚಾರಿಕ ಚಿಂತನೆ ಕಾಣಬಹುದು ಎಂದರು. 

ಪ್ರತಿಯೊಬ್ಬರು ರಾಮಾಯಣ ದರ್ಶನವನ್ನು ಓದಬೇಕು. ಕುವೆಂಪು ಅವರ ವಿಶ್ವ ಮಾನವ ಸಂದೇಶವನ್ನು ಪ್ರತಿಯೊಬ್ಬರೂ ಪಾಲಿಸಿ, ಪೋಷಿಸಿಕೊಂಡು ಹೋಗಬೇಕು. ಅಲ್ಪಮಾನವರಾಗಿರುವಂತ ಮನುಷ್ಯರನ್ನು ವಿಶ್ವ ಮಾನವನಾಗಿ ಮಾಡುವುದು ಶಿಕ್ಷಣದ ಕರ್ತವ್ಯವಾಗಿದೆ. ನಾನು ನನ್ನದು ಎಂಬುದನ್ನು ಬಿಟ್ಟು ಮನುಕುಲ ಒಂದೇ ಎಂಬ ಮನೋಭಾವ ಬೆಳಸಿಕೊಳ್ಳಬೇಕು. ಕುವೆಂಪು ಅವರ ತತ್ವಾದರ್ಶಗಳು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ವಿಶ್ವ ಮಾನವನಾಗಲು ಸಾಧ್ಯ ಎಂದರು. 

ಕಾರ್ಯಕ್ರಮದಲ್ಲಿ  ದಿವೇಕರ್ ಪದವಿ ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲೆ ಗೀತಾ ತೋರ್ಕೆ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಲಲಿತಾ ಶೆಟ್ಟಿ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ವೆಂ ನಾಯ್ಕ ಸ್ವಾಗತಿಸಿದರು. ಉಪನ್ಯಾಸಕರಾದ ಸಂತೋಷ ಶೇಟ್ ನಿರೂಪಿಸಿದರು. ಗಣೇಶ್ ಭಟ್ ವಂದಿಸಿದರು.